Knife attack in London: ಶಾಲೆಗೆಂದು ತೆರಳುತ್ತಿದ್ದ ವಿದ್ಯಾರ್ಥಿನಿಗೆ ಅಪ್ರಾಪ್ತ ಬಾಲಕನಿಂದ ಚೂರಿ ಇರಿದು ಹತ್ಯೆ!

World news knife attack 15 year old girl Stabbed To Death On Way To School In london

Share the Article

Knife attack in London: ಶಾಲೆಗೆಂದು ತೆರಳುತ್ತಿದ್ದ ವಿದ್ಯಾರ್ಥಿನಿಯೋರ್ವಳ ಮೇಲೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆಯೊಂದು ಲಂಡನ್‌ನಲ್ಲಿ(Knife attack in London) ನಡೆದಿದೆ. ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಅಪ್ರಾಪ್ತ ಬಾಲಕನೋರ್ವ ಚೂರಿಯಿಂದ ಇರಿದಿದ್ದಾನೆ. ಈ ಘಟನೆ ದಕ್ಷಿಣ ಲಂಡನ್‌ನ ಕ್ರಾಯ್‌ಡಾನ್‌ನಲ್ಲಿ ನಡೆದಿದೆ.

ಈ ಘಟನೆ ಬೆಳಗ್ಗೆ 8.30ರ ಸುಮಾರಿಗೆ ನಡೆದಿದ್ದು, ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆದರೆ ಬಾಲಕಿಯನ್ನು ಬದುಕಿಸಲು ವೈದ್ಯರು ಸತತ ಪ್ರಯತ್ನಪಟ್ಟರೂ ಆಕೆ ಬದುಕುಳಿಯದೇ ಮೃತಪಟ್ಟಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 17 ವರ್ಷದ ಅಪ್ರಾಪ್ತನನ್ನು ಬಂಧಿಸಲಾಗಿದೆ. ಚೂರಿ ಇರಿತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಇಂದು ಈ ರಾಶಿಯವರು ಕೈಗೊಂಡ ಕೆಲಸ ಕಾರ್ಯ ಸುಲಭವಾಗಿ ನಡೆಯುತ್ತದೆ!!!

Leave A Reply