Mangalore: Be carefull…ಇನ್ಸ್ಟಾಗ್ರಾಮ್ ನಲ್ಲಿ ಹಣಕ್ಕಾಗಿ ಯುವಕರಿಗೆ ಗಾಳ!! ಚೆಂದದ ಯುವತಿಯರಿಂದ ಚಾಟ್ – ಫೋನ್ ಕರೆ
Dhakshina kannada news women Instagram scam online frauds on Instagram in Mangalore


Mangalore:ಯುವತಿಯನ್ನಿಟ್ಟುಕೊಂಡು ಇನ್ಸ್ಟಾಗ್ರಾಮ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಚಾಟ್ ನಲ್ಲೇ ಹಣಕ್ಕಾಗಿ ಬೇಡಿಕೆಯಿಡುವ ಬೃಹತ್ ಜಾಲವೊಂದು ಸದ್ದಿಲ್ಲದೇ ಹಲವರ ಜೇಬಿಗೆ ಕತ್ತರಿ ಹಾಕಿದ ಬಗ್ಗೆ ಸುದ್ದಿಯೊಂದು ಹರಿದಾಡಿದೆ(Mangalore).

ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿರುವ ಯುವಕರನ್ನೇ ಬಲೆಗೆ ಬೀಳಿಸಿಕೊಳ್ಳುವ ಯುವತಿಯರು ಮೊದಲಿಗೆ ಚಾಟ್ ಮಾಡುತ್ತಿದ್ದು, ಚಾಟ್ ನಲ್ಲಿ ಮೊಬೈಲ್ ನಂಬರ್ ಪಡೆದ ಬಳಿಕ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ.

ಈಗಾಗಲೇ ಕೆಲ ಯುವಕರು ಮಳ್ಳಿಯರ ಮಾತಿಗೆ ಮರುಳಾಗಿ ಹಣ ನೀಡಿದ್ದು, ವಾಪಸ್ಸು ಕೇಳಿದಾಗ ಬ್ಲ್ಯಾಕ್ ಮೇಲ್ ಕೂಡಾ ನಡೆಯುತ್ತಿದೆ ಎನ್ನಲಾಗಿದೆ.ಈ ಬಗ್ಗೆ ಯಾರೂ ದೂರು ನೀಡದಂತೆಯೂ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.
ಬುದ್ಧಿವಂತರ ಜಿಲ್ಲೆಯಲ್ಲಿ ಇಂತಹ ಕೆಲ ಕೃತ್ಯಗಳು ಸಾವು ನೋವಿಗೆ ಕಾರಣವಾಗುವ ಕಾಲ ಸನ್ನಿಹಿತವಾಗುವ ಮುನ್ನ ಇಲಾಖೆ ಇಂತಹ ಜಾಲವನ್ನು ಮಟ್ಟ ಹಾಕಬೇಕಾಗಿದೆ.
ಇದನ್ನೂ ಓದಿ: Puttur: ಕೆವೈಸಿ ಹೆಸರಲ್ಲಿ ಲಕ್ಷ ರೂ. ಕಳೆದುಕೊಂಡ ಕಾರ್ಮಿಕ : ಜಾಗೃತಿ ಮೂಡಿಸುತ್ತಿದ್ದರೂ ಹಣ ಕಳೆದುಕೊಳ್ಳುವುದು ನಿಂತಿಲ್ಲ
