Yogi adityanath: ರಾಮ ಭೂಮಿಯನ್ನೇ ಪಡೆದಿದ್ದೇವೆ, ಇನ್ನೂ…… !! ಯೋಗಿ ಮಾತಿಗೆ ಬೆಚ್ಚಿಬಿದ್ದ ಪಾಕಿಸ್ತಾನ

Yogi Adityanath's statement has shocked Pakistan

Yogi adityanath: ರಾಷ್ಟ್ರದಲ್ಲಿ ಕೆಲ ಸಮಯಗಳಿಂದ ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವ ವಿಚಾರ ಭಾರೀ ಚರ್ಚೆಯಾಗುತ್ತಿದೆ. ರಕ್ಷಣಾ ಸಚಿವರಾದಿಯಾಗಿ ಕೆಲವು ಕೇಂದ್ರ ಸಚಿವರು ಪಾಕಿಸ್ತಾನವು ಆಕ್ರಮಿಸಿರುವ ಕಾಶ್ಮೀರದ ಭಾಗವನ್ನು ಸದ್ಯದಲ್ಲೇ ಮರಳಿ ಪಡೆಯುತ್ತೇವೆ ಎಂಬ ಕೆಲವು ಅಚ್ಚರಾಯ ಹೇಳಿಕೆಗಳನ್ನು ನೀಡುತ್ತಿದ್ದರು. ಇದೀಗ ಈ ಬೆನ್ನಲ್ಲೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್(Yogi adityanath) ಅವರು ನೀಡಿರವ ಹೇಳಿಕೆಯೊಂದು ಪಾಕಿಸ್ತಾನವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.

 

ಹೌದು, ಉತ್ತರ ಪ್ರದೇಶದ ಸಿಎಂ ಆಗಿರುವ ಯೋಗಿ ಆದಿತ್ಯನಾಥ ಎಂದರೆ ಎಲ್ಲಾ ರೀತಿಯ ದುಷ್ಟರಿಗೂ ಒಂದು ರೀತಿಯ ನಡುಕವಿದ್ದಂತೆ. ಬುಲ್ಡೋಜರ್ಗಳ ಮೂಲಕ ಇರಬಹುದು, ಎನ್ ಕೌಂಟರ್ಗಳ ಮೂಲಕ ಇರಬಹುದು ಕೆಟ್ಟ ದುಷ್ಟ ಶಕ್ತಿಗಳಿಗೆ ನಡಕವನ್ನುಂಟು ಮಾಡಿದಂತಹ ಒಬ್ಬ ಮಾಸ್ ಲೀಡರ್ ಎಂದು ಹೇಳಿದರೆ ತಪ್ಪಾಗಲಾರದು. ಅವರು ಆಗಾಗ ಎಂತವರೂ ಒಮ್ಮೆ ಬೆವರಿ ನೀರಾಗುವಂತಹ ಹೇಳಿಕೆಗಳನ್ನೇ ನೀಡುತ್ತಾರೆ. ಅಂತೆಯೇ ಇದೀಗ ಪಾಕ್ ಆಕ್ರಮಿತ ಪ್ರದೇಶದ ಕುರಿತು ಗುಡುಗಿರುವ ಅವರು 500 ವರ್ಷಗಳ ಬಳಿರ ಶ್ರೀರಾಮ ಜನ್ಮಭೂಮಿಯನ್ನು ವಾಪಸ್ ಪಡೆದವರಿಗೆ ಸಿಂಧ್ ಪ್ರಾಂತ್ಯ ಮರಳಿ ಪಡೆಯಲಾಗದೆ? ಎಂದು ಹೇಳಿ ಪಾಕಿಸ್ಥನಕ್ಕೆ ನಡುಕ ಹುಟ್ಟಿಸಿದ್ದಾರೆ.

ಅಂದಹಾಗೆ ಉತ್ತರ ಪ್ರದೇಶದಲ್ಲಿ ಆಯೋಜಿಸಿರುವ 2 ದಿನಗಳ ರಾಷ್ಟ್ರೀಯ ಸಿಂಧ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾರತದ ಭವ್ಯ ಪರಂಪರೆ ಕುರಿತು ಮಾತನಾಡಿದ್ದಾರೆ. ಸನಾತನ ಧರ್ಮ, ಸಂಸ್ಕೃತಿ ಸಂರಕ್ಷಿಸಿ ಬೆಳೆಸುವಲ್ಲಿ ಸನಾತನ ಧರ್ಮದ ಪಾತ್ರದ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಸದ್ಯ ಪಾಕಿಸ್ತಾನದ ಭಾಗವಾಗಿರುವ ಸಿಂಧ್ ಪ್ರಾಂತ್ಯವನ್ನು ಭಾರತ ಮರಳಿ ಪಡೆಯದೇ ಇರಲು ಯಾವುದೇ ಕಾರಣಗಳಿಲ್ಲ ಎಂದಿದ್ದಾರೆ. ಅಲ್ಲದೆ ಸದ್ಯದಲ್ಲೇ POK ಯನ್ನು ಮರಳಿ ಪಡೆಯುತ್ತೇವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

Leave A Reply

Your email address will not be published.