Karnataka: ರಾಜ್ಯದ ಎಲ್ಲಾ ಉಪನ್ಯಾಸಕರಿಗೆ ಶಾಕ್ ಕೊಟ್ಟ ಸರ್ಕಾರ- ಇದೊಂದು ತಪ್ಪು ಮಾಡಿದ್ರೆ ನಿಮ್ಮ ಕೆಲಸಕ್ಕೇ ಬರುತ್ತೆ ಕುತ್ತು

Education news Karnataka government give shock to government lecture who work in coaching centre and tutorials

 

Karnataka: ರಾಜ್ಯ ಸರ್ಕಾರ(Karnataka Government)ಬೆಂಗಳೂರು ಸರ್ಕಾರಿ ಅನುದಾನಿತ ಶಾಲೆ ಕಾಲೇಜುಗಳ ಉಪನ್ಯಾಸಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಉಪನ್ಯಾಸಕರೇ, ಈ ವಿಚಾರ ಮೊದಲು ತಿಳಿದುಕೊಳ್ಳಿ. ಒಂದು ವೇಳೆ ಈ ತಪ್ಪು ಮಾಡಿದಲ್ಲಿ ನೀವು ಕೆಲಸ (Job) ಕಳೆದುಕೊಳ್ಳೋದು ಗ್ಯಾರಂಟೀ !!

ಟುಟೋರಿಯಲ್, ಕೋಚಿಂಗ್ ಸೆಂಟರ್ಗಳಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡಿದ್ದರೆ ಆ ರೀತಿಯ ಉಪನ್ಯಾಸಕರಿಗೆ ಸರ್ಕಾರಿ ಕತ್ತರಿ ಬೀಳೋದು ಫಿಕ್ಸ್ . ಹೌದು, ಈ ಆದೇಶವನ್ನು ಸರ್ಕಾರವೇ ಹೊರಡಿಸಿದ್ದು,ಸರ್ಕಾರಿ ಅನುದಾನಿತ ಶಾಲೆ ಕಾಲೇಜುಗಳ ಉಪನ್ಯಾಸಕರು ಖಾಸಗಿ ಟುಟೋರಿಯಲ್ ನಡೆಸುವಂತಿಲ್ಲ. ಅಷ್ಟೇ ಅಲ್ಲದೆ, ಕೋಚಿಂಗ್ ಸೆಂಟರ್ ಅಲ್ಲಿ ಕೆಲಸ ಮಾಡಲು ಅವಕಾಶವಿಲ್ಲ. ಈ ರೀತಿ ಪಾಠ-ಪ್ರವಚನ ಮಾಡುವುದು ಅಪರಾಧವಾಗಿದ್ದು, ಅವರು ಕೆಲಸವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇದಲ್ಲದೆ, ಈ ರೀತಿಯ ಟುಟೋರಿಯಲ್ಗಳನ್ನು ಸ್ಥಗಿತಗೊಳಿಸುವುದಾಗಿ ಸರ್ಕಾರ ಸೂಚನೆ ನೀಡಿದೆ.

ಟುಟೋರಿಯಲ್ ನಡೆಸಲು ಅರ್ಹತೆಗಳು ಹೀಗಿವೆ:
# ನಿಗದಿತ ವಿಸ್ತೀರ್ಣವುಳ್ಳ ತರಗತಿ ಕೋಣೆಗಳು, ಶೌಚಾಲಯ, ನೀರಿನ ವ್ಯವಸ್ಥೆ ಕಡ್ಡಾಯವಾಗಿರಬೇಕು.
# ಪ್ರತಿ ವಿದ್ಯಾರ್ಥಿಗೆ ಕನಿಷ್ಠ 5ರಿಂದ 7 ಚದರ ಅಡಿ ವಿಸ್ತೀರ್ಣದ ಜಾಗವನ್ನು ಒಳಗೊಂಡಿರಬೇಕು.
# ಗರಿಷ್ಠ 30 ವಿದ್ಯಾರ್ಥಿಗಳಿಗೆ ಅನುಗುಣವಾಗಿ ಪೀಠೋಪಕರಣಗಳ ವ್ಯವಸ್ಥೆ ಹೊಂದಿರಬೇಕು.
# ವಿದ್ಯಾರ್ಥಿಗಳಿಂದ ಪಡೆದ ಟಟೋರಿಯಲ್ ಶುಲ್ಕದ ವಿವರಗಳನ್ನು ರಶೀದಿಗಳ ಸಮೇತ ಸಲ್ಲಿಸಬೇಕು.
# ಪರಿಣಿತ ಉಪನ್ಯಾಸಕರು, ಶಿಕ್ಷಕರನ್ನು ನೇಮಕಾತಿ ಕಡ್ಡಾಯವಾಗಿದ್ದು, ವಿದ್ಯಾರ್ಹತೆ, ಅನುಭವ, ಸಂಭಾವನೆ ವಿವರಗಳನ್ನು ಇಲಾಖೆಗೆ ಸಲ್ಲಿಸಬೇಕು.
ಮೇಲೆ ತಿಳಿಸಿದ ನಿಯಮಗಳನ್ನು ಉಲ್ಲಂಸಿದರೆ, ಸಂಸ್ಥೆಯ ನೋಂದಣಿಯನ್ನು ರದ್ದುಗೊಳಿಸಿ ಟುಟೋರಿಯಲ್ ಕಾರ್ಯವನ್ನು ಸ್ಥಗಿತಗೊಳಿಸಲಾಗುತ್ತದೆ.

ಆದೇಶದಲ್ಲಿ ಏನಿದೆ?
* ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 35 ಮತ್ತು ಕರ್ನಾಟಕ ಟುಟೋರಿಯಲ್ ಇನ್ಸ್ಟಿಟ್ಯೂಷನ್ಸ್-2001ರ ಅನುಸಾರ, ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
* ನಿಯಮಗಳ ಪ್ರಕಾರ ಪ್ರತಿ ವರ್ಷ ಇಲಾಖೆಗೆ ವಾರ್ಷಿಕ ವರದಿಯನ್ನು ಸಲ್ಲಿಕೆ ಮಾಡಿ ನೋಂದಣಿ ನವೀಕರಣ ಮಾಡಿಕೊಳ್ಳಬೇಕು.
* ಡಿಪ್ಲೊಮೊ, ಎಂಜಿನಿಯರಿಂಗ್, ಇತರೆ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ ಟುಟೋರಿಯಲ್ ಸಂಸ್ಥೆ ಕಾರ್ಯ ನಿರ್ವಹಿಸಲು ಅನುಮತಿ ಕಡ್ಡಾಯವಾಗಿದೆ.
* ಅನಧಿಕೃತವಾಗಿ ಮನೆಪಾಠ, ಸಿಇಟಿ ಕೋಚಿಂಗ್ ಸೇರಿ ಇತರೆ ಟುಟೋರಿಯಲ್ಗಳನ್ನು, ಅನಧಿಕೃತ ಸಂಸ್ಥೆಗಳನ್ನು ಹೊಂದುವುದು ಕೂಡ ಅಪರಾಧವಾಗುತ್ತದೆ.

ಇದನ್ನೂ ಓದಿ: ಬೆಂಗಳೂರು ಕಂಬಳದ ಕೋಣಗಳಿಗೆ ಮಂಗಳೂರಿಂದಲೇ ಕುಡಿವ ನೀರು ಪೂರೈಕೆ ?! ಅರೆ.. ಯಾಕೆ ಹೀಗೆ?!

Leave A Reply

Your email address will not be published.