Bangalore Crime: ಪಿಯು ಹುಡುಗನಿಗೆ ಹೈಸ್ಕೂಲ್ ಟೀಚರ್ ಮೇಲೆ ಲವ್! ಓದು ಬಿಟ್ಟು ಪಾರ್ಕ್ ಗೆ ಹೋದರು ಲವರ್ಸ್, ಭಾವೀ ಗಂಡನ ಕೈಗೆ ಸಿಕ್ಕಿ ಬಿದ್ದ ಇಬ್ಬರು, ಮುಂದೇನಾಯ್ತು?

BANGALORE CRIME NEWS HIGH SCHOOL TEACHER AND STUDENT CRUSH STORY ON POLICE STATION

Bangalore Crime News: ಪ್ರೀತಿ ಎಂಬ ನವಿರಾದ ಭಾವಕ್ಕೆ ನಂಬಿಕೆ (Trust )ಅತ್ಯವಶ್ಯಕ. ನೈಜ ಪ್ರೀತಿ( Love)ಬಣ್ಣ ಧರ್ಮದ ಎಲ್ಲೆಯ ಗಡಿ ದಾಟಿ ಸ್ವಚ್ಚಂದ ಹಕ್ಕಿಯಂತೆ ಪ್ರೇಮಿಸಿ ಮದುವೆ ಎಂಬ ಬಂಧಕ್ಕೆ ಮುನ್ನುಡಿ ಬರೆಯುವುದು ಸಹಜ. ಪ್ರೀತಿಯ ನಿಜವಾದ ವ್ಯಾಖ್ಯಾನ ನೀಡುವಂತಹ ಅದೆಷ್ಟೋ ಆದರ್ಶ ಅಪರೂಪದ ಜೋಡಿಗಳನ್ನು ನಾವು ನೋಡಬಹುದು. ಅದೇ ರೀತಿ ಪ್ರೀತಿ ಪ್ರೇಮ ಪ್ರಣಯ ಎಂದು ನಾಲ್ಕು ದಿನ ಅಲೆದಾಡಿ ಮತ್ತೆ ಯಾರನ್ನೋ ಪ್ರೀತಿಸುವ ನಾಟಕವಾಡಿ ನಾನೊಂದು ತೀರ ನೀನೊಂದು ತೀರ ಎಂದು ವರ್ತಿಸುವವರು ಕೂಡ ಇದ್ದಾರೆ. ಆದರೆ, ಬೆಂಗಳೂರಿನಲ್ಲಿ ಟೀಚರ್ ಸ್ಟೂಡೆಂಟ್ ಪಾಗಲ್ ಸ್ಟೋರಿ (Bangalore Crime News)ಪೊಲೀಸ್ ಠಾಣೆಯವರೆಗೂ ಬಂದು ನಿಂತಿದೆ.

ಹೌದು, 17ರ ಹರೆಯದ ಅಪ್ರಾಪ್ತ ಬಾಲಕ ಮತ್ತು 24 ರ ಹರೆಯದ ಶಿಕ್ಷಕಿ ನಡುವೆ ಬೆಳೆದುಕೊಂಡಿದ್ದ ಪ್ರೀತಿ ಇದೀಗ,ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ‌ ಮೆಟ್ಟಿಲೇರಿದೆ. ಅಷ್ಟಕ್ಕೂ ಏನು ಈ ಕಹಾನಿ ಅಂತೀರಾ??

ನಾಗರಭಾವಿ ರಸ್ತೆಯ ಬೈರವೇಶ್ವರ ನಗರದಲ್ಲಿ ಅಪ್ರಾಪ್ತ ಬಾಲಕನ ಕುಟುಂಬ ನೆಲೆಸಿತ್ತು. ವಿದ್ಯಾರ್ಥಿ ಖಾಸಗಿ ಕಾಲೇಜಿನಲ್ಲಿ ಬಾಲಕ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದನಂತೆ. ಇದೇ ಏರಿಯಾದ ಖಾಸಗಿ ಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿಯೊಂದಿಗೆ ಸಲುಗೆ ಬೆಳೆದು ಈತನಿಗೆ ವಯೋಸಹಜ ಆಕರ್ಷಣೆಯೋ, ಪ್ರೇಮವೋ ಹುಟ್ಟಿಕೊಂಡಿದೆ. ಕಾಲ ಕ್ರಮೇಣ ಇಬ್ಬರು ಜೊತೆಯಾಗಿ ಅಡ್ಡಾಡಲು ಆರಂಭಿಸಿ, ಆಗಾಗ ಕರೆ ಮಾಡಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಈ ವಿಚಾರ ಬಾಲಕನ ತಂದೆಗೆ ಗೊತ್ತಾಗಿ ಇಬ್ಬರಿಗೂ ಬೈದು ತಿಳಿ ಹೇಳಿದ್ದರಂತೆ. ಹೀಗಿದ್ದರೂ ಕೂಡ ಮತ್ತೆ ಕೆಲ ದಿನಗಳ ನಂತರ ಇಬ್ಬರೂ ಫೋನ್ ಸಂಭಾಷಣೆ ಮುಂದುವರಿಸಿದ್ದಾರೆ.

ಕಳೆದ ಅಕ್ಟೋಬರ್ 1ರಂದು ಈ ಬಾಲಕನ ಹುಟ್ಟುಹಬ್ಬದ ಸಂಭ್ರಮಕ್ಕೆ ಬಸವೇಶ್ವರ ನಗರದ ಬೇಕರಿಯೊಂದರಲ್ಲಿ ಇಬ್ಬರು ಭೇಟಿಯಾಗಿ ಕೇಕ್ ಕತ್ತರಿಸಿ ಬರ್ತ್ ಡೇ ಆಚರಣೆ ಮಾಡಿದ್ದಾರೆ . ಆನಂತರ ಪಕ್ಕದ ಪಾರ್ಕ್ ನಲ್ಲಿ ಹರಟೆ ಹೊಡೆಯುತ್ತ ಕುಳಿತಿದ್ದಾರೆ. ಇದರ ನಡುವೆ ಶಿಕ್ಷಕಿಗೆ ಮದುವೆಗಾಗಿ ಹುಡುಗ ನಿಶ್ಚಯವಾಗಿದ್ದು, ಆತ ತಾನು ಮದುವೆ ಆಗಬೇಕಿದ್ದ ಶಿಕ್ಷಕಿಯ ಸಹೋದರನಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ.

ಈ ಸಂದರ್ಭ ಆರೋಪಿ ಶಶಾಂಕ್ ಎಂಬಾತ ಬಾಲಕನ ಮೇಲೆ ಹಲ್ಲೆ ಮಾಡಿ ನಮ್ಮ ಅಕ್ಕನ ತಂಟೆಗೆ ಬರದಂತೆ ಖಡಕ್ ವಾರ್ನಿಗ್ ಕೊಟ್ಟಿದ್ದಾನೆ. ತೀವ್ರ ಹಲ್ಲೆ ಮಾಡಿದ ಬಳಿಕ ಶಶಾಂಕ್ ಗಾಯಗೊಂಡಿದ್ದ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮುಂದೆ ಈ ರೀತಿ ಮಾಡದಂತೆ ತಾಕೀತು ಮಾಡಿದ್ದಾನೆ. ಈ ನಡುವೆ,ಬಾಲಕನ ತಂದೆ ಮಗ ಗಾಯಗೊಂಡಿರುವುದನ್ನು ಗಮನಿಸಿದಾಗ ಏನೋ ಸುಳ್ಳು ಹೇಳಿ ವಿಚಾರ ತಿಳಿಯದಂತೆ ಮಾಡಿದ್ದಾನೆ. ಬಾಲಕನ ಸ್ನೇಹಿತನೊಬ್ಬ ನಡೆದ ಘಟನೆಯ ವಿವರವನ್ನು ಹಲ್ಲೆಗೊಳಗಾದ ಬಾಲಕನ ತಂದೆಗೆ ತಿಳಿಸಿದ್ದಾನೆ.ಹೀಗಾಗಿ, ಮಗನ ಮೇಲೆ ಹಲ್ಲೆ ಮಾಡಿರುವುದಕ್ಕೆ ತಂದೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ದೂರಿನ ಅನುಸಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:BJP-JDS: ಮೈತ್ರಿ ಬೆನ್ನಲ್ಲೇ ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಜೆಡಿಎಸ್ – ಬಿಜೆಪಿಗಂತೂ ಇದು ಊಹಿಸಲಾರದ ಹೊಡೆತ

Leave A Reply

Your email address will not be published.