Cow Milk: ನಿಮ್ಮ ಮಗುವಿಗೆ ಹೆಚ್ಚಾಗಿ ಹಸುವಿನ ಹಾರಾ? ಹಾಗಿದ್ರೆ ತಪ್ಪದೇ ಈ ಅಪಾಯದ ಬಗ್ಗೆ ತಿಳಿಯಿರಿ

Cow Milk: ವಿಟಮಿನ್ ಬಿ ಹೇರಳವಾಗಿರುವ, ಹಸುವಿನ ಹಾಲಿನಲ್ಲಿರುವ (Cow Milk) ಪ್ರೋಟೀನ್ ಉತ್ತಮ ಗುಣಮಟ್ಟದ್ದಾಗಿದ್ದು, ಲೈಸಿನ್ ಸೇರಿದಂತೆ ಎಲ್ಲಾ ಅಗತ್ಯ ಅಮೈನೋ ಆಮ್ಲಗಳ ಉತ್ತಮ ಸಮತೋಲನವನ್ನು ಹೊಂದಿರುತ್ತದೆ. ಹಾಲಿನ ಪ್ರೋಟೀನ್‌ಗಳು ಹೆಚ್ಚಿನ ಜೈವಿಕ ಮೌಲ್ಯವನ್ನು ಹೊಂದಿವೆ. ಹಾಲಿನ ಪ್ರೋಟೀನ್‌ಗಳು ಹೆಚ್ಚಿನ ಸಸ್ಯಹಾರಿ ಆಹಾರಗಳಿಗೆ ಅಮೂಲ್ಯವಾದ ಪೂರಕಗಳಾಗಿವೆ. 100 ಗ್ರಾಂ ಹಾಲು 3.26 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಆದರೆ 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ ಹಸುವಿನ ಹಾಲನ್ನು ನೀಡುವುದು ಒಳ್ಳೆಯದಲ್ಲ.

 

ಮೊದಲೆಲ್ಲ ಮಗುವಿಗೆ ಹುಟ್ಟಿದಾಗಿನಿಂದಲೇ ಆಗಾಗ ಹಸುವಿನ ಹಾಲು ಕೊಡುತ್ತಿದ್ದರು. ಆದರೆ, ಈಗ ಮಕ್ಕಳತಜ್ಞರು 7 ತಿಂಗಳವರೆಗೂ ತಾಯಿಯ ಎದೆಹಾಲನ್ನು ಬಿಟ್ಟು ಬೇರೆ ಯಾವ ಆಹಾರವನ್ನೂ ನೀಡಬಾರದು ಎನ್ನುತ್ತಾರೆ. ಒಂದುವೇಳೆ ತಾಯಿಯ ಎದೆಹಾಲು ಕಡಿಮೆಯಾದರೆ ಫಾರ್ಮುಲಾ ಮಿಲ್ಕ್ ಅಥವಾ ಪ್ಯೂರಿ, ಮಣ್ಣಿಗಳನ್ನು ನೀಡಬಹುದೇ ವಿನಃ ಹಸುವಿನ ಹಾಲು ಅಥವಾ ಮೇಕೆಯ ಹಾಲು ನೀಡಬಾರದು ಎಂದು ಪೋಷಕರಿಗೆ ಸೂಚಿಸುತ್ತಾರೆ. ಇದಕ್ಕೆ ಕಾರಣವೂ ಇದೆ.

ಹಿಂದಿನ ಕಾಲದಲ್ಲಿ ತಾಯಂದಿರು ಮಗುವಿಗೆ 2 ವರ್ಷವಾಗುವವರೆಗೂ ಹೊಟ್ಟೆತುಂಬ ಎದೆಹಾಲು ಕೊಡುವಷ್ಟು ಎದೆಹಾಲು ಉತ್ಪಾದನೆಯಾಗುತ್ತಿತ್ತು. ಆದರೆ, ಈಗೀಗ ಒತ್ತಡ, ಹಾರ್ಮೋನುಗಳ ಬದಲಾವಣೆ, ಆಹಾರ ಪದ್ಧತಿ ಹೀಗೆ ನಾನಾ ಕಾರಣಗಳಿಂದ 6 ತಿಂಗಳ ಬಳಿಕ ಎದೆಹಾಲಿನ ಉತ್ಪಾದನೆ ಕಡಿಮೆಯಾಗುತ್ತಾ ಹೋಗುತ್ತದೆ. ಅದರಲ್ಲೂ ಬಹುತೇಕ ತಾಯಂದಿರು ಉದ್ಯೋಗಿಗಳಾಗಿರುವುದರಿಂದ ಎದೆಹಾಲಿನ ಬದಲು ಫಾರ್ಮುಲಾ ಮಿಲ್ಕ್ ಅನ್ನೇ ಮಗುವಿಗೆ ಅಭ್ಯಾಸ ಮಾಡುತ್ತಾರೆ. ಇದು ಕೂಡ ಎದೆಹಾಲು ಕಡಿಮೆಯಾಗಲು ಮುಖ್ಯ ಕಾರಣ. ಇಂತಹ ಸಮಯದಲ್ಲಿ ಅಪ್ಪಿತಪ್ಪಿಯೂ ಮಗುವಿಗೆ ಹಸುವಿನ ಹಾಲು ಅಥವಾ ಪ್ಯಾಕೆಟ್ ಹಾಲು ಕೊಡಬೇಡಿ.

ವೈದ್ಯರ ಪ್ರಕಾರ, 1 ವರ್ಷಕ್ಕಿಂತ ಮೊದಲು ಶಿಶುಗಳಿಗೆ ಹಸುವಿನ ಹಾಲು ನೀಡುವುದು ಸೂಕ್ತವಲ್ಲ. ಆ ಬಳಿಕವೂ ಪ್ಯಾಕೆಟ್ ಹಾಲು ಕೊಡದಿರುವುದೇ ಉತ್ತಮ. ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದು ನಿಜವಾದರೂ ಹಳ್ಳಿಯ ದೇಸಿ ಹಸುಗಳು ಬೆಟ್ಟ-ಗುಡ್ಡ ತಿರುಗಿ ಹುಲ್ಲು, ಸೊಪ್ಪುಗಳನ್ನೆಲ್ಲ ತಿಂದು ಬರುವುದರಿಂದ ಆ ಹಾಲು ಮಗುವಿಗೆ ಕೊಡಲು ಯೋಗ್ಯ. ಆದರೆ, ಈಗ ಜರ್ಸಿ ದನಗಳಿಗೆ ಮನೆಯಲ್ಲೇ ಕಟ್ಟಿಹಾಕಿ ಹಿಂಡಿ, ಬೂಸಾಗಳಂತಹ ಆಹಾರ ನೀಡಲಾಗುತ್ತದೆ. ಈ ಆಹಾರ ತಿಂದ ಹಸುಗಳು ನೀಡುವ ಹಾಲು ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ.

ಸಣ್ಣ ಕರುಳು ಲ್ಯಾಕ್ಟೇಸ್ ಕಿಣ್ವವನ್ನು ಸಾಕಷ್ಟು ಮಾಡದಿದ್ದಾಗ ಲ್ಯಾಕ್ಟೋಸ್ ಅಸಹಿಷ್ಣುತೆ ಉಂಟಾಗುತ್ತದೆ. ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವ ಮಗುವಿಗೆ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಇದು ಹಾಲು ಮತ್ತು ಇತರ ಡೈರಿ ಉತ್ಪನ್ನಗಳಲ್ಲಿ ಕಂಡುಬರುವ ಒಂದು ರೀತಿಯ ಸಕ್ಕರೆ ಅಂಶವಾಗಿದೆ. ಇದು ಅತಿಸಾರಕ್ಕೆ ಕಾರಣವಾಗಬಹುದು.

1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ ಹಸುವಿನ ಹಾಲನ್ನು ನೀಡುವುದು ಒಳ್ಳೆಯದಲ್ಲ. ಏಕೆಂದರೆ, ಹಸುವಿನ ಹಾಲು ಮಗುವಿಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುವುದಿಲ್ಲ. ಅಲ್ಲದೆ, ನಿಮ್ಮ ಮಗುವಿಗೆ ಹಸುವಿನ ಹಾಲಿನಲ್ಲಿರುವ ಪ್ರೋಟೀನ್ ಮತ್ತು ಕೊಬ್ಬನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ನಿಮಗೆ ಕೊಡಲೇಬೇಕೆಂದರೆ, 1 ವರ್ಷದ ನಂತರ ಮಕ್ಕಳಿಗೆ ಹಸುವಿನ ಹಾಲನ್ನು ನೀಡಬಹುದು. ಆದರೆ, ಅದಕ್ಕೂ ಮುನ್ನ ನಿಮ್ಮ ಮಕ್ಕಳತಜ್ಞರ ಬಳಿ ಸಲಹೆ ಪಡೆಯಿರಿ.

ಕೆಲವು ಮಕ್ಕಳಿಗೆ ಹಸುವಿನ ಹಾಲಿನಲ್ಲಿರುವ ಕೊಬ್ಬಿನಾಂಶವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವು ಶಿಶುಗಳಿಗೆ ಹೊಟ್ಟೆ ನೋವು ಅಥವಾ ಸೆಳೆತ, ವಾಕರಿಕೆ ಮತ್ತು ವಾಂತಿ, ಅತಿಸಾರ ಸಮಸ್ಯೆಗಳು ಉಂಟಾಗಬಹುದು. ಹಾಲಿನ ತೀವ್ರವಾದ ಅಲರ್ಜಿಯಿಂದ ಕರುಳಿನಲ್ಲಿ ರಕ್ತಸ್ರಾವ ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ. ಅದು ರಕ್ತಹೀನತೆಗೆ ಕಾರಣವಾಗಬಹುದು.

ಕೆಲವು ಮಕ್ಕಳಿಗೆ ಪ್ಯಾಕೆಟ್ ಹಾಲಿನಿಂದ ಅಲರ್ಜಿ ಉಂಟಾಗುತ್ತದೆ. ಹೀಗಾಗಿ, ಹಸುವಿನ ಹಾಲು ನೀಡುವ ಮೊದಲು ನಿಮ್ಮ ಮಕ್ಕಳತಜ್ಞರನ್ನು ಭೇಟಿಯಾಗಿ, ಅವರ ಸಲಹೆ ಪಡೆಯುವುದು ಉತ್ತಮ. ಹಸುವಿನ ಹಾಲಿನ ಬದಲು ಮಗುವಿಗೆ ರಾಗಿ ಹಾಲು, ಸೋಯಾ ಹಾಲು ನೀಡಬಹುದು.

 

ಇದನ್ನು ಓದಿ: Tippu Jayanti: ರಾಜ್ಯದಲ್ಲಿ ಮತ್ತೆ ‘ಟಿಪ್ಪು ಜಯಂತಿ’ ಆರಂಭ ?! ಭಾರೀ ಕುತೂಹಲ ಕೆರಳಿಸಿದ ಕಾಂಗ್ರೆಸ್ ನಡೆ ?!

Leave A Reply

Your email address will not be published.