Shivamogga Riots: ಶಿವಮೊಗ್ಗದಲ್ಲಿ ಕೋಮು ಸಂಘರ್ಷ, ಈದ್ ಮಿಲಾದ್ ಸಂದರ್ಭ ಮನೆಗಳ ಮೇಲೆ ಕಲ್ಲು ತೂರಾಟ- 30 ಜನರ ಬಂಧನ !

ಶಿವಮೊಗ್ಗದಲ್ಲಿ (Shivamogga Riots) ಈದ್ ಮಿಲಾದ್ (Eid Milad) ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳಿಂದ ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಈ ಘಟನೆ ನಡೆದಿದೆ.

ಈದ್ ಮಿಲಾದ್ ಮೆರವಣಿಗೆ ನಂತರ ಈ ಘಟನೆ ನಡೆದಿದ್ದು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಪೊಲೀಸರು 30 ಜನರನ್ನು ವಶಕ್ಕೆ ಪಡೆದಿದ್ದಾರೆ. ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಮನೆಗಳಿಗೆ ಕಲ್ಲು ಬಿದ್ದಿದೆ ಮನೆಗಳ ಕಿಟಕಿ ಗಾಜು ಪುಡಿ ಪುಡಿಯಾಗಿದೆ.

ಇದೀಗ ಪೊಲೀಸರು ಸೆಕ್ಷನ್ 144 ಜಾರಿಗೊಳಿಸಿದ್ದು ಸ್ಥಳಕ್ಕೆ ಹೆಚ್ಚಿನ ಭದ್ರತೆ ನೀಡುತ್ತಿದ್ದಾರೆ. ಸ್ಥಳಕ್ಕೆ ಪೂರ್ವ ವಲಯ ಐಜಿಪಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರ ಜೊತೆ ರಾಪಿಡ್ ಆಕ್ಷನ್ ಫೋರ್ಸ್ (RAF )ತಂಡ ಆಗಮಿಸಿ ಪರಿಸ್ಥಿತಿಯನ್ನು ಕಂಟ್ರೋಲಿಗೆ ತಗೊಂಡಿದ್ದಾರೆ. ಕೆಲವು ಕಡೆ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದ್ದಾರೆ.

ಇಂದು ಬೃಹತ್‌ ಮಟ್ಟದ ಈದ್ ಮಿಲಾದ್‌ ಅಂಗವಾಗಿ ಮೆರವಣಿಗೆಯನ್ನು ಶಿವಮೊಗ್ಗದಲ್ಲಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ರಾಗಿಗುಡ್ಡದಿಂದ ಒಂದು ಮುಸ್ಲಿಂ ಗುಂಪು ಗಾಂಧಿ ಬಜಾರ್ ನಿಂದ ಹೊರಡುವ ಮೆರವಣಿಗೆ ಹೊರಡುವ ಇನ್ನೊಂದು ಗುಂಪನ್ನು ಸೇರಿಕೊಳ್ಳಲು ಚಿಕ್ಕದಾಗಿ ಮೆರವಣಿಗೆ ಹೋಗಲಾಗುತ್ತಿತ್ತು. ರಾಗಿಗುಡ್ಡದಿಂದ ಮೆರವಣಿಗೆ ಹೊರಟಾಗ ಹಿಂದೂ ದೇಗುಲದ ಬಳಿ ಮೆರವಣಿಗೆ ಹಿಂಬದಿಯ ಯುವಕನ ಜೊತೆ ಮಾತಿನ ಚಕ್ರಮಕಿ ನಡೆದಿದೆ ಎನ್ನಲಾಗಿದೆ. ಈ ಮಾತಿನ ಚಕಮಕಿಯಿಂದಾಗಿ ಮುಂದೆ ಸಾಗಿದ್ದ ಮೆರವಣಿಗೆ ಮತ್ತೆ ಮರಳಿ ಬಂದಿದೆ. ಅದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ಈ ವೇಳೆ ಕೆಲ ವ್ಯಕ್ತಿಗಳು ಈದ್‌ ಮಿಲಾದ್‌ ಮೆರವಣಿಗೆ ಹೊರಟಿದ್ದ ಗುಂಪಿನ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಈ ವೇಳೆ ಎರಡು ಕೋಮಿನ ಯುವಕರ ಗುಂಪಿನಿಂದ ಕಲ್ಲುತೂರಾಟ ಮಾಡಲಾಗಿದೆ. ಕಲ್ಲುತೂರಾಟ ಹಿನ್ನೆಲೆ ಹಲವು ಕಾರು, ಬೈಕು, ರಿಕ್ಷಾ ಮನೆಗಳ ಕಿಟಕಿ ಗಾಜುಗಳು ಜಖಂ ಆಗಿವೆ. ಕಲ್ಲು ತೂರಾಟದಿಂದ ಹಲವರಿಗೆ ಗಾಯಗಳಾಗಿವೆ.

ಪ್ರಚೋದನಕಾರಿ ಫ್ಲೆಕ್ಸ್ ಹಾಕಿದ್ದೆ ಘಟನೆಗೆ ಮೂಲ ಕಾರಣ ಎನ್ನಲಾಗಿದೆ. ಇದಕ್ಕೆಲ ಮೂಲ ಕಟೌಟ್ ಎನ್ನಲಾಗುತ್ತಿದೆ. ಅಲ್ಲಿ ಟಿಪ್ಪುವಿನ ಖಡ್ಗ ಇಟ್ಟುಕೊಂಡ, ಆತ ಹಿಂದೂ ಸೈನಿಕರನ್ನು ಕೊಳ್ಳುವಂತಹಾ ಪೋಸ್ಟ ಹಾಕಿದ ಕಾರಣ ಶಿವಮೊಗ್ಗದಲ್ಲಿ ಆಕ್ರೋಶಕ್ಕೆ ಕಾರಣ ಆಗಿತ್ತು. ನಂತರ ಪೊಲೀಸರು ಮಧ್ಯೆ ಪ್ರವೇಶಿಸಿ ಎಸ್ಪಿಯವರ ನೇತೃತ್ವದಲ್ಲಿ ಸಭೆ ನಡೆದಿತ್ತ್ತು. ನಂತರ ಸೈನಿಕರ ಚಿತ್ರದ ಮೇಲೆ ಬಿಳಿ ಬಣ್ಣ ಬಳಿಯಲಾಗಿತ್ತು. ಆ ನಂತರ ಕೆಲವರು ಆ ಬಿಳಿ ಬಣ್ಣದ ಮೇಲೆ ಟಿಪ್ಪು ಶೇರ್ ಅಂತ ಬರೆದಿದ್ದರು. ಈ ಹಿನ್ನೆಲೆಯಲ್ಲಿ, ಅಸಮಾಧಾನ ಮತ್ತು ಮಾತಿನ ಚಕಮಕಿಯ ನಂತರ ಈ ಸಂಘರ್ಷಕ್ಕೆ ನಂದಿ ಹಾಕಿದೆ ಎನ್ನಲಾಗಿದೆ.

Leave A Reply

Your email address will not be published.