Arasikere: ರಾತ್ರೋರಾತ್ರಿ ಹುತ್ತದ ಬಳಿ ಪತ್ತೆಯಾದ್ವು ಹತ್ತಾರು ಋಷಿಮುನಿಗಳ ಪಾದುಕೆ, ದಂಡಗಳು !! ರೋಚಕ ಕಾರಣ ನೀಡಿದ ಕೋಡಿಮಠದ ಶ್ರೀ

Karnataka district Hassan news Swamiji paduka and wands were found in arasikere

Arasikere: ಹಲವಾರು ಊರುಗಳಲ್ಲಿ ರಾತ್ರಿ ಹೊತ್ತು ಋಷಿಮುನಿಗಳ ಸಂಚಾರ ಇರುತ್ತದೆ, ಇಲ್ಲಿ ಮುನಿಗಳು ಯಾವಾಗಲೂ ಓಡಾಡುತ್ತಿರುತ್ತಾರೆ. ಇದು ರುದ್ರಭೂಮಿ ಎಂದು ಹಿರಿಯರು ಹೇಳುವುದನ್ನು ನಾವೆಲ್ಲಾ ಕೇಳಿರುತ್ತೇವೆ. ಕೆಲವರು ಇದನ್ನು ನಂಬಿದರೆ ಮತ್ತೆ ಕೆಲವರು ಅಸಡ್ಡೆ ಮಾಡುವುದುಂಟು. ಆದರೆ ಅಚ್ಚರಿ ಎಂಬಂತೆ ಈ ರೀತಿಯ ಹೇಳಿಕಗಳಿಗೆ ಸಾಕ್ಷಿಯಾಗಿ ಅರಸೀಕೆರೆ(Arasikere) ಗ್ರಾಮವೊಂದರ ಹುತ್ತದ ಬಳಿ ಹತ್ತಾರು ಋಷಿಮುನಿಗಳ ಪಾದುಕೆ ಹಾಗೂ ದಂಡಗಳು ಪತ್ತೆಯಾಗಿವೆ.

ಹೌದು, ಹಾಸನ ಜಿಲ್ಲೆಯ (Hassan News) ಅರಸೀಕೆರೆ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮಸ್ಥರಿಗೆ ಗುರುವಾರ ಅಚ್ಚರಿಯೊಂದಿಗೆ ಆತಂಕವು ಹೆಚ್ಚಾಗಿತ್ತು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಗ್ರಾಮದ ಹೊರ ವಲಯದ ಹುತ್ತದ ಮುಂದೆ ಸ್ವಾಮೀಜಿ, ಸನ್ಯಾಸಿಗಳು ಬಳಸುವ ಪಾದುಕೆ ಹಾಗು ದಂಡಗಳು ಪತ್ತೆಯಾಗಿದ್ದು ಗ್ರಾಮದ ಕೆಲವರು ಹಸು ಮೇಯಿಸಲು ಎಂದಿನಂತೆ ಬಂದಾಗ ಇವುಗಳು ಕಂಡಿವೆ. 12 ಜತೆ ಪಾದುಕೆ ಹಾಗೂ 28 ದಂಡಗಳ‌ ದಿಢೀರ್ ಪ್ರತ್ಯಕ್ಷದಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.

ಏನಾದರೂ ಇವು ಹಳೆಯದಾದವು, ಬೇಡವೆಂದು ಎಂದು ಯಾರಾದರೂ ಎಸೆದು ಹೋಗಿದ್ದರೆ ಯಾವುದಾದರೂ ಮೂಲೆಯಲ್ಲಿ ರಾಶಿ ಹಾಕಬೇಕಿತ್ತು. ಅಥವಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರಬೇಕಿತ್ತು. ಆದರೆ ಇವುಗಳನ್ನಿಲ್ಲಿ ಸಾಲಾಗಿ ಇಡಲಾಗಿದೆ. ಇಷ್ಟೂ ಅಲ್ಲದೆ ಅವೆಲ್ಲವೂ ತುಂಬಾ ಶ್ರೇಷ್ಠವಾದ ಪಾದುಕೆಗಳ ಹಾಗೆ ಕಾಣುತ್ತವೆ. ಇನ್ನೂ ಪಳ ಪಳ ಹೊಳೆಯುತ್ತಿವೆ. ಹೀಗಾಗಿ ಇದು ಕುತೂಹಲದೊಂದಿಗೆ ಭಯವನ್ನುಂಟು ಮಾಡಿದೆ. ಯಾರಾದಾರೂ ಸ್ವಾಮೀಜಿಗಳು ಒಟ್ಟಾಗಿ ಈ ಜಾಗದಲ್ಲಿ ಸೇರಿದ್ದರಾ? ಏನಾದರೂ ಪೂಜೆಗಾಗಿ ಈ ರೀತಿ ಮಾಡಲಾಗಿದೆಯೇ? ಸನ್ಯಾಸಿಗಳೇನಾದರೂ ತಂಡವಾಗಿ ಬಂದು ಬಿಟ್ಟು ಹೋದರಾ? ಎಂಬ ನೂರಾರು ಪ್ರಶ್ನೆಗಳು ಗ್ರಾಮಸ್ಥರಲ್ಲಿ ಕಾಡುತ್ತಿದೆ.

ಇದೀಗ ಈ ಕುರಿತು ಸ್ಥಳೀಯ ಹಾಗೂ ನಾಡಿನ ಖ್ಯಾತ ಮಠವಾಗಿರುವ ಕೋಡಿಮಠದ ಶ್ರೀಗಳು ಅಚ್ಚರಿ ಕಾರಣವನ್ನು ನೀಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ವಿಷಯ ತಿಳಿಸಿದಾಗ ಕೋಡಿ ಶ್ರೀ ಇದರ ಬಗ್ಗೆ ಅರಿತುಕೊಂಡು ಇಲ್ಲಿ ರಾತ್ರಿ ಹೊತ್ತು ಋಷಿಮುನಿಗಳ ಸಂಚಾರವಾಗಿದೆ. ಹೀಗಾಗಿ ಪಾದುಕೆ, ದಂಡಕಗಳೆಲ್ಲಾ ಅಲ್ಲಿವೆ ಎಂದು ಅಚ್ಚರಿಯ ಕಾರಣ ನೀಡಿದ್ದಾರೆ.

ಇದನ್ನೂ ಓದಿ: NDA Alliance: NDA ಕೂಟದಿಂದ ಮತ್ತೊಂದು ಪ್ರಬಲ ಪಕ್ಷ ಔಟ್ – ಬಿಜೆಪಿ ಮೈತ್ರಿ ಬಲಕ್ಕೆ ಭಾರೀ ದೊಡ್ಡ ಶಾಕ್

Leave A Reply

Your email address will not be published.