Drunk and Drive: ಬೈಕ್‌ ಇಂಡಿಕೇಟರ್‌ ನಿಂದ ಉಳಿಯಿತು ಕುಡುಕನ ಪ್ರಾಣ !! ಅಷ್ಟಕ್ಕೂ ಆಗಿದ್ದೇನು ?!

Chikkamagaluru drunk and drive case bike indicator saved drunker rider life intresting news

Drunk and Drive : ಕಂಠ ಪೂರ್ತಿ ಎಣ್ಣೆ ಕುಡಿದರೆ ವಾಸ್ತವ ಪ್ರಪಂಚದ ಆಗು ಹೋಗುಗಳ ಪರಿವೇ ಇರುವುದಿಲ್ಲ ಎನ್ನುವ ವಿಚಾರ ಗೊತ್ತಿರುವಂತದ್ದೆ!!!. ಆದರೆ ಇಲ್ಲೊಬ್ಬ ಕುಡಿದ ಮತ್ತಿನಲ್ಲಿ(Drunk and Drive)ಬೈಕ್ ಓಡಿಸಲು ಆಗದೇ ಅದೃಷ್ಟವಶಾತ್ ಬೈಕ್‌ ಇಂಡಿಕೇಟರ್‌ ನಿಂದ ಜೀವ ಉಳಿದ ಅಪರೂಪದ(Bike indicator saves drunk riders life) ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.

ಭಾನುವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಗ್ರಾಮದ ಸಮೀಪ ಬರುತ್ತಿದ್ದ ಕೆಲ ಸವಾರರಿಗೆ ಕೊಂಚ ದೂರದಲ್ಲಿ ಇಂಡಿಕೇಟರ್‌ ಆನ್‌ ಆಗಿ ಕೆಳಗೆ ಬಿದ್ದಿದ್ದ ಬೈಕ್‌ವೊಂದು ಕಂಡಿದೆ. ಹತ್ತಿರ ಹೋಗಿ ನೋಡಿದಾಗ ಬೈಕ್ ಒಂದು ಬದಿಗೆ ಬಿದ್ದಿದ್ದರೆ, ವ್ಯಕ್ತಿ ಮತ್ತೊಂದು ಬದಿಗೆ ಬಿದ್ದಿದ್ದ. ಹೀಗಾಗಿ, ನೋಡಿದವರು ಆಕ್ಸಿಡೆಂಟ್ ಆಗಿದೆ ಎಂದುಕೊಂಡು ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ.

ಆ್ಯಂಬುಲೆನ್ಸ್‌ ತನ್ನ ಸಮೀಪಿಸುತ್ತಿದ್ದಂತೆ ಧಡಕ್ಕನೆ ಎದ್ದು ಕುಳಿತ ಸವಾರನನ್ನು ಕಂಡು ಇತರರು ಗಾಬಾಯಿಯಾಗಿದ್ದು,ಆತನ ಹತ್ತಿರ ಹೋಗಿ ವಿಚಾರಿಸಿದಾಗ ಕಂಠ ಪೂರ್ತಿ ಕುಡಿದು ಬೈಕ್‌ ಓಡಿಸಲು ಆಗದೆ ರಸ್ತೆಯಲ್ಲೇ ಮಲಗಿ ಬಿಟ್ಟಿದ್ದ ಎಂಬ ವಿಚಾರ ಬಯಲಾಗಿದೆ. ಹಾಸನದಿಂದ ಸಂಬಂಧಿಕರ ಮನೆಗೆ ಬಂದಿದ್ದ ಸವಾರ ಕುಡಿದ ಮತ್ತಿನಲ್ಲಿ ಬೈಕ್ ಓಡಿಸಲು ಮುಂದಾಗಿದ್ದು, ಆದರೆ ಬೈಕ್‌ ಕಂಟ್ರೋಲ್‌ಗೆ ಸಿಗದೆ ಇದ್ದ ಹಿನ್ನೆಲೆ ಅತ್ತಿಂದಿತ್ತ ಓಡಿಸಿ ಬೈಕ್ ರಸ್ತೆ ಪಕ್ಕಕ್ಕೆ ಬಿದ್ದಿದೆ. ಬೈಕ್‌ ಪಕ್ಕದಲ್ಲೇ ಕುಡುಕ ಸವಾರ ಹಾಯಾಗಿ ಮಲಗಿದ್ದಾನೆ.

ಪಕ್ಕದಲ್ಲಿದ್ದ ಬೈಕ್‌ ಇಂಡಿಕೇಟರ್‌ ಆನ್‌ ಆಗಿದ್ದ ಪರಿಣಾಮ ಈತನ ಜೀವ ಉಳಿದಿದ್ದು, ಆ ಕತ್ತಲಿಲ್ಲ ಒಂದು ವೇಳೆ ಇಂಡಿಕೇಟರ್‌ ಆನ್‌ ಆಗಿರಲಿಲ್ಲವೆಂದರೆ ಯಾವುದಾದರೂ ವಾಹನದಿಂದ ಅಪಘಾತವಾಗುವ ಸಂಭವನೀಯತೆ ಹೆಚ್ಚಿತ್ತು. ಅದೃಷ್ಟವಶಾತ್ ಬೈಕ್ ಇಡಿಕೇಟರ್‌ನಿಂದ ಕುಡುಕನೊಬ್ಬನ ಉಳಿದಿದೆ. ಈ ಪ್ರಕರಣದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬಣಕಲ್ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಬೈಕ್ ಸವಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: ನಾಯಿ ಅತ್ತರೆ ಅಶುಭದ ಸಂಕೇತ ?! ಯಾಕೆ ಗೊತ್ತಾ?

Leave A Reply

Your email address will not be published.