Mysuru: ಅಜ್ಜಿಯ ತಿಥಿ ಕಾರ್ಯಕ್ಕೆ ಬಂದವರು ನಾಲೆಗೆ ಬಿದ್ದು ಸಾವು! ಒಂದೇ ಕುಟುಂಬದ ಮೂವರು ನೀರುಪಾಲು!

Mysuru news three member of same family drown in canal in mysore

Share the Article

Mysuru: ದುರದೃಷ್ಟ ಅಂದರೆ ಇದೇ ಅನಿಸುತ್ತೆ. ಹೌದು, ಒಂದೇ ಕುಟುಂಬದ ಮೂವರು ನೀರು ಪಾಲಾದ ಮನ ಕಲಕುವ ಘಟನೆ ಮೈಸೂರು (Mysuru) ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಾಹಿತಿ ಪ್ರಕಾರ, ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ 20 ವರ್ಷದ ಪುತ್ರಿ ಶಾಹೀರಾ ಭಾನು ವನ್ನು ರಕ್ಷಿಸಲು ಹೋಗಿ ಆಕೆಯ ತಂದೆ ಮಹಮ್ಮದ್ ಕಪೀಲ್ ಮತ್ತು ತಾಯಿ ಶಾವರ ಭಾನು ನಾಲೆಯಲ್ಲಿ ಕೊಚ್ಚಿ ಹೋಗಿದ್ದಾರೆ.

ಒಂದೇ ಕುಟುಂಬದ ಮೂವರು ಅಜ್ಜಿಯ ತಿಥಿ ಕಾರ್ಯ ಮುಗಿಸಿ ನುಗು ಜಲಾಶಯದ ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಈ ಘಟನೆ ನಡೆದಿದೆ.

ಪುತ್ರಿ ಶಾಹೀರಾ ಭಾನು ಮೊದಲಿಗೆ ಕಾಲು ಜಾರಿ ಬಿದಿದ್ದು, ರಕ್ಷಣೆಗೆ ಹೋದ ಅಪ್ಪ, ಅಮ್ಮ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ, ಮೂವರ ಮೃತ ದೇಹ ಹೊರಕ್ಕೆ ತೆಗೆದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಇದನ್ನೂ ಓದಿ: Astro Tips: ನಿಮ್ಮ ಮನೆಯಲ್ಲಿ ವಿಚಿತ್ರ ವಿಚಿತ್ರವಾಗಿ ಹೀಗೆಲ್ಲಾ ಆಗುತ್ತಾ?! ಹಾಗಿದ್ರೆ ಹುಷಾರ್, ಮನೆತುಂಬಾ ದುಷ್ಟ ಶಕ್ತಿ ಆವರಿಸಿರೋದು ಪಕ್ಕಾ.. !!

Leave A Reply