Mangalore Airport: ಅದಾನಿ ತೆಕ್ಕೆ ಸೇರಲಿದೆ ಮಂಗಳೂರು ವಿಮಾನ ನಿಲ್ದಾಣ – ಇಲ್ಲಿದೆ ನೋಡಿ ಸಂಪೂರ್ಣ ವಿವರ

Dakshina Kannada news Mangalore Airport Take Over By Adani Group Month End latest news

Mangalore Airport: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ‌ನಿಲ್ದಾಣ ಸಂಪೂರ್ಣವಾಗಿ ಅದಾನಿ ಕೈ ಪಾಲಾಗುವ ದಿನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಹೌದು, ಅಕ್ಟೋಬರ್ 31ರಿಂದ ಇಡೀ ಏರ್ ಪೋರ್ಟ್ ಅದಾನಿ ಗ್ರೂಪ್ ಪಾಲಾಗಲಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಜೊತೆಗಿನ ಒಪ್ಪಂದ ಕೊನೆಗೊಳ್ಳಲಿದೆ. ಈ ಮೂಲಕ ಸರ್ಕಾರಿ ಸ್ವಾಮ್ಯದ ಉದ್ಯಮ ಈಗ ಸಂಪೂರ್ಣವಾಗಿ ಖಾಸಗಿ ಪಾಲಾಗಲಿದೆ. ಮತ್ತು ಪ್ರಾಧಿಕಾರದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳೂ ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ವರ್ಗಾವಣೆಯಾಗಿದ್ದಾರೆ. ಅಲ್ಲದೇ ಇನ್ನು ಮುಂದೆ ಈ ವಿಮಾನ ನಿಲ್ದಾಣದ ಎಲ್ಲ ಆಗು ಹೋಗುಗಳು ಅದಾನಿ ಗುಂಪಿನಿಂದಲೇ ನಡೆಯಲಿದೆ.

ಮಂಗಳೂರು ವಿಮಾನ ನಿಲ್ದಾಣ ದ (Mangalore Airport) ಬಳಿಕ ದೇಶದ 6 ವಿಮಾನ ನಿಲ್ದಾಣಗಳು ಈಗ ಆದಾನಿ ಗ್ರೂಪ್ ತೆಕ್ಕೆಗೆ ಸೇರಿದೆ. ಇನ್ನುಮುಂದೆ ಮಂಗಳೂರಿನಿಂದ ವಿಮಾನಗಳ ಓಡಾಟ ಎಲ್ಲವೂ ಅದಾನಿ ಗ್ರೂಪ್ ಮೂಲಕವೇ ನಡೆಯಲಿದೆ.

ಒಪ್ಪಂದ ಪ್ರಕಾರ ಮೂರು ವರ್ಷಗಳ ವರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) ಅರ್ಧದಷ್ಟು ಸಿಬ್ಬಂದಿ ಹಾಗೂ ಅದಾನಿ ಸಿಬ್ಬಂದಿ ಜತೆಯಾಗಿಯೇ ಕೆಲಸ ಮಾಡಬೇಕಿತ್ತು. ಇದೀಗ ಒಪ್ಪಂದದ ಅವಧಿ ಅ.30ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಇಡೀ ವಿಮಾನ ನಿಲ್ದಾಣ ಆಡಳಿತ ಅದಾನಿ ತೆಕ್ಕೆಗೆ ಹೋಗುತ್ತಿದೆ.

ಸದ್ಯ ಅದಾನಿ ಗ್ರೂಪ್ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದ್ದ 97 ಮಂದಿ ಪ್ರಾಧಿಕಾರದ ಸಿಬ್ಬಂದಿಯನ್ನು ಬೇರೆ ಕಂಪೆನಿಗಳಿಗೆ ವರ್ಗಾವಣೆ ಮಾಡಲಾಗಿದೆ. ಆದಾನಿ ಗ್ರೂಪ್ ಮಂಗಳೂರು ವಿಮಾನ ನಿಲ್ದಾಣವನ್ನು ಕೈಗೆತ್ತಿಕೊಂಡ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯವೂ ನಡೆದಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಶ್ರಾಂತಿ ಹಾಲ್, ಪ್ರವೇಶ, ನಿರ್ಗಮನ ದ್ವಾರ, ಟ್ಯಾಕ್ಸಿ ಚಾಲಕರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.

ಇದನ್ನೂ ಓದಿ: ಈ ಯಜಮಾನಿಯರಿಗೆ ‘ಗೃಹಲಕ್ಷ್ಮೀ’ ಹಣ ಸಿಗೋದು ಬಹುತೇಕ ಡೌಟ್ !! ಅಚ್ಚರಿಯ ಕಾರಣ ಬಿಚ್ಚಿಟ್ಟ ಸಚಿವೆ ಹೆಬ್ಬಾಳ್ಕರ್

ಏರ್‌ಟ್ರಾಫಿಕ್ ಕಂಟ್ರೋಲ್(ಎಟಿಸಿ), ಕಾರ್ಗೊ ಹಾಗೂ ಸಿಎನ್‌ಎಸ್(ಕಮ್ಯುನಿಕೇಷನ್ ನೇವಿಗೇಷನ್ ಅಂಡ್ ಸರ್ವೆಲೆನ್ಸ್) ಮಾತ್ರ ಅದಾನಿ ಹೊರತಾಗಿ ಇರಲಿದೆ. ಆದರೆ ವಿಮಾನ ನಿಲ್ದಾಣದ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ವಿಮಾನ ನಿಲ್ದಾಣ ಮೂಲಗಳು ಸ್ಪಷ್ಟಪಡಿಸಿವೆ.

ಆದರೆ ಈ ವಿಮಾನ ನಿಲ್ದಾಣಕ್ಕಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಕೇಂದ್ರ ಸರ್ಕಾರ ಸ್ವಾಮ್ಯದಲ್ಲಿದ್ದರಿಂದ ನಮ್ಮ ಊರಿನ ಸೊತ್ತು ಎಂಬ ಭಾವನೆ ಜನರಿಗಿತ್ತು. ಇದೀಗ ಸರ್ಕಾರಿ ಸ್ವಾಮ್ಯದಲ್ಲಿ ವಿಮಾನ ನಿಲ್ದಾಣ ಖಾಸಗಿ ಪಾಲಾಗಿರುವುದು ಮಂಗಳೂರಿನ ಜನರಿಗೆ ಮಾತ್ರ ಬೇಸರ ತರಿಸಿದೆ.

ಇದನ್ನೂ ಓದಿ: ದೇಶದ ಎಲ್ಲಾ ಸರ್ಕಾರಿ ಬಸ್ ಗಳಿಗೆ ಬಂತು ಹೊಸ ರೂಲ್ಸ್ – ಬೆಳ್ಳಂಬೆಳಗ್ಗೆಯೇ ಆದೇಶ ಹೊರಡಿಸಿದ ಕೇಂದ್ರ

Leave A Reply

Your email address will not be published.