Sikkim cloud burst: ಮೇಘಸ್ಫೋಟಕ್ಕೆ ನಲುಗಿದ ಸಿಕ್ಕಿಂ!! 23 ಯೋಧರು ಕಣ್ಮರೆ- ತೀವ್ರ ಶೋಧ
national news sikkim flood cloud burst army personnel missing latest news
Sikkim cloud burst: ತೀಸ್ತಾ ನದಿಯಲ್ಲಿ ನೀರಿನ ಮಟ್ಟ ಏರಿಕೆಗೊಂಡ ಹಿನ್ನೆಲೆಯಲ್ಲಿ ಉಂಟಾದ ಪ್ರವಾಹಕ್ಕೆ ಸಿಕ್ಕಿಂ ನ ಲೊನಾಕ್ ಪ್ರದೇಶವು ತತ್ತರಿಸಿದ್ದು, ಭೀಕರ ಮೇಘಸ್ಫೋಟಕ್ಕೆ(Sikkim cloud burst) 23 ಯೋಧರ ಸಹಿತ ಹಲವು ಸೇನಾ ವಾಹನಗಳು ಕಣ್ಮರೆಯಾಗಿದೆ.
ಚುಂಗ್ಥಾಂಗ್ ಅಣೆಕಟ್ಟಿನ ನೀರನ್ನು ಬಿಡುಗಡೆ ಮಾಡಿದ್ದರಿಂದ ತೀಸ್ತಾ ನದಿಯಲ್ಲಿ ನೀರಿನ ಮಟ್ಟವು ಸುಮಾರು 15-20 ಅಡಿಗಳಷ್ಟು ಏರಿಕೆಯಾಗಿದ್ದು,ಲಾಚೆನ್ ಕಣಿವೆಯ ಉದ್ದಕ್ಕೂ ಕೆಲವು ಸೇನಾ ವಾಹನಗಳ ಸಹಿತ ಸೇನಾ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಸದ್ಯ ಕೆಲ ವಾಹನಗಳು ಕೆಸರಿನಲ್ಲಿ ಹೂತು ಹೋಗಿದ್ದು,ಕಣ್ಮರೆಯಾದ 23 ಸೇನಾ ಸಿಬ್ಬಂದಿಗಳ ರಕ್ಷಣೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಆಗ ತಾನೇ ಹೆತ್ತ ಮಗು ಕಣ್ತೆರೆಯುವ ಮೊದಲೇ ಕಬ್ಬಿನ ಗದ್ದೆಯಲ್ಲಿ ಬಿಸಾಡಿ ಹೋದ ತಾಯಿ! ಸ್ಥಳೀಯರ ಆಕ್ರೋಶ!!