Tragic Love Story: ಪ್ರಿಯಕರನ ಆತ್ಮಹತ್ಯೆ; ಆಘಾತಗೊಂಡ ಪ್ರಿಯತಮೆ ಮಾಡಿದ್ದೇನು?

Punjab girl attempt to suicide latest news

Tragic Love Story: ಹೈದರಾಬಾದ್ ಪ್ರಿಯಕರನ ಸಾವಿನಿಂದ ನೊಂದಿದ್ದ ಪ್ರಿಯತಮೆ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡ ಘಟನೆ ವರದಿಯಾಗಿದೆ.

 

ಮೃತ ಯುವತಿಯನ್ನು ಪಂಜಾಬ್‌ ಮೂಲದ ನೇಹಾ (19) ಎನ್ನಲಾಗಿದ್ದು, ಹೈದರಾಬಾದ್ ನಲ್ಲಿ ಹಾಸ್ಟೆಲ್‌ನಲ್ಲಿ ನೆಲೆಸಿದ್ದಳು. ಕಳೆದ 8 ತಿಂಗಳಿನಿಂದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅದೇ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಲ್ಮಾನ್‌ ಎನ್ನುವ ಯುವಕನ ಜೊತೆಗೆ ಪ್ರೇಮಾಂಕುರವಾಗಿತ್ತು. ಆದರೆ ಇಬ್ಬರ ನಡುವಿನ ಪ್ರೀತಿಯ ವಿಚಾರ ಅಂಗಡಿಯ ಮಾಲೀಕರಿಗೆ ಗೊತ್ತಾದ ನಂತರ ಸಲ್ಮಾನ್‌ ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದರ ಜೊತೆಗೆ ಸಲ್ಮಾನ್‌ ಮನೆಯವರು ನೇಹಾಳೊಂದಿಗಿನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ, ಪ್ರಿಯಕರನ ಆತ್ಮಹತ್ಯೆಯ ಸುದ್ದಿಯನ್ನು ಸಹಿಸಲಾಗದೆ ಆಕೆ ತನ್ನ ಜೀವನವನ್ನು ಮುಗಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ನಡುವೆ, ಮನನೊಂದಿದ್ದ ಸಲ್ಮಾನ್‌ ಅಕ್ಟೋಬರ್‌ 1 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಪ್ರಿಯಕರ ಸಲ್ಮಾನ್‌ ಆತ್ಮಹತ್ಯೆ ಮಾಡಿಕೊಂಡ ವಿಚಾರದಿಂದ ಹತಾಶರಾಗಿ ನೇಹಾ ಮಂಗಳವಾರ (ಅ. 3ರಂದು) ಹಾಸ್ಟೆಲ್‌ ನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಸ್ವಚ್ಛತಾ ಸಿಬ್ಬಂದಿ ಕೊಠಡಿ ಸ್ವಚ್ಛಗೊಳಿಸಲು ಬಂದ ಸಂದರ್ಭ ನೇಹಾ ಬಾಗಿಲು ತಟ್ಟಿದರೂ ಕೂಡ ಬಾಗಿಲು ತೆರೆದಿರಲಿಲ್ಲ. ಹಾಸ್ಟೆಲ್ ಸಿಬ್ಬಂದಿ ಅನುಮಾನಗೊಂಡು ಕಿಟಕಿಯಿಂದ ನೋಡಿದ ಸಂದರ್ಭ ನೇಹಾ ಕೋಣೆಯೊಳಗಿನ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಸ್ಟೆಲ್‌ಗೆ ಬಂದು ಬಾಗಿಲು ಒಡೆದು ನೋಡಿದಾಗ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

 

ಇದನ್ನು ಓದಿ: Post Office Savings: ತಿಂಗಳಿಗೆ 1000 ರೂಪಾಯಿ ಉಳಿಸಿ, ಮೆಚ್ಯೂರಿಟಿಯಲ್ಲಿ ದೊಡ್ಡ ಮೊತ್ತದ ಹಣ ಪಡೆಯಿರಿ!

Leave A Reply

Your email address will not be published.