Viral video: ಲೋ ಮಗನೇ.. ಯಾವಳೋ ಈ ಹುಡುಗಿ ?! ಫೇವರಿಟ್ ಹಿರೋಯಿನ್ ಜೊತೆ ಲೈವ್ ಮಾಡುವಾಗ್ಲೇ ಮಗನಿಗೆ ಕಪಾಳಮೋಕ್ಷ ಮಾಡಿದ ತಾಯಿ !

Latest news mother slapped the girl along with questioning who she was Viral video

Viral video: ಫೇವರಿಟ್ ಹಿರೋಯಿನ್ ಜೊತೆ ಲೈವ್ ನಲ್ಲಿ ಮಾತನಾಡುತ್ತಿದ್ದಾಗ ಮಗನಿಗೆ ತಾಯಿ ಕಪಾಳಮೋಕ್ಷ ಮಾಡಿದ್ದು, ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ಹೌದು, ಬಾಲಿವುಡ್ ನಟಿ ಅವನೀತ್ ಕೌರ್ (avnith kaur), ತಮ್ಮ ಅಭಿಮಾನಿಗಳ ಜೊತೆ ಇನ್‌ಸ್ಟಾಗ್ರಾಂ ಲೈವ್ ಆಯೋಜಿಸಿದ್ದು, ತಮ್ಮ ಫ್ಯಾನ್ ಪೇಜ್ ಆರಂಭಿಸಿದ ಅಭಿಮಾನಿ ಜೊತೆ ಮಾತನಾಡಿದ್ದಾರೆ. ನಟಿಯ ಮಾತು ಮುಗಿಯುತ್ತಿದ್ದಂತೆ ಹಿಂಬದಿಯಿಂದ ಯುವಕನ ತಾಯಿ ಬಂದಿದ್ದಾರೆ. ಲೋ ಮಗನೇ, ಯಾವಳೋ ಈ ಹುಡುಗಿ ಎಂದು ಪ್ರಶ್ನಿಸುವುದರ ಜೊತೆಗೆ ಕಪಾಳಮೋಕ್ಷ ಮಾಡಿದ್ದಾರೆ. ಇದನ್ನು ನೋಡಿ ಅವನೀತ್ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ (viral video) ಆಗಿದೆ.

ಅವನೀತ್ ಕೌರ್, ನನ್ನ ಫ್ಯಾನ್ ಪೇಜ್ ಕ್ರಿಯೇಟ್ ಮಾಡಿರುವುದಕ್ಕೆ ಧನ್ಯವಾದಗಳು ಎಂದು ಅಭಿಮಾನಿಗೆ ಹೇಳಿದ್ದಾರೆ. ನನ್ನ ಫ್ಯಾನ್ ಪೇಜ್ ನನಗೆ ಅತೀವ ಸಂತಸ ತಂದಿದೆ. ದೇವರು ನಿಮಗೆ ಆಶೀರ್ವದಿಸಲಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ, ಧನ್ಯವಾದ ಎಂದು ಅವನೀತ್ ಕೌರ್ ಹೇಳಿದ್ದಾರೆ. ಈ ಮಾತಿನಿಂದ ಅಭಿಮಾನಿ
ಭಾರೀ ಸಂತಸಗೊಂಡನು. ಆದರೆ, ಯುವಕನ ಹಿಂದೆ ತಾಯಿಯೂ ಇದ್ದರು. ತನ್ನ ಮಗ ಗರ್ಲ್ ಫ್ರೆಂಡ್ ಜೊತೆ ಮಾತನಾಡುತ್ತಿದ್ದಾನೆ ಎಂದುಕೊಂಡು ಅಭಿಮಾನಿಯ ತಾಯಿ, ಯಾರು ಆ ಹುಡುಗಿ? ಎಂದು ಪ್ರಶ್ನಿಸಿ ಕಪಾಳಕ್ಕೆ ಬಾರಿಸಿದ್ದಾರೆ.

ಅವನೀತ್ ಕೌರ್ ಮಾತು ಮುಗಿಸಿ ಲೈವ್ ಅಂತ್ಯಗೊಳಿಸಬೇಕು ಅನ್ನುವಷ್ಟರಲ್ಲಿ ಈ ರೀತಿ ನಡೆದಿದೆ. ತಾಯಿ ಹೊಡೆದಿರುವ ವಿಡಿಯೋ ರೆಕಾರ್ಡ್ ಆಗಿದೆ. ಅತ್ತ ಲೈವ್‌ನಲ್ಲಿದ್ದ ಅವನೀತ್ ಕೌರ್ ಗಾಬರಿಯಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಾರಿ ವೈರಲ್ ಆಗಿದೆ. ಈ ವಿಡಿಯೋಗೆ ವಿಭಿನ್ನ
ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

 

https://x.com/gharkekalesh/status/1708118591831482508?s=20

 

ಇದನ್ನು ಓದಿ: UP News: ಸತ್ತ ತಂದೆ 20 ವರ್ಷಗಳ ನಂತರ ಕನಸಿನಲ್ಲಿ ಬಂದು ಸಮಾಧಿ ಸರಿ ಮಾಡಿಸಿ ಅಂದ! ಸಮಾಧಿ ಅಗೆದಾಗ ಆಶ್ಚರ್ಯ ಪಟ್ಟ ಕುಟುಂಬಸ್ಥರು! ಅಷ್ಟಕ್ಕೂ ಅಲ್ಲಿ ಕಂಡಿದ್ದೇನು?

Leave A Reply

Your email address will not be published.