Ration Card: BPL ಮಾತ್ರವಲ್ಲ, ಇದು APL ಕಾರ್ಡ್ ದಾರರಿಗೂ ಸಂತಸ ಕೊಡೋ ಸುದ್ದಿ- ತಪ್ಪದೇ ಓದಿ, ಈ ಪ್ರಯೋಜನ ಪಡೆಯಿರಿ !

Good news for BPL and APL card holders from the govt food department allowed ration Card correction

Ration Card: ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಭಾರತದಲ್ಲಿ (India) ಪಡಿತರ ಚೀಟಿ (Ration Card) ಬಹಳ ಮುಖ್ಯವಾದ ದಾಖಲೆಗಳಲ್ಲಿ ಒಂದು. ಪಡಿತರ ಚೀಟಿಯ ಮೂಲಕ ಸರ್ಕಾರ (Government) ಅಗತ್ಯವಿರುವವರಿಗೆ ಹಿಟ್ಟು, ಬೇಳೆಕಾಳು, ಅಕ್ಕಿ ಮುಂತಾದ ಪಡಿತರ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತದೆ.

ಇದೀಗ BPL ಮಾತ್ರವಲ್ಲ, APL ಕಾರ್ಡ್ ದಾರರಿಗೂ ಸಂತಸ ಕೊಡೋ ಸುದ್ದಿ ಇಲ್ಲಿದೆ. ಈ ಮಾಹಿತಿ ತಪ್ಪದೇ ಓದಿ, ಈ ಪ್ರಯೋಜನ ಪಡೆಯಿರಿ!! ಹೌದು, ಬಿಪಿಎಲ್, ಎಪಿಎಲ್ ಕಾರ್ಡ್ ದಾರರಿಗೆ ಆಹಾರ ಇಲಾಖೆ ಗುಡ್​ ನ್ಯೂಸ್​ ನೀಡಿದೆ. ಮತ್ತೆ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ ನೀಡಿ ಆಹಾರ ಇಲಾಖೆ ಆದೇಶ ನೀಡಿದೆ. ಇಂದಿನಿಂದ 9 ದಿನಗಳ ಕಾಲ ರೇಷನ್​ ಕಾರ್ಡ್​​ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಅ.5ರಿಂದ 13ರವರೆಗೂ ಮತ್ತೆ ತಿದ್ದುಪಡಿಗೆ ಅವಕಾಶ ನೀಡಿದೆ.

ವಿಭಾಗವಾರು ತಲಾ ಮೂರು ದಿನಗಳ ಕಾಲ ರೇಷನ್​ ಕಾರ್ಡ್​ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಮೊದಲ ವಲಯದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ಎಪಿಎಲ್​, ಬಿಪಿಎಲ್​ ಕಾರ್ಡ್​ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಅಗಸ್ಟ್​ 5ರಿಂದ 7ರವರೆಗೂ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 10ರಿಂದ 7 ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಮಾತ್ರ ರೇಷನ್​ ಕಾರ್ಡ್​ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

ಫಲಾನುಭವಿ ಹೆಸರು ಬದಲಾವಣೆ, ಪಡಿತರ ಕೇಂದ್ರ ಬದಲಾವಣೆ, ಕಾರ್ಡ್ ಸದಸ್ಯರ ಹೆಸರು ಡಿಲಿಟ್ & ಸೇರ್ಪಡೆ, ಕಾರ್ಡ್ ಮುಖ್ಯಸ್ಥರ ಹೆಸರು ಬದಲಾವಣೆ, ಮಹಿಳಾ ಮುಖ್ಯಸ್ಥರ ಹೆಸರು ಬದಲಾವಣೆ ಮಾಡಿಕೊಳ್ಳಬಹುದು. ನೀವು ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ‌ ತಿದ್ದುಪಡಿ ಮಾಡಿಸಬಹುದಾಗಿದೆ.

ಇದನ್ನೂ ಓದಿ: Kerala: ಮಗುವಿಗೆ ಹೆಸರಿಡಲು ದಂಪತಿಗಳ ಜಗಳ – ಕೊನೆಗೆ ಹೈಕೋರ್ಟೇ ಮಾಡಿತು ನಾಮಕರಣ !! ಅರೆ.. ಇಟ್ಟ ಹೆಸರೇನು ಗೊತ್ತಾ ?!

Leave A Reply

Your email address will not be published.