Husband and wife Fight: ಹೆಂಡತಿ ಜೊತೆ ಜಗಳವಾದ್ರೆ ತಕ್ಷಣ ಈ ಟ್ರಿಕ್ಸ್ ಯೂಸ್ ಮಾಡಿ, ಆಮೇಲೆ ಆಗೋದೇ ಬೇರೆ !

Lifestyle husband and wife relationship tips try this tips when you fight with your wife

Husband and wife Fight: ಗಂಡ ಹೆಂಡತಿ (husband and wife )ಎಂದರೆ ಅವರಿಬ್ಬರ ಸಂಬಂಧ ಹಾಲು ಜೇನಿನಂತೆ ಇರಬೇಕು. ಹಾಗೆಯೇ ಇರಲು ಬಯಸುತ್ತಾರೆ ಸಹ. ಆದ್ರೆ ಕೆಲವರ ಜೀವನದಲ್ಲಿ ಗಂಡ ಹೆಂಡತಿ ಜಗಳ (Husband and wife Fight)ಮುಗಿಯೋ ಕಥೆಯಲ್ಲ ಅನ್ನುತ್ತಾರೆ, ಇದೆಲ್ಲಾ ಬಿಟ್ಟು ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತು ನಿಜ ಅನ್ನೋದು ಅಷ್ಟೇ ಸತ್ಯ. ಕೆಲವೊಮ್ಮೆ ಹೆಂಡತಿಯನ್ನು ಮ್ಯಾನೇಜ್ ಮಾಡೋದು ಸ್ವಲ್ಪ ಕಷ್ಟವೇ ಸರಿ. ಹಾಗಂತ ಸುಮ್ನೇ ಬಿಡೋಕಾಗಲ್ಲ, ಅವರ ಮೇಲಿನ ಕೋಪವನ್ನು ಗಂಡಂದಿರು ಸರಿ ಮಾಡಬೇಕು.

ಕೇವಲ ಸಣ್ಣ ಸಣ್ಣ ವಿಚಾರಗಳಿಗೆ ಗಂಡ ಹೆಂಡತಿ ದೂರವಾಗುತ್ತಿರುವುದು ದುಃಖದ ಸಂಗತಿಯೇ ಸರಿ. ಇಂತಹ ಸಂದರ್ಭವನ್ನು ನಾವು ಬಹಳಷ್ಟು ನೋಡುತ್ತಿದ್ದೇವೆ. ಅಂದರೆ ಇತ್ತೀಚಿನ ಯುವ ಜನತೆಯಲ್ಲಿ ತಾಳ್ಮೆ ಬಹಳ ಕಡಿಮೆ ಇದೆ. ಇದರಿಂದ ಜಗಳಗಳು ಮತ್ತು ಮನಸ್ಥಾಪಗಳು ಸಂಬಂಧಗಳಲ್ಲಿ ಕಂಡುಬಂದು ಜೀವನವನ್ನು ಅರ್ಧಕ್ಕೆ ಮುಗಿಸುವುದು ಇದೆ. ಆದರೆ ಯಾವುದೇ ಸಂದರ್ಭದಲ್ಲಿ ಜಗಳ ಆದಾಗ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ತಾಳ್ಮೆಯಿಂದ ಇದ್ದು ಪರಿಸ್ಥಿತಿಯನ್ನು ಸ್ವಲ್ಪ ತಿಳಿಯಾಗುವವರೆಗೆ ಬಿಟ್ಟುಬಿಟ್ಟರೆ ದೂರಾಗುವ ಪ್ರಶ್ನೆಯೇ ಬರುವುದಿಲ್ಲ. ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಜಗಳ ಆದಾಗ ಸಂದರ್ಭವನ್ನು ಹೇಗೆ ನಿಭಾಯಿಸಬೇಕು ಎಂಬ ಕೆಲವು ಸಲಹೆ ಇಲ್ಲಿ ತಿಳಿಸಲಾಗಿದೆ.

ನಿಮ್ಮ ಮಾತಿನ ಬಗ್ಗೆ ಹಿಡಿತವಿರಲಿ:
ಜಗಳ ಆಡುವ ಸಂದರ್ಭದಲ್ಲಿ ಬರುವಂತಹ ಕೋಪ ಬೇರೆ ಬೇರೆ ತರಹದ ಮಾತುಗಳನ್ನು ಬಾಯಿಂದ ಹೊರಡಿಸುತ್ತದೆ. ಅದರ ಬದಲು ಮಾತನಾಡುವಾಗ ಸ್ವಲ್ಪ ಆಲೋಚಿಸಿ ಮಾತನಾಡಿ.
ಏಕೆಂದರೆ ನೀವು ಮಾತನಾಡುವ ಪದಗಳು ನಿಮ್ಮ ಜೀವನ ಸಂಗಾತಿಯನ್ನು ಮತ್ತಷ್ಟು ಕೆಣಕಿಸಬಾರದು. ಹಾಗಾಗಿ ನಿಮ್ಮ ಮಾತುಗಳ ಬಗ್ಗೆ ಗಮನವಿರಲಿ ಮತ್ತು ಹಿಡಿತವಿರಲಿ.

ಚಿಕ್ಕ ವಿಷಯ ದೊಡ್ಡದು ಮಾಡಬೇಡಿ:
ಕೋಪ ಬಂದಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಯಾರಾದರೂ ಒಬ್ಬರು ಸೋಲಲೇಬೇಕು. ಹಾಗಾಗಿ ಜಗಳ ಸಂದರ್ಭದಲ್ಲಿ ಗಂಡ ಸ್ವಲ್ಪ ಶಾಂತವಾದರೆ ಅಥವಾ ಸೈಲೆಂಟ್ ಆಗಿ ಬಿಟ್ಟರೆ ಹೆಂಡತಿಯ ಕೋಪ ಸ್ವಲ್ಪ ಹೊತ್ತಿ ನಲ್ಲಿ ಕಡಿಮೆ ಯಾಗುತ್ತದೆ ಮತ್ತು ಪರಿಸ್ಥಿತಿ ತಿಳಿಯಾಗುತ್ತದೆ. ಹಾಗಾಗಿ ಚಿಕ್ಕ ವಿಷಯವನ್ನು ದೊಡ್ಡದು ಮಾಡಲು ಹೋಗಲೇ ಬಾರದು.​

ನಿಮ್ಮ ನಡೆ ವಿಚಿತ್ರವಾಗಬಾರದು:
ಮೊದಲೇ ನಿಮ್ಮ ಹೆಂಡತಿ ಕೋಪದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಕೋಪ ಹೆಚ್ಚಿಸುವ ಹಾಗೆ ನಿಮ್ಮ ನಡೆ ಇರಲೇಬಾರದು. ಕೋಪ ಬಂದಾಗ ಸಾಮಾನ್ಯವಾಗಿ ಎದುರಿಗಿರುವ ವ್ಯಕ್ತಿಯನ್ನು ನಿಂದಿಸುವುದು ಸಹಜ.
ಒಂದು ವೇಳೆ ನಿಮ್ಮ ಜಗಳದಲ್ಲಿ ಕೂಡ ನಿಮ್ಮ ಹೆಂಡತಿ ನಿಮ್ಮನ್ನು ನಿಂದಿಸುತ್ತಿದ್ದರೆ ತಾಳ್ಮೆಯಿಂದ ಸುಮ್ಮನಿದ್ದು ಬಿಡಿ. ಇದು ತುಂಬಾ ಮಿತಿಮೀರಿದಾಗ ಮಾತ್ರ ಸಮಾಧಾನದಿಂದ ಬಿಡಿಸಿ ಹೇಳುವ ಪ್ರಯತ್ನ ಮಾಡಿ.​

ಜಗಳ ತಾರಕಕ್ಕೆ ಹೋದಾಗ ಎದ್ದು ಹೋಗಿಬಿಡಿ:
ಕೆಲವೊಂದು ವಿಚಾರಗಳು ಜಗಳದ ಪರಿಸ್ಥಿತಿಯನ್ನು ಮತ್ತಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತವೆ. ಇಂತಹ ಸಂದರ್ಭದಲ್ಲಿ ಜಗಳ ಇನ್ನು ಸ್ವಲ್ಪ ಹೊತ್ತು ಜೋರಾಗಿ ಮುಂದುವರೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀವು ಒಂದು ವೇಳೆ ಇಂತಹ ಪರಿಸ್ಥಿತಿಯಲ್ಲಿ ಇದ್ದರೆ, ಅಲ್ಲಿಂದ ಪಲಾಯನ ಮಾಡುವುದು ಉತ್ತಮ. ಪರಿಸ್ಥಿತಿ ತಣ್ಣಗಾದ ಮೇಲೆ ವಾಪಸ್ ಬಂದರೆ ಆಯಿತು.

ನಿಮ್ಮ ಸಂಗತಿಯ ಜೊತೆ ಮೊದಲೇ ಮಾತನಾಡಿ:
ಕೆಲವರಿಗೆ ತಾಳ್ಮೆ ಹೆಚ್ಚಾಗಿರುತ್ತದೆ, ಇನ್ನು ಕೆಲವರಿಗೆ ಕೋಪ ಹೆಚ್ಚಾಗಿ ರುತ್ತದೆ. ಅಂತಹವರಿಗೆ ಒಂದು ವೇಳೆ ನೀವು ಸಣ್ಣದಾಗಿ ಏನಾದರೂ ಹೇಳಿದರೆ ಅದು ಅವರ ಕೋಪವನ್ನು ಮತ್ತಷ್ಟು ಕೆರಳಿಸುತ್ತದೆ.
ಹಾಗೆಂದು ನೀವು ಎಲ್ಲವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದರ ಬಗ್ಗೆ ನಿಮ್ಮ ಸಂಗಾತಿಗೆ ಮೊದಲೇ ಹೇಳಿ ಬಿಡಿ. ಆಗ ಮುಂದಿನ ದಿನಗಳಲ್ಲಿ ಜಗಳ ದೊಡ್ಡದಾಗುವ ಪ್ರಸಂಗವೇ ಬರುವುದಿಲ್ಲ.​

ನಿಮ್ಮ ಸಂಗಾತಿ ಶಾಂತವಾಗಿರುವ ಸಂದರ್ಭದಲ್ಲಿ ಮಾತನಾಡಿ:
ಯಾವಾಗಲೂ ನಿಮ್ಮ ಬಾಳ ಸಂಗಾತಿಯ ಮನಸ್ಥಿತಿ ಒಂದೇ ತರಹ ಇರುವುದಿಲ್ಲ. ಯಾವಾಗ ಅವರು ಒಳ್ಳೆಯ ಮೂಡ್ನ ಲ್ಲಿರುತ್ತಾರೆ ಅಂತಹ ಸಂದರ್ಭವನ್ನು ಉಪಯೋಗಿಸಿಕೊಂಡು ಜಗಳಕ್ಕೆ ಕಾರ ಣವಾಗಿರುವ ವಿಚಾರವನ್ನು ಸಮಾಧಾನದಿಂದ ಚರ್ಚೆ ಮಾಡಿ ಮತ್ತು ಬಂದಿರುವ ಸಮಸ್ಯೆಯನ್ನು ಬೇಗನೆ ಬಗೆಹರಿಸಿ ಕೊಳ್ಳಿ.

ಕೋಪ ಬಂದಂತಹ ಸಂದರ್ಭದಲ್ಲಿ ಜಗಳ ಆಡಿ ಆನಂತರದಲ್ಲಿ ನಿಮ್ಮ ಸಂಗಾತಿ ಅದರ ಬಗ್ಗೆ ಕೊರಗುತ್ತಾರೆ ಮತ್ತು ಒಳಗೊಳಗೆ ನೋವು ಅನುಭವಿಸುತ್ತಾರೆ. ಹಾಗಾಗಿ ಇದು ಮುಂದಿನ ದಿನಗಳಲ್ಲಿ ಪದೇ ಪದೇ ನಡೆದರೆ ನಿಮ್ಮ ಸಂಗಾತಿಗೆ ಮಾನಸಿಕ ಒತ್ತಡ ಮತ್ತು ಮಾನಸಿಕ ಖಿನ್ನತೆ ಎದುರಾಗಬಹುದು. ಹೀಗಾಗಿ ಸಾಧ್ಯವಾದಷ್ಟು ನಿಮ್ಮ ಸಂಗಾತಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿ .

ಇದನ್ನೂ ಓದಿ: School timing : ಶಾಲಾ ಸಮಯದ ಕುರಿತು ಶಿಕ್ಷಣ ಇಲಾಖೆ ನೀಡಿದೆ ಮಹತ್ವದ ಮಾಹಿತಿ!!!

Leave A Reply

Your email address will not be published.