Florida Viral Video: ಅರ್ಧಂಬರ್ಧ ಬಟ್ಟೆ ತೊಟ್ಟು ವಿಮಾನ ಹತ್ತಲು ಬಂದ ಮಹಿಳೆ- ಪಕ್ಕದಲ್ಲಿದ್ದ ಪ್ರಯಾಣಿಕರು ಮಾಡಿದ್ದೇನು ಗೊತ್ತಾ ?!

Florida woman tries to Board plane with half naked Video goes Viral

Share the Article

Viral video: ದಿನಂಪ್ರತಿ ಅದೆಷ್ಟೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಇದೀಗ, ವೈರಲ್(Viral Video)ಆದ ವೀಡಿಯೋವೊಂದು ನೋಡುಗರನ್ನು ಅಚ್ಚರಿಗೆ ತಳ್ಳಿದೆ.

ಫ್ಲೋರಿಡಾದಲ್ಲಿ ಮಹಿಳೆಯೊಬ್ಬರು ವಿಮಾನ ಹತ್ತಲು ಅರೆಬೆತ್ತಲಾಗಿ ವಿಮಾನ ನಿಲ್ದಾಣದಲ್ಲಿ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ದಿಗ್ಭ್ರಮೆಗೆ ಒಳಗಾಗುವಂತೆ ಮಾಡಿದೆ. ಫ್ಲೋರಿಡಾದಿಂದ ಹೊರಡುವ ತಮ್ಮ ವಿಮಾನಕ್ಕಾಗಿ ಸಾಲಿನಲ್ಲಿ ಕಾಯುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಸೊಂಟದಿಂದ ಕೆಳಗೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಇತರ ಪ್ರಯಾಣಿಕರು ಮಹಿಳೆಯ ಅವತಾರ ಕಂಡು ಶಾಕ್ ಆಗಿದ್ದಾರೆ.

ವೈರಲ್ ಆದ ವೀಡಿಯೋದಲ್ಲಿ ಫೋರ್ಟ್ ಲಾಡರ್‌ಡೇಲ್-ಹಾಲಿವುಡ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಲ್ಲಿರುವ ಸ್ಪಿರಿಟ್ ಏರ್‌ಲೈನ್ಸ್ ಕೌಂಟರ್‌ನಲ್ಲಿ ಸರದಿಯಲ್ಲಿ ನಿಂತಿದ್ದ ಮಹಿಳೆಯೊಬ್ಬರು ಕಿತ್ತಳೆ ಬಣ್ಣದ ಹಾಲ್ಟರ್-ನೆಕ್ ಉಡುಪು ಧರಿಸಿದ್ದರು. ಸೊಂಟದಿಂದ ಕೆಳಗಿನ ಭಾಗದಲ್ಲಿ ಬೆತ್ತಲೆಯಾಗಿ ಇದ್ದದ್ದನ್ನು ಕಂಡು ಅಲ್ಲಿದ್ದ ಸಹ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಈ ವಿಡಿಯೋ ಇದೀಗ ಫೋರ್ಟ್ ಲಾಡರ್‌ಡೇಲ್-ಹಾಲಿವುಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸ್ಪಿರಿಟ್ ಏರ್‌ಲೈನ್ಸ್ ಅನ್ನು ತಲುಪಿದ್ದು, ಸದ್ಯ, ಈ ಘಟನೆ ಯಾವಾಗ ನಡೆದಿದೆ ಎಂಬುದು ಬಹಿರಂಗವಾಗಿಲ್ಲ. ಮಹಿಳೆಯ ಈ ವಿಚಿತ್ರ ಅವತಾರ ಕಂಡು ಜನರು ಮಾತ್ರ ಸುಸ್ತಾಗಿ ಬಿಟ್ಟಿದ್ದಾರೆ.

ಇದನ್ನು ಓದಿ: ಯಬ್ಬೋ.. ಅಂಚೆ ಕಛೇರಿಯ ಈ ವಿಮಾ ಯೋಜನೆಯಲ್ಲಿ ಸಿಗುತ್ತೆ ಬರೋಬ್ಬರಿ 10 ಲಕ್ಷ ಕವರೇಜ್ !! ಮುಗಿಬಿದ್ದ ಜನತೆ

 

Leave A Reply