Sowjanya Case: ಸೌಜನ್ಯ ಹೋರಾಟಕ್ಕೆ ಯಾರೂ ಊಹಿಸದ ಟ್ವಿಸ್ಟ್ – 4 ಜನರಿಗೆ ಗಲ್ಲು ಶಿಕ್ಷೆ ಕೊಡಿಸಿದ ದೆಹಲಿಯ ನಿರ್ಭಯಾ ತಾಯಿ ಎಂಟ್ರಿ ತಿಮರೋಡಿ, ಬಗ್ಗೆ ಏನಂದ್ರು ಗೊತ್ತೇ ಈ ಉಕ್ಕಿನ ಮಹಿಳೆ ?!
Sowjanya case with a twist to the fight
ಸೌ ತ್ಯಾ ಪ್ರಕರಣದ ಹೋರಾಟಕ್ಕೆ (Soujanya case) ಗಜಬಲ ಬಂದಿದೆ. ಮತ್ತೊಬ್ಬ ಖಡಕ್ ಮಹಿಳೆ ಓರ್ವ ಸಂತ್ರಸ್ತ ಮಗಳ ಅಮ್ಮನಾಗಿ, ಹೋರಾಟಗಾರ್ತಿಯಾಗಿ ಸೌಜನ್ಯ ಹೋರಾಟಕ್ಕೆ ಬಲ ತುಂಬಿದ್ದಾರೆ. ದೆಹಲಿಯ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಕ್ರೂರಿಗಳು ಅಟ್ಟಹಾಸ ಮೆರೆದು, ಆಕೆಯ ಮರ್ಮಾಂಗಕ್ಕೆ ಕಬ್ಬಿಣದ ರಾಡ್ ಜಡಿದು ಅತ್ಯಾಚಾರ ಮಾಡಿದವರ ಬೆನ್ನು ಹತ್ತಿ, ಅವರಿಗೆ ನಾಲ್ಕು ಜನರಿಗೆ ಗಲ್ಲು ಶಿಕ್ಷೆ ಕೊಡಿಸಿದ ನಿರ್ಭಯ ತಾಯಿ ಸೌಜನ್ಯಾ ಪರ ಧ್ವನಿಯೆತ್ತಿದ್ದಾರೆ. (Nirbhaya Mother Supports Sowjanya)
ಹೌದು, ದೆಹಲಿಯ ನಿರ್ಭಯ ಅಲಿಯಾಸ್ ಪ್ರೀತಿ ಸಿಂಗ್ ತಾಯಿ ಆಶಾ ದೇವಿ ಸೌಜನ್ಯ ಹೋರಾಟಕ್ಕೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಸೌಜನ್ಯ ಪರ ಪೋಸ್ಟರ್ ಹಿಡಿದು ಮಾತನಾಡಿದ ನಿರ್ಭಯಳ ತಾಯಿ, ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಿ ಈಗ ಕೋರ್ಟು ಆತನನ್ನು ನಿರಪರಾಧಿ ಎಂದು ಘೋಷಿಸಿದೆ. ಆದರೆ ನಿಜವಾದ ಅಪರಾಧಿಗಳು ಈಗ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಅವರು ರಾಜಕೀಯವಾಗಿ ಅಥವಾ ಇನ್ನುವುದೇ ರೀತಿಯಲ್ಲಿ ಎಷ್ಟೇ ಬಲಿಷ್ಠರಿರಲಿ ಅವರಿಗೆ ಶಿಕ್ಷೆ ಆಗಲೆಬೇಕು ಎಂದು ನಿರ್ಭಯಾ ತಾಯಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಿರ್ಭಯಾಳ ತಾಯಿ ಮಹೇಶ್ ಶೆಟ್ಟಿ ತಿಮರೋಡಿಯವರ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ. ಆ ಸಂದರ್ಭದಲ್ಲಿ ಮಾತನಾಡಿದ ನಿರ್ಭಯ ತಾಯಿ, ಸೌಜನ್ಯ ಪರ ಹೋರಾಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಮತ್ತು ಸೌಜನ್ಯಳ ಕುಟುಂಬಕ್ಕೆ ತಮ್ಮ ಬೆಂಬಲ ಇರುವುದಾಗಿ ಘೋಷಿಸಿದ್ದು, ಸೌಜನ್ಯ ಪ್ರಕರಣದ ಹೋರಾಟ ಈಗ ದೆಹಲಿಯ ಗಲ್ಲಿಗಳಿಗೆ ಎಂಟ್ರಿ ಆಗಿದೆ. ಇನ್ನು ಈ ವಿಚಾರ ದೆಹಲಿಯ ಪಾರ್ಲಿಮೆಂಟಿನ ದೊರೆಗಳಿಗೆ, ವಿರೋಧ ಪಕ್ಷಗಳಿಗೆ ಮತ್ತು ಇತರ ನಾಯಕರುಗಳಿಗೆ ಜೊತೆಗೆ ಪ್ರಧಾನಮಂತ್ರಿಯವರಿಗೆ ತಲುಪಿಸಬೇಕಿದೆ.
ಕಳೆದ ಕೆಲವು ವಾರಗಳಿಂದ ನಿರ್ಭಯಾಳ ತಾಯಿಯನ್ನು ಸಂಪರ್ಕಿಸುವ ಕೆಲಸ ನಡೆಯುತ್ತಿತ್ತು. ಆ ನಿಟ್ಟಿನಲ್ಲಿ ಮಾಜಿ ಪೊಲೀಸ್ ಅಧಿಕಾರಿ ಮತ್ತು ಇದೀಗ ಸೌಜನ್ಯ ಪ್ರಕರಣದ ಹೋರಾಟಕ್ಕೆ ಇಳಿದ ಗಿರೀಶ್ ಮಟ್ಟನ್ನನವರ್ ಅವರ ತಂಡ ಪ್ರಯತ್ನಿಸಿತ್ತು. ಬಹುಶ: ಇದೀಗ ಸಂಪರ್ಕ ಸಾಧ್ಯವಾಗಿದ್ದು ನಿರ್ಭಯ ತಾಯಿ ಸೌಜನ್ಯ ಪರ ದನಿ ಎತ್ತಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ತನ್ನ ಮಗಳನ್ನು ಚಲಿಸುವ ಬಸ್ಸಿನಲ್ಲಿ ಗ್ಯಾಂಗ್ ರೇಪ್ ಮಾಡಿ, ಆಕೆಯ ಮರ್ಮಾಂಗಕ್ಕೆ ಕಬ್ಬಿಣದ ರಾಡ್ ತೂರಿಸಲಾಗಿತ್ತು. ಅಂದು ಪಶುಗಳಂತೆ ವರ್ತಿಸಿದ ನಾಲ್ವರಿಗೆ ಹಲವಾರು ವರ್ಷಗಳ ಕಾಲ ಹೋರಾಡಿ ಗಲ್ಲು ಶಿಕ್ಷೆ ಕೊಡಿಸಿದ ಖ್ಯಾತಿ ನಿರ್ಭಯಳ ತಾಯಿಗೆ ಇದೆ. ಕೊನೆಯ ತನಕ ಕಾಲು ನೆಲಕ್ಕೆ ಭದ್ರವಾಗಿ ಊರಿ, ನಿಂತು ಹೋರಾಡಬಲ್ಲ ಛಾತಿ ನಿರ್ಭಯಾ ತಾಯಿಗೆ ಇದೆ. ನಿರ್ಭಯ ತಾಯಿಯ ಎಂಟ್ರಿ ಸೌಜನ್ಯ ಹೋರಾಟದಲ್ಲಿ ಆದ ಬಹು ದೊಡ್ಡ ಜಯ ಮತ್ತು ಪಾಸಿಟಿವ್ ಬೆಳವಣಿಗೆ.
ಇತ್ತೀಚಿನ ದಿನಗಳಲ್ಲಿ ಸೌಜನ್ಯಾ ತಾಯಿ ಕುಸುಮಾವತಿ ಅವರನ್ನು ತಮ್ಮ ಸುದೀರ್ಘ ಹೋರಾಟದ ಕಾರಣಕ್ಕಾಗಿ ನಿರ್ಭಯ ತಾಯಿಗೆ ಹೋಲಿಸಲಾಗುತ್ತಿತ್ತು. ಎಂದೂ ತಮ್ಮ ನಂಬಿಕೆ ಮತ್ತು ಉತ್ಸಾಹ ಕಳೆದುಕೊಳ್ಳದೆ ಹೋರಾಟಕ್ಕೆ ಇಳಿಯುವ ಧೀರ ವನಿತೆಯರು ಎನ್ನುವುದನ್ನು ತಮ್ಮ ಸುಧೀರ್ಘ ಹೋರಾಟದ ಮೂಲಕ ಅವರಿಬ್ಬರೂ ಸಾಬೀತುಪಡಿಸಿದ್ದಾರೆ