Annabhagya Scheme: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ನ್ಯೂಸ್! ಅನ್ನಭಾಗ್ಯ ಹಣ ಬಂದಿದೆಯೇ? ಈ ರೀತಿ ಚೆಕ್ ಮಾಡಿ
Karnataka news Congress guarantee annabhagya scheme money check details in kannada

Annabhagya Scheme: ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲು ಹಣ ನೀಡುವ ವ್ಯವಸ್ಥೆಗೆ ರಾಜ್ಯ ಸರಕಾರ ಚಾಲನೆ ನೀಡಿದ್ದು, ಇದೀಗ ಖುಷಿ ಸುದ್ದಿಯೊಂದು ರಾಜ್ಯ ಸರಕಾರ ಜನತೆಗೆ ನೀಡಿದೆ. ಅದೇನೆಂದರೆ ಸೆಪ್ಟೆಂಬರ್ ತಿಂಗಳ ಹಣ ಪಡಿತರರ ಖಾತೆಗೆ ವರ್ಗಾವಣೆಯಾಗಿದೆ.
ಮೊದಲಿಗೆ ಈ ಲಿಂಕ್ ಬಳಸಿ ಕರ್ನಾಟಕ ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಭೇಟಿ ನೀಡಿ. ಅನ್ನಭಾಗ್ಯದ (Annabhagya Scheme)ಅಕ್ಕಿ ಹಣ ನಿಮ್ಮ ಖಾತೆಗೆ ಬಂದಿದೆಯೋ ಇಲ್ಲವೋ ಈ ರೀತಿ ಚೆಕ್ ಮಾಡಿ. ಯಾವ ರೀತಿ? ಇಲ್ಲಿದೆ ಮಾಹಿತಿ.
ಆಹಾರ ಇಲಾಖೆಯ ವೆಬ್ಸೈಟ್ಗೆ https://ahara.kar.nic.in/ ಲಾಗಿನ್ ಮಾಡಿ
ಇದರಲ್ಲಿ ನೀವು ಸ್ಟೇಟಸ್ ಆಫ್ ಡಿಬಿಟಿ ಅನ್ನು ಆಯ್ಕೆ ಮಾಡಿ (https://ahara.kar.nic.in/status1/status_of_dbt_new.aspx)
ನಂತರ ಅಲ್ಲಿ ನಿಗದಿತ ಕಾಲಂನಲ್ಲಿ ರೇಷನ್ ಕಾರ್ಡ್ನ ನಂಬರ್ ಕೇಳುತ್ತದೆ. ಅದನ್ನು ನಮೂದಿಸಿ
ನಂತರ ರೇಷನ್ಕಾರ್ಡ್ನ ಮೇಲ್ಗಭಾಗದಲ್ಲಿ ಕಾಣುವ ಆರ್ ಸಿ ನಂಬರ್ ನಮೂದಿಸಿ, ಮುಂದುವರೆಯಿರಿ. ಆಯ್ಕೆ ಸೆಲೆಕ್ಟ್ ಮಾಡಿ.
ನಂತರದ ಪೇಜ್ನಲ್ಲಿ ನಿಮ್ಮ ಅಕೌಂಟ್ಗೆ ಹಣ ಜಮಾ ಆಗಿದೆಯೇ, ಹಣ ಬರದಿದ್ದರೆ ಯಾವ ಕಾರಣಕ್ಕೆ ಬಂದಿಲ್ಲ ಎಂಬ ಮಾಹಿತಿ ಅಲ್ಲಿ ದೊರಕಲಿದೆ.