New Technology To Copy Detection:ವಿದ್ಯಾರ್ಥಿಗಳೇ ಹುಷಾರ್ – ಎಕ್ಸಾಂ ಕಾಪಿ ಪತ್ತೆಗೆ ಬಂದಿದೆ ಹೊಸ ತಂತ್ರಜ್ಞಾನ ; ಇನ್ನೂ ಕಾಪಿ ಅಲ್ಲ, ಕೆಮ್ಮಿದ್ರೆ ಸಾಕು ಸಿಕ್ಕಿಬೀಳ್ತೀರಾ!!
Education news technology news new AI Technology to copy detection in exam
New Technology To Copy Detection: ವಿದ್ಯಾರ್ಥಿಗಳೇ ಗಮನಿಸಿ, ನೀವೇನಾದರೂ ಪರೀಕ್ಷೆಯಲ್ಲಿ ಕಾಪಿ ಹೊಡೆಯುವ ಇಲ್ಲವೇ ನಕಲಿ ಮಾಡಲು ಏನಾದರು ಟೆಕ್ನಿಕ್ ಬಳಸುತ್ತಿದ್ದರೆ ಹುಷಾರ್!!! ಎಕ್ಸಾಮ್ ಕಾಪಿ ಪತ್ತೆಗೆ ಹೊಸ ತಂತ್ರಜ್ಞಾನ(New Technology To Copy Detection) ಬಂದಿದ್ದು, ನೀವು ರೆಡ್ ಹ್ಯಾಂಡ್ ಸಿಕ್ಕಿ ಬೀಳೋದರಲ್ಲಿ ಡೌಟೆ ಇಲ್ಲ. ಬೆಂಗಳೂರು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು (RGHUS) ಪರೀಕ್ಷಾ ಅಕ್ರಮ ತಡೆಯುವ ನಿಟ್ಟಿನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗಿದೆ.
ಕಳೆದ 2 ವರ್ಷಗಳ ಹಿಂದೆಯೇ ಪರೀಕ್ಷಾ ಅಕ್ರಮ ತಡೆಗಟ್ಟಲು ಮುಖಚರ್ಯೆ (Facial Recognition)ತಂತ್ರಜ್ಞಾನವನ್ನು ಅಳವಡಿಸಲು ಚರ್ಚೆ ಮಾಡಲಾಗಿತ್ತು. ಆದರೆ, ಇಲ್ಲಿಯವರೆಗೆ ಅನುಷ್ಠಾನ ಸಾಧ್ಯವಾಗಿದ್ದು, ಈಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸುತ್ತಿರುವ ಹಿನ್ನೆಲೆ ಸಂಪೂರ್ಣವಾಗಿ ಉನ್ನತೀಕರಿಸಲಾಗುತ್ತಿದೆ ಎಂದು ವಿವಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಐ ತಂತ್ರಜ್ಞಾನವು ಪರೀಕ್ಷಾ ಕೊಠಡಿಗಳಲ್ಲಿರುವ ಅಭ್ಯರ್ಥಿಗಳ ಚಲನವಲನಗಳು, ಪಿಸುಮಾತಿನಲ್ಲಿ ಮಾತನಾಡುವ ಮಾತುಗಳು ಮತ್ತು ಅಕ್ರಮವಾಗಿ ಅಭ್ಯರ್ಥಿಯು (ಬದಲಿ ಅಭ್ಯರ್ಥಿ ಪರೀಕ್ಷೆ ಬರೆಯುತ್ತಿದ್ದರೆ) ಪತ್ತೆ ಹಚ್ಚಲಾಗುತ್ತದೆ. ಈ ನಿಟ್ಟಿನಲ್ಲಿ ವಿವಿಯು ಈಗಾಗಲೇ ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ಬದಲಾವಣೆ ಮಾಡಿದ್ದು ಅತ್ಯಾಧುನಿಕ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತಹ ಸಿಸಿಟಿವಿಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಈ ತಂತ್ರಜ್ಞಾನದ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬದಲಿ ಅಭ್ಯರ್ಥಿ ಹಾಜರಾದ್ದಲ್ಲಿ ಸಿಗ್ನಲ್‌ಗಳ ಮೂಲಕ ಅಲರ್ಟ್ ದೊರೆಯಲಿದೆ. ಇದರಿಂದ ಸಂಬಂಧಪಟ್ಟ ಅಭ್ಯರ್ಥಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ. ಪರೀಕ್ಷಾ ಅಕ್ರಮ ತಡೆಗಟ್ಟುವುದಕ್ಕಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ದೇಶದಲ್ಲಿಯೇ ಮೊದಲ ಬಾರಿಗೆ ಜಾರಿಗೊಳಿಸಲಾಗುತ್ತಿದೆ.
ಮುಂದಿನ ಡಿಸೆಂಬರ್‌ನಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಮೊದಲ ಬಾರಿಗೆ ನೂತನ ತಂತ್ರಜ್ಞಾನ ಜಾರಿಯಾಗಲಿದ್ದು, ಇದು ಆರ್‌ಜಿಯುಎಚ್‌ಎಸ್ ವ್ಯಾಪ್ತಿಯಲ್ಲಿರುವ ಎಲ್ಲ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳಿಗೂ ಅನ್ವಯವಾಗಲಿದೆ. ಅಭ್ಯರ್ಥಿಯು ಪರೀಕ್ಷಾ ಕೇಂದ್ರದೊಳಗೆ ಮಾತ್ರವಲ್ಲದೇ, ವೈದ್ಯಕೀಯ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಗಳಾದ ಬ್ಲುಟೂತ್‌ನಲ್ಲಿ ಪರೀಕ್ಷಾ ಕೇಂದ್ರದ ಹೊರಗಿರುವವರ ಜತೆಗೆ ಮಾತನಾಡಿದರೆ ಸಂಭಾಷಣೆಯ ದ್ವನಿ ರೆಕಾರ್ಡ್ ಆಗಲಿದೆ. ಹೀಗಾಗಿ, ವಿದ್ಯಾರ್ಥಿ ನಕಲು ಮಾಡಿರುವುದನ್ನು ಪತ್ತೆ ಹಚ್ಚಬಹುದಾಗಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದೆ.
ಇದನ್ನೂ ಓದಿ: ಬೈಕ್ ಪ್ರಿಯರಿಗೆ ಸಖತ್ ಸುದ್ದಿ- ದಸರಾ ಪ್ರಯುಕ್ತ ಬರೀ 10,000ಕ್ಕೆ ಸಿಗ್ತಿದೆ ಬುಲೆಟ್ ಬೈಕ್ !! ಮುಗಿಬಿದ್ದ ಜನ