Green crackers: ಹಸಿರು ಪಟಾಕಿ ಪತ್ತೆ ಹಚ್ಚುವುದು ಹೇಗೆ? ಇದರ ಬಳಕೆ ಹೇಗೆ? ಖರೀದಿದಾರರಿಗೆ ನೆರವಿಗೆ ಬಂತು ‘ಕ್ಯೂಆರ್ ಕೋಡ್’!!!

Karnataka news with the help of qr code buyers can find green crackers latest news

Green Fire crackers: ರಾಜ್ಯ ಸರ್ಕಾರ ಮದುವೆ, ಹಬ್ಬ, ರಾಜಕೀಯ ಸಮಾವೇಶ, ಶುಭ ಸಮಾರಂಭಗಳಲ್ಲಿ ಅಪಾಯಕಾರಿ ಪಟಾಕಿಗಳ ಬದಲಿಗೆ ಹಸಿರು ಪಟಾಕಿ ಬಳಕೆಗೆ ಮಾತ್ರವೆ ಅವಕಾಶ ನೀಡಿದ್ದು, ಈ ನಡುವೆ ಹಸಿರು ಪಟಾಕಿಯ(Green Fire crackers) ಬಗ್ಗೆ ತಿಳಿಯದ ಮಂದಿ ಆತಂಕಕ್ಕೀಡಾಗಿದ್ದಾರೆ.

Green crackers

ಅಷ್ಟಕ್ಕೂ ಹಸಿರು ಪಟಾಕಿ ಎಂದರೇನು?
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಹಾಗೂ ಎನ್ಇಇಆರ್ಐನ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಹಸಿರು ಪಟಾಕಿಯಲ್ಲಿ ಲೀಥಿಯಂ, ಆರ್ಸೆನಿಕ್, ಬೇರಿಯಂ ಮತ್ತು ಸತುವಿನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಕೆ ಮಾಡಲಾಗುವುದಿಲ್ಲ.

ಹಸಿರು ಪಟಾಕಿಯನ್ನು ಹೇಗೆ ಗುರುತಿಸಬೇಕು?
ಶೆಲ್ ಗಾತ್ರಕ್ಕಿಂತಲೂ ಕಡಿಮೆ ಗಾತ್ರದಲ್ಲಿ ಹಸಿರು ಪಟಾಕಿಗಳನ್ನು ಮಾಡಲಾಗಿರುತ್ತದೆ. ಪಟಾಕಿಗಳ ಪ್ಯಾಕ್ ಮೇಲೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (CSIR), ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ವಿಶಿಷ್ಟ ಹಸಿರು ಲೋಗೋ ಇರಲಿದೆ. ಈ ಮೂಲಕ ಗುರುತಿಸಬಹುದಾಗಿದ್ದು, ಇದರ ಜೊತೆಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಕೂಡ ಇರಲಿದೆ.

ಹಸಿರು ಪಟಾಕಿ ಉತ್ಪಾದನೆಗೆ ಸರ್ಕಾರ ದೇಶದ 230 ಕಂಪನಿಗಳಿಗೆ ಮಾತ್ರ ಅನುಮತಿ ನೀಡಿದ್ದು, ಇದರ ಜೊತೆಗೆ ಈ ಪಟಾಕಿಯನ್ನು ಮಾರಾಟ ಮಾಡಲು ಪರವಾನಿಗೆ ಅವಶ್ಯಕ. ಬೀದಿ ಬದಿ ವ್ಯಾಪಾರಿಗಳಿಂದ ಹಸಿರು ಪಟಾಕಿಗಳನ್ನು ಖರೀದಿ ಮಾಡದೇ ಪರವಾನಗಿಯಿರುವ ಮಾರಾಟಗಾರರಿಂದ ಮಾತ್ರವೆ ಖರೀದಿ ಮಾಡಬೇಕು. ಗ್ರಾಹಕರು ಪ್ಲೇಸ್ಟೋರ್ ಮೂಲಕ CSIR, NEERI ಗ್ರೀನ್ ಕ್ಯೂಆರ್ ಕೋಟ್ ಅಪ್ಲಿಕೇಶನ್ ಬಳಕೆ ಮಾಡಿಕೊಂಡು ಸ್ಕ್ಯಾನರ್ ಅನ್ನು ಡೌನ್ಲೋಡ್ ಮಾಡಿ ಅದರ ಮೂಲಕ ಗ್ರಾಹಕರು ಹಸಿರು ಪಟಾಕಿಗಳನ್ನು ಗುರುತಿಸಬಹುದಾಗಿದೆ. SWAS, SAFAL ಮತ್ತು STAR ಎಂಬ ಮೂರು ವರ್ಗದಲ್ಲಿ ಹಿಸಿರು ಪಟಾಕಿಗಳು ಲಭ್ಯವಾಗಲಿದೆ.

ಇದನ್ನೂ ಓದಿ: Kerala High Court:ಹೆತ್ತ ತಾಯಿ ನೀಡಿದಳು ಮಗಳ ಮೇಲೆ ಅತ್ಯಾಚಾರ ನಡೆಸಲು ಅವಕಾಶ! ʼತಾಯ್ತನಕ್ಕೆ ಅಪಮಾನʼ ಎಂದ ಹೈಕೋರ್ಟ್‌!!!

Leave A Reply

Your email address will not be published.