Bigg Boss Season-10: ದೊಡ್ಮನೆಗೆ ಕಾಲಿಡಲಿರುವ ಮಜಾಭಾರತ ಖ್ಯಾತಿಯ ʼಚಂದ್ರಪ್ರಭಾʼ?!

entertainment news bigg boss season 10 chandraprabha enters biggposs house

Bigg Boss Season-10: ಚಂದ್ರಪ್ರಭ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಮಜಾ ಭಾರತ ಶೋನಲ್ಲಿ ತನ್ನದೇ ಆದ ಅಭಿಮಾನಿ ವರ್ಗವನ್ನು ಹೊಂದಿರುವ ನಟ. ಕಿರುತೆರೆ ವೀಕ್ಷಕರ ಮನಸ್ಸಿನ ರಾಜ. ತನ್ನ ಮುಗ್ಧ ನಟನೆ, ಮುಗ್ಧ ಮಾತು, ಹಾಗೂ ಅವರದೇ ಮ್ಯಾನರಿಸಂನ ಡ್ಯಾನ್ಸ್‌ ಮೂಲಕ ಕರ್ನಾಟಕದ ಜನರ ಹೃದಯ ಗೆದ್ದ ಚಂದ್ರಪ್ರಭಾ ಅವರು ಇದೀಗ ದೊಡ್ಮನೆಗೆ ಹೋಗಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

ಗಿಚ್ಚಿಗಿಲಿಗಿಲಿ, ಮಜಾಭಾರತ ಮುಂತಾದ ಶೋನಲ್ಲಿ ಮಿಂಚಿದ ಚಂದ್ರಪ್ರಭ ಬಿಗ್‌ಬಾಸ್‌ ಮನೆಗೆ ಹೋಗಲು ರೆಡಿಯಾಗಿದ್ದಾರೆ ಎಂಬ ಅಧಿಕೃತ ಮಾಹಿತಿ ಇಲ್ಲ. ಆದರೂ ಬಿಗ್‌ ಬಾಸ್‌ ಮನೆಗೆ ಚಂದ್ರಪ್ರಭ (Bigg Boss Season-10) ಎಂಟ್ರಿ ಇದೆ ಎಂಬ ಗಾಸಿಪ್‌ ಅಲ್ಲಿ ಇಲ್ಲಿ ಕೇಳ್ತಾ ಇದೆ.

ಅ.8ಕ್ಕೆ ಬಿಗ್‌ಬಾಸ್‌ ಸೀಸನ್‌ -10 ಶೋ ಪ್ರಾರಂಭವಾಗಲಿದೆ. ಒಟ್ಟು 16 ಸ್ಪರ್ಧಿಗಳಿದ್ದು, ಅದರಲ್ಲಿ ಕಾಮಿಡಿ ಕಿಂಗ್‌ ಚಂದ್ರಪ್ರಭಾ ಕೂಡಾ ಒಬ್ಬರಾಗಿ ಹೋಗಬಹುದು. ಲಿಸ್ಟ್‌ನಲ್ಲಿ ಚಂದ್ರಪ್ರಭ ಹೆಸರಿದ್ದರು ಅಧಿಕೃತ ಮಾಹಿತಿ ಹೊರಬಂದಿಲ್ಲ.

 

ಇದನ್ನು ಓದಿ: Latest news: ಅಮಾನವೀಯ ಘಟನೆ, ನಾಯಿ ಕೊಂದ ಆರೋಪ; ತಾಯಿ ಮಗನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ! ವಿಡಿಯೋ ವೈರಲ್‌

Leave A Reply

Your email address will not be published.