Post Office: ಯಬ್ಬೋ.. ಅಂಚೆ ಕಛೇರಿಯ ಈ ವಿಮಾ ಯೋಜನೆಯಲ್ಲಿ ಸಿಗುತ್ತೆ ಬರೋಬ್ಬರಿ 10 ಲಕ್ಷ ಕವರೇಜ್ !! ಮುಗಿಬಿದ್ದ ಜನತೆ

10 lakhs coverage is available in this post office insurance scheme

Post Office:ಅಂಚೆ ಕಚೇರಿ ( Post Office) ಸೇವೆಯೂ ಇತ್ತೀಚೆಗೆ ಹೆಚ್ಚಿನ ಬೆಳವಣಿಗೆ ಹೊಂದಿದ್ದು, ಭಾರತ ದೇಶದಾದ್ಯಂತ ಬೃಹತ್ ಜಾಲವನ್ನು ಹೊಂದಿದೆ. ಅಲ್ಲದೇ ಅಂಚೆ ಕಚೇರಿಯು ಹಲವಾರು ಯೋಜನೆಗಳನ್ನು ಹೊಂದಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಅನೇಕರಿಗೆ ಅಂಚೆ ಕಚೇರಿ ಆಧಾರವಾಗಿದೆ. ಇದೀಗ, ತನ್ನ ಗ್ರಾಹಕರನ್ನು ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯದಂತಹ ಘಟನೆಗಳಿಂದ ರಕ್ಷಿಸುವ ಸಲುವಾಗಿ ದೊಡ್ಡ ಮೊತ್ತದ ಕವರೇಜ್ ಅನ್ನು ಪರಿಚಯಿಸಿದೆ.

ಹೌದು, ಗ್ರಾಹಕರನ್ನು ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯದಂತಹ ಘಟನೆಗಳಿಂದ ರಕ್ಷಿಸುವ ಸಲುವಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕೇವಲ 399 ರೂಪಾಯಿ ಮತ್ತು 299 ರೂಪಾಯಿಗೆ ಆಕಸ್ಮಿಕ ವಿಮಾ ಪಾಲಿಸಿಯನ್ನು ಹೊರತಂದಿದೆ. ಈ ಯೋಜನೆ ಬಗ್ಗೆ ಇಲ್ಲಿದೆ ವಿವರ.

ಜೀವನವು ಅನಿಶ್ಚಿತವಾಗಿದೆ. ಅಪಘಾತಗಳು ಯಾರಿಗಾದರೂ ಯಾವಾಗ ಬೇಕಾದರೂ ಸಂಭವಿಸಬಹುದು. ಆದ್ದರಿಂದ ಅಪಘಾತವಾದಾಗ ಆಸ್ಪತ್ರೆ ವೆಚ್ಚ ನಿರ್ವಹಣೆಗೆಂದು ನೀವು ಈ ವಿಮೆಯ ಮೂಲಕ ಇಂತಹ ಆಕಸ್ಮಿಕ ಸಂದರ್ಭದಲ್ಲಿ ವಿಮಾ ರಕ್ಷಣೆಯನ್ನು ಪಡೆಯಲು ಸಾಧ್ಯವಾಗುತ್ತದೆ.

ನೀವು 18-65 ವರ್ಷ ವಯಸ್ಸಿನ ಗ್ರಾಹಕರು ಅಗತ್ಯವಿರುವ ಪ್ರೀಮಿಯಂ ಪಾವತಿಸುವ ಮೂಲಕ ಒಂದು ವರ್ಷದವರೆಗೆ ಈ ಎರಡು ಪಾಲಿಸಿಗಳ ಪ್ರಯೋಜನಗಳನ್ನು ಪಡೆಯಬಹುದು.

399 ರೂಪಾಯಿಯ ಪ್ರೀಮಿಯಂ ಯೋಜನೆ :
399 ರೂಪಾಯಿಯ ಪ್ರೀಮಿಯಂ ಯೋಜನೆಯು ನಿಮಗೆ ಒಂದು ವರ್ಷಕ್ಕೆ ವಿಮಾ ಕವರೇಜ್ ಅನ್ನು ನೀಡುತ್ತದೆ. ಆಕಸ್ಮಿಕ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯ, ಶಾಶ್ವತ ಭಾಗಶಃ ಅಂಗವೈಕಲ್ಯ ಮತ್ತು ಆಕಸ್ಮಿಕವಾಗಿ ಅಂಗವಿಕಲತೆ ಮತ್ತು ಪಾರ್ಶ್ವವಾಯು ಸಂಭವಿಸಿದಲ್ಲಿ ನಿಮಗೆ 10 ಲಕ್ಷ ರೂಪಾಯಿ ನೀಡುವ ಭರವಸೆಯನ್ನು ಈ ವಿಮೆ ನೀಡುತ್ತದೆ.
ಐಪಿಡಿಯಲ್ಲಿ ಆಕಸ್ಮಿಕ ವೈದ್ಯಕೀಯ ವೆಚ್ಚವಿದ್ದಲ್ಲಿ 60,000 ರೂಪಾಯಿ ಮತ್ತು ಒಡಿಪಿಯಲ್ಲಿ 30,000 ರೂಪಾಯಿವರೆಗೆ ಆಕಸ್ಮಿಕ ವೈದ್ಯಕೀಯ ವೆಚ್ಚವನ್ನು ಕ್ಲೈಮ್ ಮಾಡಬಹುದು. ನೀವು ಆಸ್ಪತ್ರೆಯಲ್ಲಿದ್ದರೆ, ಹತ್ತು ದಿನಗಳವರೆಗೆ ದಿನಕ್ಕೆ 1000 ರೂಪಾಯಿ ಲಭ್ಯವಾಗುತ್ತದೆ.

399 ರೂಪಾಯಿ ಯೋಜನೆಯ ಪ್ರಯೋಜನಗಳು:
ಅಪಘಾತದ ಸಾವು: ಅಪಘಾತದ ದಿನಾಂಕದ 365 ದಿನಗಳಲ್ಲಿ ಅಪಘಾತದಿಂದ ಮರಣವಾದರೆ, ಕವರೇಜ್ ಮಿತಿಯು ವಿಮಾ ಮೊತ್ತದ ಶೇಕಡ 100 ಆಗಿದೆ.

ಆಕಸ್ಮಿಕ ಪಾರ್ಶ್ವವಾಯು: ಅಪಘಾತದ ಸಂಭವಿಸಿದ 365 ದಿನಗಳಲ್ಲಿ ಪಾರ್ಶ್ವವಾಯುವಾದಲ್ಲಿ ಕವರೇಜ್ ಲಾಭ ಲಭ್ಯವಾಗುತ್ತದೆ.
ಶಿಕ್ಷಣ ಪ್ರಯೋಜನ: ಆಕಸ್ಮಿಕ ಮರಣ / ಶಾಶ್ವತ ಸಂಪೂರ್ಣ ಅಂಗವೈಕಲ್ಯವಾದಲ್ಲಿ ಸಂಪೂರ್ಣ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ. ಯಾವುದೇ ಸಂಸ್ಥೆಯಲ್ಲಿ ಪೂರ್ಣ ಸಮಯದ ವಿದ್ಯಾರ್ಥಿಯಾಗಿರುವ ಅರ್ಹ ಮಗುವಿಗೆ ವಿಮೆ ಪಾವತಿಸಲಾಗುತ್ತದೆ.

ಶಾಶ್ವತ ಅಂಗವೈಕಲ್ಯ: ಇದು ಸಂಪೂರ್ಣ ಅಸಾಮರ್ಥ್ಯವನ್ನು ಕವರ್ ಮಾಡುತ್ತದೆ. ಅಪಘಾತದ ದಿನಾಂಕದ 365 ದಿನಗಳಲ್ಲಿ ಸಂಭವಿಸಿದರೆ ಮಾತ್ರ ಇದು ಲಭ್ಯವಾಗುತ್ತದೆ. ಕವರೇಜ್ ಮಿತಿಯು ವಿಮಾ ಮೊತ್ತದ ಶೇಕಡ 100 ಆಗಿದೆ.
ಅಂಚೆ ಕಚೇರಿ ಅಪಘಾತ ವಿಮಾ ಪಾಲಿಸಿಯು ಆತ್ಮಹತ್ಯೆ, ಮಿಲಿಟರಿ ಸೇವೆಗಳು ಅಥವಾ ಕಾರ್ಯಾಚರಣೆಗಳು, ಯುದ್ಧ, ಕಾನೂನುಬಾಹಿರ ಕೃತ್ಯ, ಬ್ಯಾಕ್ಟೀರಿಯಾದ ಸೋಂಕು, ರೋಗ, ಏಡ್ಸ್, ಅಥವಾ ಇತರೆ ಆರೋಗ್ಯ ಸಮಸ್ಯೆಗೆ ಕವರ್ ಆಗುವುದಿಲ್ಲ.

299 ರೂಪಾಯಿಯ ಮೂಲ ವಿಮಾ ಯೋಜನೆ:
299 ರೂಪಾಯಿಯ ಮೂಲ ವಿಮಾ ಯೋಜನೆಯ ಭಾಗವಾಗಿ ಅಂಚೆ ಕಚೇರಿ ಆಕಸ್ಮಿಕ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯ, ಶಾಶ್ವತ ಭಾಗಶಃ ಅಂಗವೈಕಲ್ಯ ಮತ್ತು ಆಕಸ್ಮಿಕ ಅಂಗವಿಕಲತೆ ಮತ್ತು ಪಾರ್ಶ್ವವಾಯು ಆದಲ್ಲಿ 10 ಲಕ್ಷ ರೂಪಾಯಿ ವಿಮಾ ರಕ್ಷಣೆಯನ್ನು ನೀಡುತ್ತದೆ.

299 ರೂಪಾಯಿಯ ಯೋಜನೆಗೆ ಐಪಿಡಿಯಲ್ಲಿ ಆಕಸ್ಮಿಕ ವೈದ್ಯಕೀಯ ವೆಚ್ಚಕ್ಕೆ 60 ಸಾವಿರ ರೂಪಾಯಿ, ಒಪಿಡಿಯಲ್ಲಿ ಆಕಸ್ಮಿಕ ವೈದ್ಯಕೀಯ ವೆಚ್ಚಕ್ಕೆ 30 ಸಾವಿರ ರೂಪಾಯಿ ಲಭ್ಯವಾಗುತ್ತದೆ.

 

ಇದನ್ನು ಓದಿ: Kumata : ರಾಷ್ಟ್ರ ಧ್ವಜವನ್ನು ತಿರುಚಿ ಈದ್ ಮಿಲಾದ್ ಆಚರಣೆ- ಬಯಲಾಯ್ತು ಮತ್ತೊಂದು ಅವಮಾನಕರ ಪ್ರಕರಣ!!

Leave A Reply

Your email address will not be published.