Relationship: ನನ್ನ ವಯಸ್ಸು 35, ಆದರೂ ನನ್ನ ಕನ್ಯತ್ವ ಹಾಗೇ ಉಂಟು !! ವಿಚಿತ್ರ ಸ್ಟೇಟ್ ಮೆಂಟ್ ನೀಡಿದ ಮಹಿಳೆ ಯಾರು ಗೊತ್ತಾ?

Relationship: ಆಧುನಿಕ ಯುಗದಲ್ಲಿ ಎಲ್ಲವೂ ವೇಗವಾಗಿ ಮುಂದುವರೆಯುತ್ತಿದೆ. ತಂತ್ರಜ್ಞಾನಕ್ಕೆ ಮಾರು ಹೋಗಿರುವ ಜನ ಸಮಾಜದಲ್ಲಿ ನಡೆಯುವ ಯಾವುದೇ ಘಟನೆಗೆ ಕ್ಯಾರ್ ಎನ್ನದೇ ಹೋಗ್ತಾ ಇರ್ತಾರೆ. ಇನ್ನು ದೈಹಿಕ ಸಂಬಂಧ (Relationship) ವಿಷಯಕ್ಕೆ ಬಂದರೆ ಅಲ್ಲಿ ಭಾವನೆಗಳು ಇಲ್ಲ. ವಯಸ್ಸು 20ರ ಮೇಲಾಗಿದೆ ಅಂದ್ರೆ ಅವರು ಏನು ಮಾಡೋಕು ಕ್ಯಾರ್ ಅನ್ನೋಲ್ಲ. ಮಾಡಿದ್ದೆಲ್ಲ ಸರಿ ಅನ್ನುವ ನಿರ್ಧಾರಕ್ಕೆ ಬರುತ್ತಾರೆ.

ಪ್ರೀತಿ ಪ್ರೇಮ ಅಂತಾ ಕೆಲವರು ಬಟ್ಟೆ ಬದಲಿಸಿದಂತೆ ಪ್ರೇಮಿಗಳನ್ನು ಬದಲಿಸೋದಿದೆ. ಹಾಗಂತ ಎಲ್ಲರಿಗೂ ಇದೆಲ್ಲ ಸಾಧ್ಯವಿಲ್ಲ. ಕೆಲವರು ಹರೆಯ, ಯೌವ್ವನ ಮುಗಿದ್ರೂ ಒಂದೇ ಒಂದು ಸಂಗಾತಿ ಹೊಂದಲು ಸಾಧ್ಯವಾಗೋದಿಲ್ಲ. ಆದರೆ ಕೆಲವೊಮ್ಮೆ ಬಾಲ್ಯ (Childhood) ದಲ್ಲಿ ನಡೆದ ಘಟನೆ ಜೀವನ (Life) ಪರ್ಯಂತೆ ಜೊತೆಗೆ ಬರುತ್ತೆ. ಇದ್ರಿಂದ ಎಲ್ಲರಂತೆ, ಮಾಮೂಲಿ ಜೀವನ ನಡೆಸಲು ಅನೇಕರಿಗೆ ಸಾಧ್ಯವಾಗೋದಿಲ್ಲ. ಈ ಮಹಿಳೆ ಸ್ಥಿತಿ ಕೂಡ ಅದೇ ಆಗಿದೆ. ತನ್ನ 35ನೇ ವಯಸ್ಸಿನಲ್ಲೂ ಈಕೆ ವರ್ಜಿನ್ ಆಗಿದ್ದಾಳೆ. ಹುಡುಗ್ರನ್ನು ನೋಡಿದ್ರೆ ದೂರ ಹೋಗುವ ಹುಡುಗಿ ಇದಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾಳೆ.

35 ವರ್ಷದ ಅನ್ಯಾ ಪಾಂಚಾಲ್ ಎಂಬಾಕೆ ಈಗ್ಲೂ ಸಿಂಗಲ್ ಅಂತೆ. ಪುರುಷರೊಂದಿಗೆ ಮಾತನಾಡಲು ಮತ್ತು ಅವರನ್ನು ಭೇಟಿಯಾಗಲು ಅನ್ಯಾ ಪಾಂಚಾಲ್ ಗೆ ಭಯವಂತೆ. ಪುರುಷರನ್ನು ಕಂಡ್ರೆ ಕೈ- ಕಾಲು ನಡುಗುತ್ತೆ. ಹಾಗಾಗಿ ನಾನು ಈವರೆಗೂ ಒಬ್ಬ ಪುರುಷನ ಬಳಿ ಹೋಗಿಲ್ಲ ಎನ್ನುತ್ತಾಳೆ ಅನ್ಯಾ ಪಾಂಚಾಲ್.

ಅದರಲ್ಲೂ ಅನ್ಯಾ ಪಾಂಚಾಲ್ ಯಾವುದೇ ಸಂಬಂಧವನ್ನು ಹೊಂದಿಲ್ಲ. ಯಾರನ್ನೂ ಚುಂಬಿಸಿಲ್ಲ ಅಥವಾ ತಬ್ಬಿಕೊಂಡಿಲ್ಲ. ಅನ್ಯಾ ತನ್ನ ಹೆತ್ತವರೊಂದಿಗೆ ವಾಸಿಸುತ್ತಾಳೆ. ಆಕೆಗೆ ಸಾಮಾಜಿಕ ಭಯವಿದೆ. ಅವಳು ಪುರುಷರೊಂದಿಗೆ ಮಾತನಾಡಲು, ಅವರನ್ನು ಭೇಟಿ ಮಾಡಲು, ಅವರೊಂದಿಗೆ ವಾಸಿಸಲು ಅಥವಾ ಸಂಬಂಧವನ್ನು ಪಡೆಯಲು ಹೆದರುತ್ತಾಳೆ. ಮುಖ್ಯವಾಗಿ ನಾನು ಇನ್ನೂ ಕನ್ಯೆ. ಸಿನಿಮಾಗಳಲ್ಲಿ ನೋಡುವಂತೆ ನಾನು ಯಾರಿಗೂ ಮುತ್ತಿಟ್ಟಿಲ್ಲ.

ದೈಹಿಕ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧಕ್ಕೆ (Emotional Relationship) ಬೆಲೆ ನೀಡುವ ವ್ಯಕ್ತಿಯನ್ನು ಅನ್ಯಾ ಬಯಸ್ತಿದ್ದಾಳೆ. ಅನ್ಯಾಗೆ ಡೇಟ್ ಗೆ ಹೋಗ್ಬೇಕು ಅಂದ್ರೆ ಭಯ ಶುರುವಾಗುತ್ತದೆ. ಬಾಲ್ಯದಲ್ಲಿ ನಡೆದ ಘಟನೆ ಇದಕ್ಕೆ ಕಾರಣವೆಂದು ಅನ್ಯಾ ಹೇಳಿದ್ದಾಳೆ. ಬಾಲ್ಯದಲ್ಲಿ ನಡೆದ ಹಿಂಸೆಯನ್ನು ಆಕೆ ಮರೆಯಲು ಆಗ್ತಿಲ್ಲ. ಪಬ್ ನಲ್ಲಿ ಡಾನ್ಸ್ ಮಾಡೋ ಬದಲು ಮನೆಯಲ್ಲಿ ಹಲ್ವಾ ತಿನ್ನೋದು ಬೆಸ್ಟ್ ಎಂಬುದನ್ನು ನಾನು ಕಂಡುಕೊಂಡೆ. ನಂತ್ರ ಅದೇ ನನ್ನ ಜೀವನವಾಯ್ತು ಎನ್ನುತ್ತಾಳೆ ಅನ್ಯಾ. ತನ್ನ 16ನೇ ವಯಸ್ಸಿನಿಂದಲೇ ಅನ್ಯಾಗೆ ಸೋಶಿಯಲ್ ಆಂಗ್ಸೈಟಿ ಶುರುವಾಗಿತ್ತಂತೆ.

ಅದಲ್ಲದೆ ನನ್ನ ತಂದೆ – ತಾಯಿಗೆ ಮದುವೆಯಾಗಿ 40 ವರ್ಷ ಕಳೆದಿದೆ. ಅವರು ನನ್ನಿಷ್ಟದ ವ್ಯಕ್ತಿ ಜೊತೆ ನಾನು ಜೀವನ ನಡೆಸಲಿ ಎಂದು ಬಯಸ್ತಿದ್ದಾರೆ ಎನ್ನುತ್ತಾಳೆ ಅನ್ಯಾ. ನನಗೂ ವೃದ್ಧಾಪ್ಯದಲ್ಲಿ ತನ್ನ ಜೊತೆಗಿರಲು ಒಬ್ಬ ಸಂಗಾತಿಬೇಕೆಂದು ಅನ್ಯಾ ಬಯಸುತ್ತಿದ್ದಾಳೆ. ಒಂಟಿ ಜೀವನದಿಂದ ಜಂಟಿಯಾಗಲು ನಿರ್ಧರಿಸಿದ್ದಾಳೆ. ಆದ್ರೆ ಆಕೆಯಲ್ಲಿರುವ ಭಯ ಆಕೆಯನ್ನು ಮುಂದಿನ ಹೆಜ್ಜೆ ಇಡಲು ಬಿಡ್ತಿಲ್ಲವಂತೆ.

 

ಇದನ್ನು ಓದಿ: Canada PM Justin Trudeau:ದೇಶವನ್ನೇ ಹಾಳು ಮಾಡ್ತಿದ್ದೀಯಾ, ನಿನಗೆ ಹ್ಯಾಂಡ್‌ಶೇಕ್ ಬೇರೆ ಕೇಡು !! ಕೆನಡಾ ಪ್ರಧಾನಿಗೆ ಹೀಗಂದಿದ್ಯಾರು ?!

Leave A Reply

Your email address will not be published.