H D kumarswamy: ಬಿಜೆಪಿ-ಜೆಡಿಎಸ್ ಮೈತ್ರಿ: ಮುಸ್ಲಿಮರೇ ನೀವಿನ್ನು ಎಚ್ಚರಿಕೆಯಿಂದಿರಿ ಎಂದ ಕುಮಾರಸ್ವಾಮಿ !! ಭಾರೀ ಕುತೂಹಲ ಕೆರಳಿಸಿದ ಮಾಜಿ ಸಿಎಂ ಹೇಳಿಕೆ

Karnataka Political news jds and bjp alliance hd kumaraswamy advises muslim brothers

H D Kumaraswamy: ರಾಜ್ಯದಲ್ಲಿ ಬಿಜೆಪಿ(BJP) ಮತ್ತು ಜೆಡಿಎಸ್(JDS) ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದರಿಂದ ಎರಡು ಪಕ್ಷಗಳಲ್ಲಿ ಕೆಲವು ನಾಯಕರು ಅತೃಪ್ತತರಾಗಿದ್ದಾರೆ. ಅದರಲ್ಲಿಯೂ ಕೂಡ ಜೆಡಿಎಸ್ ನ ಮುಸ್ಲಿಂ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ರಹಸ್ಯವಾಗಿ ಹಾಗೂ ಗೌಪ್ಯವಾಗಿ ಸಭೆ ನಡೆಸುತ್ತಿದ್ದಾರೆ. ಆದರೀಗ ಈ ಬೆನ್ನಲ್ಲೇ ಜೆಡಿಎಸ್ ನಾಯಕ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ(H D kumaraswamy) ಅವರು ಅವರ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಬಿಜೆಪಿ-ಜೆಡಿಎಸ್‌ ಮೈತ್ರಿ (BJP JDS Alliance) ಸಂಬಂಧ ಬಿಡದಿಯ ತೋಟದ ಮನೆಯಲ್ಲಿ ಭಾನುವಾರ (ಅ.1) ನಡೆಸಿದೆ ಸಭೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಸಂಬಂಧಕ್ಕೆ ಜೆಡಿಎಸ್ ನಾಯಕರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿಯಿಂದ ಯಾರ ರಾಜಕೀಯ ಭವಿಷ್ಯವನ್ನೂ ಹೊಸಕಿ ಹಾಕಲ್ಲ. ಆದರೆ, ಮುಸಲ್ಮಾನ ಬಂಧುಗಳು ಎಚ್ಚರಿಕೆಯಿಂದ ಇರಿ ಎಂದಿದ್ದಾರೆ.

ಅಲ್ಲದೆ ಬಳಿಕ ಮಾತನಾಡಿದ ಅವರು ಕೆಲ ಕಾಂಗ್ರೆಸ್‌ ನಾಯಕರು (Congress Leaders) ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಮತಕ್ಕಾಗಿ ಒಂದು ಸಮಾಜವನ್ನ ಓಲೈಕೆ ಮಾಡುವ ಅವಶ್ಯಕತೆಯಿಲ್ಲ ಎಂದರು. ಹೀಗಾಗಿ ಮುಸ್ಲಿಂ ಬಾಂಧವರು ಎಚ್ಚರಿಕೆಯಿಂದ ಇರಬೇಕು. ಮುಂದಿನ ಒಂದು ತಿಂಗಳೊಳಗೆ 31 ಜಿಲ್ಲೆಗಳಲ್ಲೂ ಸಭೆ ಮಾಡ್ತೀವಿ. ಎಲ್ಲಾ ಸಮಸ್ಯೆಗಳನ್ನ ಬಗೆಹರಿಸುವ ಕೆಲಸ ಆಗುತ್ತದೆ. ಮೈತ್ರಿಯಿಂದ ನಮ್ಮ ಅಭ್ಯರ್ಥಿಗಳಿಗೆ ಟಿಕೇಟ್ ಸಮಸ್ಯೆಗಳು ಉಂಟಾಗಲ್ಲ. ಈ ಬಗ್ಗೆ ನಾನು ಭರವಸೆ ಕೊಡುತ್ತೇನೆ. ಅದರ ಬಗ್ಗೆ ಕೂತು ಮುಕ್ತವಾಗಿ ಚರ್ಚೆ ಮಾಡುತ್ತೇವೆ. ಹೊಂದಾಣಿಕೆಯಿಂದ ಯಾರ ರಾಜಕೀಯ ಭವಿಷ್ಯವನ್ನೂ ಹೊಸಕಿ ಹಾಕಲ್ಲ. ಶಾಸಕ ಜಿ.ಡಿ. ದೇವೇಗೌಡರ ನೇತೃತ್ವದ ಕೋರ್ ಕಮಿಟಿ ರಚಿಸಿ ಸಂಘಟನೆ ಮಾಡ್ತೀವಿ ಎಂದು ತಿಳಿಸಿದರು.

ಮುಂದೆ ಮಾತನಾಡಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಏನು ಬೇಕಾದ್ರೂ ಅವಹೇಳನ ಮಾಡಲಿ. ನನ್ನ ಕಾರ್ಯಕರ್ತರು, ನಾಡಿನ ಜನತೆ ಉತ್ತರ ಕೊಡ್ತಾರೆ. ಇನ್ಮುಂದೆ ಅವರ ಯಾವ ಟೀಕೆಗೂ ಉತ್ತರ ಕೊಡಲ್ಲ. 17ಜನ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದಾರೆ. ನನ್ನ ತೀರ್ಮಾನಕ್ಕೆ ಎಲ್ಲರ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಮುಖ್ಯವಾಗಿ ಮುಸಲ್ಮಾನ ಮುಸಲ್ಮಾನ ಬಂಧುಗಳಿ ಎಚ್ಚರಿಕೆಯಿಂದ ಇರಬೇಕು. ಕೆಲ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡ್ತಿದ್ದಾರೆ. ನಾನು ಮತಕ್ಕಾಗಿ ಒಂದು ಸಮಾಜವನ್ನ ಓಲೈಕೆ ಮಾಡುವ ಅವಶ್ಯಕತೆ ಇಲ್ಲ. ಮುಸಲ್ಮಾನ ಬಂದುಗಳ ಬಗ್ಗೆ ನನ್ನ ಕಮಿಟ್‌ಮೆಂಟ್ ಏನು ಅಂತ ಗೊತ್ತು. ಕಳೆದ ಬಾರಿ ಉಂಟಾದ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ಅವರ ಪರವಾಗಿ ನಿಂತಿದ್ದು ನಾನು. ಹಾಗಾಗಿ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: Roopesh shetty: ಧರ್ಮಸ್ಥಳ ಸೌಜನ್ಯ ಪ್ರಕರಣದ ಕುರಿತು ಕೊನೆಗೂ ಮೌನ ಮುರಿದ ರೂಪೇಶ್ ಶೆಟ್ಟಿ- ಕೊರಗಜ್ಜನ ಬಳಿ ಕರಾವಳಿ ನಟ ಬೇಡಿದ್ದೇನು ?!

Leave A Reply

Your email address will not be published.