P M Modi: ಲೋಕಸಮರದಲ್ಲಿ ಗೆದ್ದು ಮುಂದಿನ ಪ್ರಧಾನಿಯಾಗೋದು ಯಾರು ?! ಭಾರೀ ಕುತೂಹಲ ಕೆರಳಿಸಿದ ಪ್ರಧಾನಿ ಮೋದಿ ಹೇಳಿಕೆ
National news politics news P M Narendra Modi statement about Who will win the lok sabha polls 2023
P M Modi: ದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಈಗಿಂದಲೇ ತಯಾರಿ ನಡೆಸುತ್ತಿವೆ. ಪ್ರಧಾನಿ ಮೋದಿ(P M Modi) ಅವರನ್ನು ಮಣಿಸಬೇಕು, ಸೋಲಿಸೇ ತೀರುತ್ತೇವೆ ಎಂಬ ನಂಬಿಕೆಯಿಂದ 26 ವಿಪಕ್ಷಗಳು ಒಟ್ಟು ಸೇರಿ ‘ಇಂಡಿಯಾ'(INDIA) ಮೈತ್ರಿಕೂಟವನ್ನು ರಚಿಸಿಕೊಂಡು ಚುನಾವಣೆಗೆ ಅಣಿಯಾಗಿ ನಿಂತಿವೆ. ಇತ್ತ ಇದಕ್ಕೆ ಕೌಂಟ್ರು ಕೊಡೋ ನಿಟ್ಟಿನಲ್ಲಿ ಬಿಜೆಪಿ(BJP) ನೇತೃತ್ವದದಲ್ಲಿ 36 ಪಕ್ಷಗಳು ಒಗ್ಗಟ್ಟಾಗಿ NDA ಮೈತ್ರಿಕೂಟ ಮಾಡಿಕೊಂಡಿವೆ.
ಲೋಕಸಮರದ ಕಾವು ಕಾವೇರುತ್ತಿದೆ. ವಿಪಕ್ಷಗಳು, ಆಡಳಿತ ಪಕ್ಷಗಳು ರಾಜಕೀಯ ತಂತ್ರ ಹೆಣೆಯುತ್ತಾ, ಮೈತ್ರಿ ಮಾಡಿಕೊಳ್ಳುತ್ತಾ ಚುನಾವಣೆ ಎದುರಿಸಲು ಸಿದ್ಧವಾಗಿವೆ. ರಾಜಕೀಯ ನಾಯಕರು ಮುಂದೆ ನಾವು ಗೆಲ್ಲೋದು, ನಾವು ಗೆಲ್ಲೋದು ಎನ್ನುತ್ತಾ ಪೂಂಕಾನುಪೂಂಕವಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ಅಚ್ಚರಿ ಎಂದರೆ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಭೀಗಿದರೂ ಆಗ ಚುನಾವಣಾ ಪೂರ್ವದಲ್ಲಿ ಕೊಂಚವೂ ಮೌನ ಮುರಿಯದ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಹ್ಯಾಟ್ರಿಕ್ ಭಾರಿಸಲು ರೆಡಿಯಾಗಿದ್ದು ಈ ಸಲದ ಚುನಾವಣೆಯಲ್ಲಿ ನಾನೇ ಗೆಲ್ಲೋದು ಎಂದು ಪರೋಕ್ಷವಾಗಿ ಆಗಾಗ ಹೇಳುತ್ತಿದ್ದಾರೆ. ಅಂತೆಯೇ ಇದೀಗ ಪ್ರಧಾನಿ ಅವರು ನೀಡಿದ ಹೇಳಿಕೆಯೊಂದು ಭಾರೀ ಕುತೂಹಲ ಕೆರಳಿಸಿದೆ.
ಹೌದು, ನವದೆಹಲಿಯಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯ ಭಾಗವಾಗಿ 100 ಮಹತ್ವಾಕಾಂಕ್ಷಿ ವಲಯಗಳ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, 2024ರ ಅಕ್ಟೋಬರ್ ನವೆಂಬರ್ ನಲ್ಲಿ ನಾವು ಯೋಜನೆಯ ಮೌಲ್ಯ ಮಾಪನ ಮಾಡಲು ಇಲ್ಲಿ ಸೇರುತ್ತೇವೆ ಎಂಬ ಭರವಸೆ ನನಗಿದೆ ಎಂದಿದ್ದಾರೆ. ಈ ಮೂಲಕ 2024ರಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಸಂದೇಶವನ್ನು ಪ್ರಧಾನಿ ಮೋದಿ ರವಾನಿಸಿದ್ದಾರೆ.
ಇದನ್ನೂ ಓದಿ : U T Khadar: ಮುಸ್ಲಿಂ ನಾಯಕ ಯುಟಿ ಖಾದರ್ ಗೆ ಮುಂದಿನ ಸಿಎಂ ಪಟ್ಟ ?! ಕುತೂಹಲ ಕೆರಳಿಸಿದ ಡಿ ಕೆ ಶಿವಕುಮಾರ್ ಹೇಳಿಕೆ !!