IRCTC: ರೈಲು ಪ್ರಯಾಣಿಕರಿಗೆ ಮುಖ್ಯ ಮಾಹಿತಿ! ಖಾಲಿ ಇರುವ ಸೀಟಿನ ಬಗ್ಗೆ ತಿಳಿಯಲು ಇನ್ನು ಕಷ್ಟಪಡಬೇಕಿಲ್ಲ, ಈ ಲಿಂಕ್ ಕ್ಲಿಕ್ ಮಾಡಿ ಸುಲಭವಾಗಿ ಬುಕ್ ಮಾಡಿ!
IRCTC reservation chart online Indian railways seat booking find out vacant berthes in running train
IRCTC: ಬಹುತೇಕವಾಗಿ ದೂರ ಪ್ರಯಾಣಕ್ಕಾಗಿ ರೈಲನ್ನು ಅವಲಂಬಿಸುವವರ ಸಂಖ್ಯೆ ಹೆಚ್ಚಿರುವ ಕಾರಣ, ಟಿಕೆಟ್ ಸುಲಭವಾಗಿ ಸಿಗುವುದಿಲ್ಲ. ಇನ್ನು ತುರ್ತು ಪರಿಸ್ಥಿತಿ ಎದುರಾಗಿ ಕಡೆ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡುವುದಾದರೆ ಸೀಟ್ ಸಿಗುವುದು ತೀರಾ ವಿರಳ. ಅಂತಹ ಸಂದರ್ಭದಲ್ಲಿ ರೈಲಿನಲ್ಲಿ ಸೀಟು ಕಾಯ್ದಿರಿಸಲು ಯತ್ನಿಸಿದಾಗ ಕೆಲವೊಮ್ಮೆ ಸೀಟ್ ಕನ್‌ಫರ್ಮ್ ಆಗದೇ ಗೊಂದಲ ಉಂಟಾಗುತ್ತದೆ.
ಕೆಲವೊಮ್ಮೆ ನಮ್ಮ ರೈಲು ಟಿಕೆಟ್ ಕನ್ನರ್ಮ್ ಆಗದೇ ವೇಟಿಂಗ್ ಲಿಸ್ಟ್ ನಲ್ಲಿದ್ದರೂ ನಾವು ಆ ಸಮಯಕ್ಕೆ ರೈಲಿನಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪ್ರಯಾಣದ ಸಮಯದಲ್ಲಿ ನಮ್ಮ ಟಿಕೆಟ್ ಕನ್ಸರ್ಮ್ ಆಗಿದೆಯೋ ಇಲ್ಲವೋ ಎಂದು ತಿಳಿಯಲು ನಾವು ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಬಳಿ ಕೇಳಬೇಕಾಗುತ್ತದೆ. ಅದಲ್ಲದೆ ರೈಲಿನಲ್ಲಿ ಸೀಟು ಖಾಲಿ ಇದೆಯೋ ಇಲ್ಲವೋ ಎಂದು ಟಿಟಿಇ ತಿಳಿದುಕೊಳ್ಳುತ್ತೇವೆ. ರೈಲಿನಲ್ಲಿ ಯಾವುದೇ ಸೀಟು ಖಾಲಿಯಿದ್ದರೆ ಆ ಸೀಟು ನಮಗಾಗಿ ಕಾಯ್ದಿರಿಸುವಂತೆ ಟಿಟಿಇ ಅವರನ್ನು ಕೇಳಿಕೊಳ್ಳುತ್ತೇವೆ.
ಆದರೆ, ಇಂತಹ ಸೀಟ್ ಖಾಲಿ ಇದೆಯಾ ಎಂಬ ಗೊಂದಲಕ್ಕೆ ನೀವು ಇದಕ್ಕಾಗಿ ಟಿಟಿಇ ಸಂಪರ್ಕಿಸಬೇಕಿಲ್ಲ. ವಾಸ್ತವವಾಗಿ ಪ್ರಯಾಣದ ಸಮಯದಲ್ಲಿ ರೈಲಿನ ಯಾವ ಕೋಚ್‌ನಲ್ಲಿ ಯಾವ ಸೀಟು ಅಥವಾ ಬೆರ್ತ್ ಖಾಲಿಯಾಗಿದೆ ಎಂಬುದನ್ನು ಕೆಲವೇ ಕ್ಲಿಕ್‌ಗಳ ಮೂಲಕ ತಿಳಿಯಬಹುದು. ನೀವು ದೃಢೀಕೃತ ಸೀಟ್ ಹೊಂದಿಲ್ಲದಿದ್ದರೂ ರೈಲಿನಲ್ಲಿ ಖಾಲಿ ಸೀಟುಗಳನ್ನು ಕಂಡುಹಿಡಿಯಬಹುದು. ಇದಕ್ಕಾಗಿ ನೀವು IRCTC ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ.
IRCTC ಅಪ್ಲಿಕೇಶನ್‌ನಲ್ಲಿ ಖಾಲಿ ಇರುವ ಸೀಟು ಕಂಡುಹಿಡಿಯುವ ವಿಧಾನ :
ನಿಮ್ಮ ಮೊಬೈಲ್ ಫೋನ್‌ನಲ್ಲಿ IRCTC ಯ ಅಧಿಕೃತ ಅಪ್ಲಿಕೇಶನ್‌ನಲ್ಲಿ ನೀವು ಖಾಲಿ ಇರುವ ಸೀಟುಗಳ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು. IRCTC ಅಪ್ಲಿಕೇಶನ್ Android ಮತ್ತು ಅಪ್ಲಿಕೇಶನ್ ios ಸ್ಟೋರ್‌ಗಳಲ್ಲಿ ಲಭ್ಯವಿದೆ.
ಇದಕ್ಕಾಗಿ ನೀವು ಮೊದಲು IRCTC ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
ನಿಮ್ಮ ಮೊಬೈಲ್ ಫೋನ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಅದನ್ನು ತೆರೆಯಿರಿ.
IRCTC ಅಪ್ಲಿಕೇಶನ್ ತೆರೆದ ನಂತರ, ರೈಲು ಐಕಾನ್ ಮೇಲೆ ಕ್ಲಿಕ್ ಮಾಡಿ.
ಇದರ ನಂತರ Chart Vacancy ಜಾಗವನ್ನು ಕ್ಲಿಕ್ ಮಾಡಿ. ಇದರ ನಂತರ ರಿಸರ್ವೇಷನ್ ಚಾರ್ಟ್ ಪುಟವು ನಿಮ್ಮ ಮೊಬೈಲ್ ವೆಬ್ ಬ್ರೌಸರ್‌ನಲ್ಲಿ ತೆರೆಯುತ್ತದೆ.
ನಂತರ ಎರಡನೇ ಬಾಕ್ಸ್ ನಲ್ಲಿ ರೈಲಿನ ಹೆಸರು/ಸಂಖ್ಯೆ ಮತ್ತು ಬೋರ್ಡಿಂಗ್ ನಿಲ್ದಾಣದ ಹೆಸರನ್ನು ನಮೂದಿಸಿ.
ಇದರ ನಂತರ ನಿಮಗೆ ಖಾಲಿ ಇರುವ ಆಸನಗಳ ಬಗ್ಗೆ ಮಾಹಿತಿ ಕಾಣುತ್ತದೆ.
IRCTC ವೆಬ್‌ಸೈಟ್‌ನಿಂದ ಖಾಲಿ
ಇರುವ ಸೀಟ್ ಅನ್ನು ಹೇಗೆ
ಕಂಡುಹಿಡಿಯುವ ವಿಧಾನ ಇಲ್ಲಿದೆ :
IRCTC ಯ ಅಧಿಕೃತ ವೆಬ್‌ಸೈಟ್‌ನ ಮುಖ್ಯ ಪುಟಕ್ಕೆ ಹೋಗಿ ಮತ್ತು ಬುಕ್ ಟಿಕೆಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಇಲ್ಲಿ ನೀವು ಮೇಲ್ಬಾಗದಲ್ಲಿ charts/vacancy ಆಯ್ಕೆಯನ್ನು ನೋಡುತ್ತೀರಿ.
ನೀವು ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ರಿಸರ್ವೇಷನ್ ಚಾರ್ಟ್ ಓಪನ್ ಆಗುತ್ತದೆ.
ರಿಸರ್ವೇಶನ್ ಚಾರ್ಟ್ ತೆರೆದಾಗ, ಮೊದಲ ಬಾಕ್ಸ್ ನಲ್ಲಿ ರೈಲಿನ ಹೆಸರು ಅಥವಾ ರೈಲು ಸಂಖ್ಯೆಯನ್ನು ಮತ್ತು ಎರಡನೇ ಬಾಕ್ಸ್ ನಲ್ಲಿ ಬೋರ್ಡಿಂಗ್ ನಿಲ್ದಾಣದ ಹೆಸರನ್ನು ನಮೂದಿಸಿ.
ಇದರ ನಂತರ ನೀವು ಗೆಟ್ ಟ್ರೈನ್ ಚಾರ್ಟ್ ಅನ್ನು ಕ್ಲಿಕ್ ಮಾಡಿದ ತಕ್ಷಣ, ಖಾಲಿ ಸೀಟುಗಳ ಇತ್ತೀಚಿನ ಸ್ಥಿತಿಯು ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಸೀಸನ್ 10 ಗೆದ್ದವರಿಗೆ ಟ್ರೋಫಿ ಜೊತೆಗೆ ನೀವು ಊಹಿಸದಷ್ಟು ಬಿಗ್ ಅಮೌಂಟ್ ಆಫರ್!