Uorfi Javed: ಕದ್ದು ಮುಚ್ಚಿ ನಡೆಯಿತಾ ತುಂಡುಡುಗೆಗಳ ರಾಣಿ ಉರ್ಫಿ ಜಾವೇದ್ ನಿಶ್ಚಿತಾರ್ಥ !! ವೈರಲ್ ಫೋಟೋ ಕಂಡು ಶಾಕ್ ಆದ ಫ್ಯಾನ್ಸ್

Bollywood news actress uorfi Javed engagement photo viral in social media

Uorfi Javed: ಬಿಗ್ ಬಾಸ್ (Bigg Boss OTT)ಒಟಿಟಿ ಮೂಲಕ ಹೆಚ್ಚು ಹೆಸರು ಪಡೆದ ಈ ಉರ್ಫಿ ಜಾವೇದ್(Uorfi Javed) ತಮ್ಮ ಡ್ರೆಸ್ಸಿಂಗ್ ಸೆನ್ಸ್‌ನಿಂದ ಮಾತ್ರವಲ್ಲದೆ ತನ್ನ ಸಂಪಾದನೆಯ ಕಾರಣದಿಂದ ಕೂಡ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ, ಉರ್ಫಿ ಜಾವೇದ್ ದೇವಸ್ಥಾನದಲ್ಲಿ ಸದ್ದಿಲ್ಲದೆ ಎಂಗೇಜ್‌ ಮೆಂಟ್‌ ಮಾಡಿಕೊಂಡ್ರಾ? ಎಂಬ ಪ್ರಶ್ನೆ ಸಹಜವಾಗಿ ಅಭಿಮಾನಿಗಳನ್ನು ಕಾಡುತ್ತಿದೆ.

ತಮ್ಮ ಔಟ್‌ಫಿಟ್‌(Outfit)ಗಳ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುವುದು ಸಹಜ. ಅಷ್ಟೇ ಅಲ್ಲ. ಯಾರೇನೇ ಟ್ರೋಲ್ ಮಾಡಿದರು ಕೂಡ ಕ್ಯಾರೇ ಎನ್ನದೆ ಟ್ರೊಲ್ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್(Urfi Javed New Look) ಕೊಡುತ್ತಾರೆ.

ನಟಿ ಉರ್ಫಿ ಜಾವೇದ್ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುವುದು ಕಾಮನ್. ಇದೀಗ ಹೊಸ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ನಟಿ ಉರ್ಫಿ ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಿ-ಟೌನ್ ಅಂಗಳದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಇಂಬು ನೀಡುವಂತೆ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉರ್ಫಿ ಜಾವೇದ್‌ ಅವರು ದೇವಸ್ಥಾನವೊಂದರಲ್ಲಿ ಹುಡುಗನ ಜೊತೆ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Uorfi Javed

ಹವನ ಕುಂಡದ ಮುಂದೆ ಉರ್ಫಿ ಜಾವೇದ್‌ ಹುಡುಗನೊಬ್ಬನ ಜೊತೆ ಕುಳಿತಿದ್ದು, ಪಕ್ಕದಲ್ಲಿ ಪೂಜಾ ಕಾರ್ಯಕ್ರಮಕ್ಕೆ ಅರ್ಚಕರು ಕೂಡ ಇದ್ದಾರೆ. ಇದು ರೋಕಾ ಸಮಾರಂಭ ಎಂದು ಕೆಲ ಅಭಿಮಾನಿಗಳು ಹೇಳುತ್ತಿದ್ದು, ಉರ್ಫಿ ಜಾವೇದ್‌ ರಹಸ್ಯವಾಗಿ ಎಂಗೇಜ್‌ ಮೆಂಟ್‌ ಮಾಡಿಕೊಂಡಿದ್ದಾರಾ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.ಈ ಫೋಟೋಗಳನ್ನು ಅವರ ಸಹೋದರಿ ಉರುಸಾ ಜಾವೇದ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಆದರೆ, ಈ ಕುರಿತು ಉರ್ಫಿ ಹಾಗೂ ಆಕೆಯ ಕುಟುಂಬಸ್ಥರು ಈವರೆಗೂ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ಇದನ್ನೂ ಓದಿ : New SIM Rules: ಸಿಮ್ ಕಾರ್ಡ್ ಬಳಕೆದಾರರೇ ಗಮನಿಸಿ- ಅಕ್ಟೋಬರ್ ನಿಂದ ನೀವು ಈ ನಿಯಮಗಳನ್ನು ಪಾಲಿಸಲೇಬೇಕು

Leave A Reply

Your email address will not be published.