Plastic surgery: ಮದುವೆಗಾಗಿ ಎದೆ ಗಾತ್ರ ಹೆಚ್ಚಿಸಲು ಮಾಸ್ಟರ್ ಪ್ಲಾನ್ ಮಾಡಿದ್ಲು ಈ ಸುಂದರಿ – ನಂತ ಆದದ್ದೇ ಭಯಾನಕ!!
World news 21 year old bride dies of cardiac arrest days after surgery in preparation for marriage
Plastic Surgery: ಮದುವೆ ಅನ್ನೋದು ವಧು ವರನಿಗೆ ವಿಶೇಷವಾದ ದಿನ. ಅದಲ್ಲದೆ ಮದುವೆಯನ್ನು ವಿಶೇಷವಾಗಿಸಲು ಅದ್ದೂರಿಯಾಗಿ ಸ್ಪೆಷಲ್ ಡೆಕೊರೇಶನ್, ಸಾಂಗ್ಸ್, ಡ್ರೆಸ್, ಪಾರ್ಟಿ ಎಲ್ಲವನ್ನೂ ಅರೇಂಜ್ ಮಾಡುತ್ತಾರೆ. ಆದರೆ ಇಲ್ಲೊಬ್ಬಳು ಮದುವೆ ದಿನ ಸುಂದರವಾಗಿ ಕಾಣಬೇಕೆಂದು ಹೃದಯದ ಅಂದವನ್ನು ಹೆಚ್ಚಿಸುವ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣವನ್ನೇ ತೆತ್ತಿರುವ ದುರಂತ ಘಟನೆ ನಡೆದಿದೆ.
ಹೌದು, ಇಟಲಿಯಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ಅಲೆಸಿಯಾ ನೆಬೊಸೊ ಯುವತಿ ತನ್ನ ಪ್ರಿಯಕರನೊಂದಿಗೆ ಮದುವೆ ಆಗಲು ರೆಡಿಯಾಗಿದ್ದು, ಇನ್ನೇನು ಮದುವೆ ದಿನಾಂಕ ಕೂಡ ಸಮೀಪದಲ್ಲಿತ್ತು. ಆದ್ರೆ ಅಲೆಸಿಯಾ ನೆಬೊಸೊ ಅವರಿಗೆ ತನ್ನ ಮದುವೆಯ ದಿನ ಮೈಕಟ್ಟು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದು ಆಸೆಯಿತ್ತು. ಅದರಲ್ಲೂ ಆಕೆಯ ಸ್ತನ ಎದ್ದು ಕಾಣಬೇಕೆಂದು ಬಯಸಿದ್ದಳು. ಈ ಕಾರಣದಿಂದ ಆಕೆ ಮದುವೆ ಮುನ್ನ ಸ್ತನದ ಗಾತ್ರವನ್ನು ದೊಡ್ಡದು ಮಾಡುವ ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆ.
ತನ್ನ ಆಸೆಯಂತೆಯೇ ಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡುವ ಸ್ಪೆಷಲಿಸ್ಟ್ ಕ್ಲಿನಿಕ್ಗೆ ಹೋಗಿ ಅಲೆಸಿಯಾ ನೆಬೊಸೊ ಸೆಪ್ಟೆಂಬರ್ 11 ರಂದು ಸರ್ಜರಿಯನ್ನು ಮಾಡಿಸಿಕೊಂಡು ಅದೇ ದಿನ ಡಿಸ್ಚಾರ್ಜ್ ಆಗಿ ಮನೆಗೆ ಹಿಂತಿರುಗಿದ್ದಾರೆ. ಆದರೆ ಎರಡು ದಿನ ನಂತರ ಅಲೆಸಿಯಾ ನೆಬೊಸೊ ಅವರಿಗೆ ವಿಪರೀತ ಜ್ವರ ಕಾಣಿಸಿಕೊಂಡಿದೆ. ಜೊತೆಗೆ ಆಯಾಸ, ಕೆಮ್ಮು, ವೀಕ್ ನೆಸ್ ಕಾಣಿಸಿಕೊಂಡಿದೆ. ಮಗಳ ಆರೋಗ್ಯ ಹದಗೆಟ್ಟಿದ್ದರಿಂದ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಪೋಷಕರ ಮಾಹಿತಿ ಪ್ರಕಾರ, ಆಸ್ಪತ್ರೆಗೆ ತಲುಪಿದ ಬಳಿಕ ಅಲೆಸಿಯಾ ನೆಬೊಸೊ ಸೆ.18 ರವರೆಗೆ ಸರಿಯಾಗಿಯೇ ಇದ್ದಳು. ಆದರೆ ಸಂಜೆ ವೇಳೆ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಮರುದಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಕಿಡ್ನಿ ಸೇರಿ ಕೆಲ ಅಂಗಾಂಗಗಳಲ್ಲಿ ಸಮಸ್ಯೆ ಜೊತೆಗೆ, ಅವಳ ಬಿಳಿ ರಕ್ತ ಕಣಗಳ ಸಂಖ್ಯೆ 17,000 ಆಗಿತ್ತು. ನಂತರ ನಾವು ಅಲ್ಟ್ರಾಸೌಂಡ್ ಮತ್ತು ಹೊಟ್ಟೆಯ ಸಿಟಿ ಸ್ಕ್ಯಾನ್ ಮಾಡಿದ್ದೇವೆ, ಎದೆಯ ಮತ್ತೊಂದು ಸಿಟಿ ಸ್ಕ್ಯಾನ್ ಮಾಡಿದ್ದೇವೆ. ಇದರಿಂದ ಸಮಸ್ಯೆ ಶ್ವಾಸಕೋಶದಿಂದ ಬರುತ್ತಿದೆ ಎಂದು ಗೊತ್ತಾಯಿತು. ಇದಾದ ಬಳಿಕ ನಾವು ಆಕೆಯನ್ನು ಐಸಿಯುಗೆ ದಾಖಲು ಮಾಡಿದ್ದೇವೆ. ಆದರೆ ಕೆಲ ಗಂಟೆಗಳ ಬಳಿ ಆಕೆ ಕಾರ್ಡಿಯಾಕ್ ಅರೆಸ್ಟ್ ನಿಂದ ಮೃತಪಟ್ಟಳು” ಎಂದು ಡಾ. ಸಿಕರೆಲ್ಲಿ ಹೇಳಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.
ಸದ್ಯ ಮೃತಳ ಪೋಷಕರು ಈ ಬಗ್ಗೆ ದೂರು ದಾಖಲಿಸಿದ್ದು, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಒಂದು ವೇಳೆ ತಪ್ಪುಗಳಾಗಿದ್ದರೆ ಅದು ಬೆಳಕಿಗೆ ಬರಬೇಕು. ವೈದ್ಯರಿಂದಾಗಿ ಅಲೆಸಿಯಾ ಸಾವನ್ನಪ್ಪಿದ್ದರೆ, ನಮಗೆ ನ್ಯಾಯ ಬೇಕೆಂದು ಅವಳ ಪೋಷಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಈ ಊರ ಹುಡುಗಿಯನ್ನು ಮದ್ವೆಯಾದ್ರೆ ಮಾವನಿಂದ ಸಿಗುತ್ತೆ ಬಂಪರ್ ಗಿಫ್ಟ್ – ಅಳಿಯನಿಗಂತೂ ಡಬಲ್ ಧಮಾಕ!!