Quality Air Index: ರಾಜ್ಯದ ಈ ಜಿಲ್ಲೆಗಳಲ್ಲಿ ಮಾತ್ರವಿದೆ ಗುಣಮಟ್ಟದ, ಆರೋಗ್ಯಕರ ಗಾಳಿ! ಕೇಂದ್ರ ಸರ್ಕಾರ ಘೋಷಣೆ ಮಾಡಿದ ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಕೂಡ ಉಂಟಾ ?!

National news Central Government finds places of quality air index in Karnataka

Quality Air Index: ಪ್ರಕೃತಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಎಲ್ಲರೂ ಪಚ್ಚ ಪಸಿರ ನಡುವಿನ ವನ ಸಿರಿಯ ಸೊಬಗನ್ನು ಸವಿಯಲು ಬಯಸುವುದು ಸಹಜ. ಈ ಜಗವೇ ಒಂದು ವಿಸ್ಮಯ ನಗರಿ. ಅರಿಯಲು ಹೋದಷ್ಟು ಮುಗಿಯದ ಅಧ್ಯಾಯದ ಹಾಗೆ ಭೂಗರ್ಭದಲ್ಲಿ ಅದೆಷ್ಟೋ ರಹಸ್ಯಗಳು ನಮಗರಿವಿಲ್ಲದೆ ನಡೆಯುತ್ತಲೇ ಇರುತ್ತವೆ. ಆದರೆ, ಅಭಿವೃದ್ದಿ ಹೆಸರಲ್ಲಿ ಗಗನ ಚುಂಬಿ ಕಟ್ಟಡಗಳ ನಿರ್ಮಾಣದ ಪರಿಣಾಮ ಪರಿಶುದ್ಧವಾದ ಗಾಳಿ(Air)ನಮಗೆ ಸಿಗುತ್ತಿಲ್ಲ ಎಂಬುದು ಅಷ್ಟೇ ಸತ್ಯ.

ರಾಜ್ಯದ ಈ ಎರಡು ಜಿಲ್ಲೆಗಳಲ್ಲಿ ಮಾತ್ರ ಗುಣಮಟ್ಟದ, ಆರೋಗ್ಯಕರವಾದ ಗಾಳಿ ಸಿಗುತ್ತಿದೆ. ಈ ನಡುವೆ, ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗುಣಮಟ್ಟದ ಗಾಳಿಯಿರುವ ನಗರಗಳ ಪಟ್ಟಿಯನ್ನು(Quality Air Index) ಬಿಡುಗಡೆ ಮಾಡಿದ್ದು ಅದರಲ್ಲಿ ಕರ್ನಾಟಕದ ಚಾಮರಾಜನಗರ ಮತ್ತು ಕೊಡಗು(Coorg)ಜಿಲ್ಲೆಗಳು ಸ್ಥಾನ ಪಡೆದಿವೆ. ಎಕ್ಯೂಐ ವಾಲ್ಯೂ 50ರ ಒಳಗಡೆ ಇಗಾಳಿಯ ಗುಣಮಟ್ಟ ಉತ್ತಮವೆಂದು ಪರಿಗಣಿಸಲಾಗುತ್ತದೆ. 51ರಿಂದ 100ರೊಳಗೆ ಇದ್ದರೆ ತೃಪ್ತಿದಾಯಕ ಹಾಗೂ 101 ರಿಂದ 200ರವರೆಗೆ ಇದ್ದರೆ ಮಧ್ಯಮ ಎಂದು ಪರಿಗಣಿಸಲಾಗುತ್ತದೆ. 201 ರಿಂದ 300 ಸೂಚ್ಯಂಕವಿದ್ದರೆ ಕಳಪೆ ಎಂದು ಗುರುತಿಸಲಾಗುತ್ತದೆ.

ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿರುವ ಉತ್ತಮ ಗಾಳಿ ಹೊಂದಿರುವ ದೇಶದ ಕೆಲವೇ ನಗರಗಳಲ್ಲಿ ಮತ್ತು ಕರ್ನಾಟಕದ ನಗರಗಳಲ್ಲಿ ಚಾಮರಾಜನಗರ ಮತ್ತು ಕೊಡಗು ಜಿಲ್ಲೆ ಎಂಬುದು ವಿಶೇಷ. ಸಮೃದ್ಧವಾಗಿರುವ ಕಾಡು ಮತ್ತು ಹೆಚ್ಚಿನ ಕಾರ್ಖಾನೆಗಳು ಇಲ್ಲದಿರುವ ಹಿನ್ನೆಲೆ. ಈ ಜಿಲ್ಲೆಗಳಲ್ಲಿ ಗುಣಮಟ್ಟದ ಗಾಳಿಯು ಇರಲು ಕಾರಣವಿರಬಹುದು. ಎಕ್ಯೂಐ 41 ವ್ಯಾಲ್ಯೂ ಇಂಡೆಕ್ಸ್‌ ಅಡಿಯಲ್ಲಿ ಈ ಪಟ್ಟಿಯನ್ನು ಮಾಡಿದೆ. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸುವ ಗಾಳಿ ಗುಣಮಟ್ಟದ ಸೂಚ್ಯಂಕದಲ್ಲಿ ದೇಶದ ನಗರಗಳಲ್ಲಿ ರಾಜ್ಯದಲ್ಲಿ ಮಡಿಕೇರಿ, ದಾವಣಗೆರೆ ನಂತರದ ಸ್ಥಾನದಲ್ಲಿ ಚಾಮರಾಜನಗರ ಸಹ ಉತ್ತಮ ಗಾಳಿ ಇರುವ ನಗರದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಚಾಮರಾಜನಗರದ ಗಾಳಿಯಲ್ಲಿ ಎಕ್ಯೂಐ 41 ವ್ಯಾಲ್ಯೂ ಇಂಡೆಕ್ಸ್‌ ಗುಣಮಟ್ಟವಿದೆ. ಈ ಗುಣಮಟ್ಟ ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಗುತ್ತದೆ.

ಇದನ್ನೂ ಓದಿ: SSLC ಮತ್ತು PUC ವಿದ್ಯಾರ್ಥಿಗಳೇ ಗಮನಿಸಿ – ‘ಪರೀಕ್ಷೆ-1’ ನೋಂದಣಿಗೆ ಅರ್ಜಿ ಆಹ್ವಾನ , ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

Leave A Reply

Your email address will not be published.