Refrigerator Compressor: ಫ್ರಿಡ್ಜ್ ನ ಕಂಪ್ರೆಸರ್ ದಿಢೀರ್ ಸ್ಫೋಟ; ಒಂದೇ ಕುಟುಂಬದ ಐವರ ದಾರುಣ ಸಾವು!!!!

Refrigerator Compressor explosion where 5 members died in Punjab

Death News: ಪಂಜಾಬ್‌ನ ಜಲಂಧರ್‌ನ ಮನೆಯೊಂದರಲ್ಲಿ ಫ್ರಿಡ್ಜ್‌ನ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಅಸುನೀಗಿದ(Death)ಘಟನೆ ವರದಿಯಾಗಿದೆ.

ಈ ದುರ್ಘಟನೆ ಆದಿತ್ಯವಾರ ರಾತ್ರಿ ನಡೆದಿದೆ ಎನ್ನಲಾಗಿದ್ದು, ಸ್ಫೋಟದ ಪರಿಣಾಮ ಇಡೀ ಮನೆಗೆ ಬೆಂಕಿ ಹೊತ್ತಿದೆ. ಈ ಘಟನೆ ವೇಳೆ ಅಸುನೀಗಿದ ಮೃತರನ್ನು ಯಶಪಾಲ್ ಘಾಯ್ (70), ರುಚಿ ಘಾಯ್ (40), ಮನ್ಶಾ (14), ದಿಯಾ (12) ಮತ್ತು ಅಕ್ಷಯ್ (10) ಎಂದು ಗುರುತಿಸಲಾಗಿದೆ. ಸ್ಫೋಟವಾಗಲು ನೈಜ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ವಿಧಿವಿಜ್ಞಾನ ತಜ್ಞರ ತಂಡವನ್ನು ಮಾದರಿಗಳನ್ನು ಸಂಗ್ರಹಿಸಲು ಸ್ಥಳಕ್ಕೆ ಕರೆಸಲಾಗಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

 

ಇದನ್ನು ಓದಿ: Sowjanya News: ಸೌಜನ್ಯಾ- 11 ನೇ ವರ್ಷದ ಪುಣ್ಯಸ್ಮರಣೆ: ಛಲಗಾತಿ ಅಮ್ಮ ಕುಸುಮಾವತಿಗೂ ನಿರ್ಭಯಾ ತಾಯಿಗೂ ಹೋಲಿಕೆ ಮಾಡುತ್ತಿರೋ ಜನ !

Leave A Reply

Your email address will not be published.