Bengaluru News: ಕಾಲೇಜ್ ಹುಡುಗಿಯರ ‘ದಮ್’ ಹೊಡಿಯೋ ವಿಡಿಯೋ ವೈರಲ್ – ನಾವೇ ಸ್ಟ್ರಾಂಗ್ ಅನ್ನೋದನ್ನು ಮತ್ತೆ ಪ್ರೂವ್ ಮಾಡಿದ ಹೆಣ್ಣೈಕ್ಳು

Bengaluru news college Bengaluru girl Students Smoking cigarette Photo Viral

Bengaluru Students Smoking Photo Viral: ಹೆಣ್ಣು ನಾಲ್ಕು ಗೋಡೆಯ ಒಳಗಷ್ಟೆ ಸೀಮಿತ ಎನ್ನುವ ಕಾಲ ಒಂದಿತ್ತು. ಈಗ ಕಾಲ ಬದಲಾಗಿದೆ. ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ತಮ್ಮ ಪಾರುಪತ್ಯ ಕಾಯ್ದುಕೊಳ್ಳುತ್ತಿದ್ದಾರೆ. ಓದುವುದರಲ್ಲಿ ಹೆಣ್ಣು ಮಕ್ಕಳೇ ಮೇಲು ಗೈ ಸಾಧಿಸುವುದು ಗೊತ್ತಿರುವ ವಿಚಾರ!!! ಇದೀಗ, ಕಾಲೇಜ್ ಹುಡುಗಿಯರು ‘ದಮ್’ ಹೊಡಿಯೋದರಲ್ಲು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ನಿರೂಪಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಬೆಂಗಳೂರು ನಗರದ (Bengaluru)ವಿ.ವಿ ಪುರದ ಟೆಂಪಲ್ ಸ್ಟ್ರೀಟ್ ಸಮೀಪದ ವಿದ್ಯಾರ್ಥಿಗಳು ಸ್ಕೂಲ್‌ ಯೂನಿಫಾರ್ಮ್‌ನಲ್ಲೇ(Bengaluru Students Smoking Photo Viral) ಬಂದು ಧೂಮಪಾನ ಮಾಡುತ್ತಿರುವ ದೃಶ್ಯದ ವೀಡಿಯೋ ವೈರಲ್ ಆಗಿದ್ದು, ನಿರ್ಭೀತಿಯಿಂದ ಸಿಗರೇಟ್ ಸೇದುತ್ತಾ ಚಟದಂತೆ ರೂಢಿಸಿಕೊಂಡ ವಿದ್ಯಾರ್ಥಿಗಳ ಫೋಟೊವನ್ನು ಸಾರ್ವಜನಿಕರು ಫೋಟೋ ತೆಗೆದಿದ್ದು, ಸದ್ಯ ಪೋಸ್ಟ್‌ ವೈರಲ್ ಆಗಿ ಸಂಚಲನ ಮೂಡಿಸಿದೆ.

ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ದುಶ್ಚಟಗಳನ್ನು ರೂಡಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮೂವರು ಬಾಲಕಿಯರಿಗೆ ಇಬ್ಬರು ಬಾಲಕರು ಸಾಥ್‌ ನೀಡುತ್ತಾ ಯಾವುದೇ ಭಯವಿಲ್ಲದೇ ಸಿಗರೇಟ್ ಸೇದುತ್ತಿರುವ ವಿದ್ಯಾರ್ಥಿಗಳ ಫೋಟೋ ವೈರಲ್ ಆಗಿದೆ. ಶಾಲಾ ಬ್ಯಾಗ್‌ನ್ನು ಹೆಗಲಿಗೆ ಹಾಕಿಕೊಂಡು ಗೋಡೆ ಒರಗಿಕೊಂಡ ಐವರು ಸಾರ್ವಜನಿಕ ಸ್ಥಳದಲ್ಲೇ ಸಿಗರೇಟು ಸೇದುತ್ತಿದ್ದು, ಓದುವ ವಯಸ್ಸಲ್ಲಿ ಈ ರೀತಿ ಬೇಡದ ಹಾದಿ ತುಳಿದರೆ ಮುಂದಾಗುವ ಅಪಾಯ ಅಷ್ಟಿಷ್ಟಲ್ಲ. ಈ ವಿದ್ಯಾರ್ಥಿಗಳು ರಾಜಾರೋಷವಾಗಿ ನಾವು ಮಾಡಿದ್ದೇ ಸರಿ ಅನ್ನೋ ಹಾಗೆ ಸಿಗರೇಟ್ ಸೇದುವ ದೃಶ್ಯ ನೋಡುಗರಿಗೆ ಅಚ್ಚರಿಯ ಜೊತೆಗೆ ಆತಂಕ ಮೂಡಿಸಿದೆ. ಜೈನ್ ಟೆಂಪಲ್ ಸ್ಟ್ರೀಟ್‌ನ ವಿ.ವಿ.ಪುರಂ, ಪೋಲಾರ್ ಬೇರ್ ಐಸ್ ಕ್ರೀಮ್ ಪಾರ್ಲರ್ ಹಿಂಭಾಗದಲ್ಲೇ ವಿದ್ಯಾರ್ಥಿಗಳು ಶಾಲೆಗೆ ಚಕ್ಕರ್ ಹಾಕಿದ್ದು ಮಾತ್ರವಲ್ಲದೇ ಹದಿಹರೆಯದ ವಯಸ್ಸಿನಲ್ಲಿ ದುಶ್ಚಟಕ್ಕೆ ಬೀಳುತ್ತಿರುವುದನ್ನು ತಡೆಯಲು ಪೊಲೀಸರು ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಪೊಲೀಸ್ ಪೇಜ್‌ಗೆ ಫೋಟೊ ಪೋಸ್ಟ್ ಮಾಡಿ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: Shocking News For BPL Card Holders: ನೀವು BPL ರೇಷನ್ ಕಾರ್ಡ್ ಹೊಂದಿದ್ದೀರಾ ?! ಹಾಗಿದ್ರೆ ಸರ್ಕಾರದಿಂದ ಬಂತು ನೋಡಿ ಶಾಕಿಂಗ್ ನ್ಯೂಸ್ !!

Leave A Reply

Your email address will not be published.