WhatsApp Updates: ವ್ಯಾಟ್ಸ್ಆ್ಯಪ್‌ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಓದುವುದು ಹೇಗೆ ಗೊತ್ತಾ ?! ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

Technology news Whatsapp updates simple tips to read delete for everyone WhatsApp message

Whatsapp Updates: ವಿಶ್ವದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (Whatsapp Updates) ಹಲವು ಉತ್ಕೃಷ್ಠವಾದ ಫೀಚರ್ಗಳನ್ನು ಹೊರತರುತ್ತಲೇ ಇರುತ್ತದೆ. ಈ ಪೈಕಿ ಅನೇಕರ ಗಮನ ಸೆಳೆದಿದ್ದು ಹಾಗೂ ಉಪಯುಕ್ತವಾದ ಫೀಚರ್ ಡಿಲೀಟ್ ಫಾರ್ ಎವರಿ ಒನ್. ನಮ್ಮಿಂದ ಯಾವುದೇ ಒಂದು ವ್ಯಕ್ತಿಗೆ ಅಥವಾ ಯಾವುದೇ ಗ್ರೂಪಿಗೆ ತಪ್ಪಾಗಿ ಮೆಸೇಜ್ ಫಾರ್ವರ್ಡ್ ಆಗಿದ್ದರೆ ಆ ಮೆಸೇಜನ್ನು ಆಗಿಂದಾಗ ನಮಗೆ ಡಿಲೀಟ್ ಮಾಡುವ ವ್ಯವಸ್ಥೆ ಇದಾಗಿದೆ.

ವ್ಯಾಟ್ಸ್ಆ್ಯಪ್ 2017ರಲ್ಲಿ ಡಿಲೀಟ್ ಫಾರ್ ಎವ್ರಿಒನ್ (Delete for Everyone) ಫೀಚರ್ ನೀಡಿದೆ. ಈ ಮೂಲಕ ಯಾರಿಗಾದರೂ ತಪ್ಪಿ ಸಂದೇಶ ಕಳುಹಿಸಿದರೆ, ಡಿಲೀಟ್ ಮಾಡಬಹುದು. ಆದರೆ ಹೀಗೆ ಡಿಲೀಟ್ ಆದ ಮೆಸೇಜ್ಗಳನ್ನು ಮತ್ತೆ ಓದಬಹುದು ಎಂಬುದು ನಿಮಗೆ ಗೊತ್ತಾ? ಮಾಡಿದ ಮೆಸೇಜ್ ಡಿಲೀಟ್ ಆಗಿದ್ದರೆ ಏನಿರಬಹುದು ಎಂಬ ಕುತೂಹಲ ಹೆಚ್ಚಾಗುತ್ತದೆ. ಇದೀಗ ಡಿಲೀಟ್ ಮೆಸೇಜ್‌ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ವ್ಯಾಟ್ಸ್‌ಆ್ಯಪ್‌ನಲ್ಲಿ ಡಿಲೀಟ್ ಆಗಿರುವ ಮೆಸೇಜ್‌ಗಳನ್ನು ಮತ್ತೆ ಓದಲು ಸಾಧ್ಯವಿದೆ. ವ್ಯಾಟ್ಸಪ್‌ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಓದುವುದು ಹೇಗೆ ಗೊತ್ತಾ ?! ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್ !

ಡಿಲೀಟ್ ಮೆಸೇಜ್ ರಿಟ್ರೀವ್ ಮಾಡಿ ಓದಲು ಸಾಧ್ಯವಿದೆ. ಆದರೆ ಈ ಅವಕಾಶ ಕೇವಲ ಆ್ಯಂಡಾಯ್ಡ್ ಫೋನ್ ಬಳಕೆದಾರರಿಗೆ ಮಾತ್ರ ಸಾಧ್ಯ. ಇದಕ್ಕೆ ಇತರ ಕೆಲ ಆ್ಯಪ್ ನೆರವು ಪಡೆಯಬೇಕು. ಗೂಗಲ್ ಪ್ಲೇಸ್ಟೋರ್‌ನಲ್ಲಿರುವ ಕೆಲ ಆ್ಯಪ್‌ಗಳಲ್ಲಿ ಅತ್ಯುತ್ತಮ ಆ್ಯಪ್ ಆಯ್ಕೆ ಮಾಡಿಕೊಂಡು ಡಿಲೀಟ್ ಮೆಸೇಜ್ ಓದಲು ಸಾಧ್ಯವಿದೆ.

ಗೂಗಲ್ ಪ್ಲೇಸ್ಟೋರ್‌ನಲ್ಲಿ ವ್ಯಾಟ್ಸ್ಆ್ಯಪ್ ಡಿಲೀಟೆಡ್ ಮೆಸೇಜ್ (WhatsApp deleted Messages) ಎಂದು ಸರ್ಚ್ ಮಾಡಿ.
ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ WAMR ಹಾಗೂ WhatsRemoved+ ಎಂಬ ಎರಡು ಆ್ಯಪ್ ರಿಟ್ರೀವ್ ಮಾಡಿ ಡಿಲೀಟ್ ಮೆಸೇಜ್ ಓದಲು ನೀಡುತ್ತದೆ. ಕೆಲ ಆ್ಯಪ್ ಮಿಡಿಯಾ ಫೈಲ್ ಕೂಡ ರಿಟ್ರೀವ್ ಮಾಡಲಿದೆ. ಹಾಗೇ ವ್ಯಾಟ್ಸ್ಆ್ಯಪ್ ನೋಟಿಫೀಕೆಶನ್‌ನಲ್ಲೂ ಡಿಲೀಟ್ ಮೆಸೇಜ್ ಓದಲು ಸಾಧ್ಯವಿದೆ. ಆದರೆ ನೋಟಿಫಿಕೇಶನ್‌ನಲ್ಲಿ ಸಂಪೂರ್ಣ ಮೆಸೇಜ್ ಓದಲು ಸಾಧ್ಯವಿಲ್ಲ.

ಇದನ್ನೂ ಓದಿ: Banking Time: ಬ್ಯಾಂಕ್ ಗಳ ಅವಧಿಯಲ್ಲಿ ಮಹತ್ವದ ಬದಲಾವಣೆ !! ಗ್ರಾಹಕರೇ.. ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

Leave A Reply

Your email address will not be published.