Namma Metro: ಮೆಟ್ರೋ ರೈಲಿನಲ್ಲಿ ಸೈಲೆಂಟಾಗಿ ಗೋಬಿ ಸವಿದ ಆಸಾಮಿ:ಗೋಬಿ ತಿಂದವನ ಜೇಬಿಗೆ ಕೈ ಹಾಕಿದ್ದು ಯಾಕೆ ? ಪೊಲೀಸರು

Bengaluru news Metro rules violence man fined for eating Gobi Manchurian in namma metro

Namma Metro : ಬೆಂಗಳೂರಿನ ಮೆಟ್ರೋ ರೈಲಿನಲ್ಲಿ (Namma Metro) ಪ್ರಯಾಣಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಇಲ್ಲೊಬ್ಬ ಮೆಟ್ರೋ ರೈಲಿನಲ್ಲಿ ನಿಯಮ ಉಲ್ಲಂಘಿಸಿ ದಂಡ ತೆತ್ತ ಘಟನೆ ವರದಿಯಾಗಿದೆ.

ನಾವು ಬಸ್ಸು ಮತ್ತು ಇನ್ನಿತರ ವಾಹನಗಳಲ್ಲಿ ಸಂಚರಿಸುವ ಹಾಗೇ ಬೇಕಾಬಿಟ್ಟಿ ವರ್ತಿಸುವಂತಿಲ್ಲ. ಮೆಟ್ರೋ ರೈಲು ಪ್ರವೇಶಿಸುವ ಸಂದರ್ಭ ಕೆಲ ನಿಯಮಗಳನ್ನು ಪಾಲಿಸಬೇಕು. ಸಾಲಲ್ಲಿ ಹೋಗಬೇಕು. ಇದಲ್ಲದೇ, ಮೆಟ್ರೋ ಒಳಗೂ ಬ್ಯಾಗ್‌ ಹಿಡಿದುಕೊಳ್ಳುವುದಕ್ಕು ನಿಲ್ಲುವುದಕ್ಕೊಂದು ನಿಯಮವಿದೆ. ಮೆಟ್ರೋ ರೈಲಿನ ಒಳಗಡೆ ಯಾವುದೇ ತಿನಿಸನ್ನು ತಿನ್ನಲು ಅವಕಾಶವಿಲ್ಲ(Eatables are not allowed in Metro) ಎಂಬ ನಿಯಮವಿದೆ. ಈ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತದೆ.

ಮೆಟ್ರೋ ರೈಲಿನಲ್ಲಿ ಕುಳಿತು ಗೋಬಿ ಮಂಚೂರಿ (Gobi Manchuri) ತಿಂದವನಿಗೆ 500 ರೂ. ದಂಡ ವಿಧಿಸಲಾಗಿದೆ. ಪ್ರತಿದಿನ ಸಂಪಿಗೆ ಮೆಟ್ರೋ ರೋಡ್ ಮೆಟ್ರೋ ನಿಲ್ದಾಣದಿಂದ ಜಯನಗರಕ್ಕೆ ಬರುತ್ತಿದ್ದ ಸುನೀಲ್ ಎಂಬಾತ ಮೆಟ್ರೋ ಬೋಗಿಯೊಳಗೆ ಕುಳಿತು ಆರಾಮವಾಗಿ ಗೋಬಿ ಮಂಚೂರಿ ಸವಿದಿದ್ದಾರೆ. ಜಯನಗರದ ಪ್ರತಿಷ್ಠಿತ ಆಭರಣ ಮಳಿಗೆ ಉದ್ಯೋಗಿಯಾಗಿರುವ ಸುನೀಲ್‌ ರೈಲಿನಲ್ಲೇ ಗೋಬಿ ಮಂಚೂರಿ ಪಾರ್ಸೆಲ್‌ ತಂದು ತಿಂದಿದ್ದಾರೆ. ಈ ವಿಚಾರ ಮೆಟ್ರೋ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಸುನಿಲ್‌ ಅವರು ಮೆಟ್ರೋದಲ್ಲಿ ಕುಳಿತು ಗೋಬಿ ಮಂಚೂರಿ ತಿನ್ನುವುದನ್ನು ಅವರ ಗೆಳೆಯರು ವಿಡಿಯೋ ಮಾಡಿದ್ದಾರೆ. ತಮಾಷೆಗಾಗಿ ಮಾಡಿದ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಸುನಿಲ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೆಟ್ರೋ ಅಧಿಕಾರಿಗಳು ನಿಯಮ ಉಲ್ಲಂಘನೆಗೆ ಸಂಬಂಧಿಸಿ ಜಯನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಹೀಗಾಗಿ, ಜಯನಗರ ಪೊಲೀಸರು ಸುನೀಲ್ ಅವರಿಗೆ 500 ರೂ. ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: Ration Card Update: ಪಡಿತರ ಚೀಟಿದಾರರೇ ಗಮನಿಸಿ : ನಿಮ್ಮ ಜಿಲ್ಲೆಗಳಲ್ಲಿ ನಡೆಯೋ `ರೇಷನ್ ಕಾರ್ಡ್’ ಹೆಸರು ಸೇರ್ಪಡೆ- ತಿದ್ದುಪಡಿ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

Leave A Reply

Your email address will not be published.