Uttar Pradesh: ಈ ಊರ ಹುಡುಗಿಯನ್ನು ಮದ್ವೆಯಾದ್ರೆ ಮಾವನಿಂದ ಸಿಗುತ್ತೆ ಬಂಪರ್ ಗಿಫ್ಟ್ – ಅಳಿಯನಿಗಂತೂ ಡಬಲ್ ಧಮಾಕ!!

Uttar Pradesh news In this village grooms get land and house from father in law

Uttar Pradesh : ಬಯಸದೆ ಬರುವ ಭಾಗ್ಯವನ್ನು ಯಾರೂ ಬೇಡ ಅನ್ನೋಕೆ ಸಾಧ್ಯವಿಲ್ಲ. ಇನ್ನು ಗಂಡು ವರದಕ್ಷಿಣೆ (Marriage dowry) ತೆಗೆದುಕೊಳ್ಳುವುದು ಕಾನೂನು ಅಪರಾಧ ವಾಗಿರುವಾಗ ಮಾವನ ಮನೆಯಲ್ಲಿ ಆಸ್ತಿ ಹಾಗೂ ಮನೆ ಸಿಗುತ್ತೆ ಅಂದರೆ ಬೇಡ ಎನ್ನುವ ಅಳಿಯಂದಿರು ಸಿಗೋದು ತುಂಬಾನೇ ಕಮ್ಮಿ. ಅಂತೆಯೇ ಇಲ್ಲೊಂದು ಗ್ರಾಮದಲ್ಲಿ ಅಳಿಯಂದಿರಿಗೆ ಭೂಮಿ ಹಾಗೂ ಮನೆಗಳನ್ನು ನೀಡುವುದು ತಲ ತಲಾಂತರದ ಸಂಪ್ರದಾಯವಂತೆ. ಇದೇ ಕಾರಣಕ್ಕೆ ಈ ಗ್ರಾಮದ ಹುಡುಗಿಯರನ್ನು ಮದುವೆಯಾಗೋಕೆ ಅಕ್ಕಪಕ್ಕದ ಗ್ರಾಮದ ಹುಡುಗರು ನಾ ಮುಂದೆ ತಾ ಮುಂದೆ ಅಂತಾ ಕ್ಯೂ ನಿಲ್ಲುತ್ತಾರಂತೆ(Uttar Pradesh news).

ಹೌದು, ಮಾಹಿತಿ ಪ್ರಕಾರ ಬಹಳ ವರ್ಷಗಳ ಹಿಂದೆ ಈ ಗ್ರಾಮದ ನಿವಾಸಿಯೊಬ್ಬರು ಅತ್ಯಂತ ಬಡತನದಲ್ಲಿದ್ದ ತನ್ನ ಅಳಿಯನ ಕಷ್ಟವನ್ನು ನೋಡಲಾಗದೇ ತಮ್ಮ ಮನೆಯಲ್ಲಿಯೇ ಅಳಿಯನಿಗೆ ಇರಲು ಜಾಗ ನೀಡಿದ ಬಳಿಕ ಈ ಸಂಪ್ರದಾಯ ಶುರುವಾಯ್ತು ಎನ್ನಲಾಗಿದೆ. ನಂತರ ಈ ಸಂಪ್ರದಾಯ ಕಳೆದ ಮೂರು ಮುಂದುವರಿದುಕೊಂಡು ಬಂದಿದೆ. 1970ರ ದಶಕದಿಂದ ಈ ಸಂಪ್ರದಾಯ ಆರಂಭವಾಯ್ತು ಎಂದು ಗ್ರಾಮದ ಹಿರಿಯ ರಾಮ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಈ ಸಂಪ್ರದಾಯದಿಂದ ಈ ಗ್ರಾಮಕ್ಕೆ ಅಳಿಯಂದಿರ ಗ್ರಾಮ ಎಂಬ ಬಿರುದೇ ಬಂದಿದೆ. ಉತ್ತರ ಪ್ರದೇಶದ ದಾಮಾದನ್ ಪೂರ್ವದಲ್ಲಿರುವ ಈ ಗ್ರಾಮದಲ್ಲಿ ಸದ್ಯ 500ಕ್ಕೂ ಅಧಿಕ ಜನಸಂಖ್ಯೆಯಿದೆ. 250ಕ್ಕೂ ಅಧಿಕ ಮತದಾರರಿದ್ದಾರೆ. ಗ್ರಾಮದ ಹಿರಿಯರು ಹೇಳೋ ಪ್ರಕಾರ, ಕಳೆದ ಮೂರು ತಲೆಮಾರುಗಳಿಂದ ಈ ಗ್ರಾಮದ ಹೆಣ್ಣು ಮಕ್ಕಳು ತಮ್ಮ ಗಂಡನ ಜೊತೆಯಲ್ಲಿ ತವರಲ್ಲೇ ವಾಸವಿದ್ದಾರಂತೆ.

ಅಕ್ಷರ್‌ಪುರದ ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಮೀ ದೂರದಲ್ಲಿರುವ ದಾಮಾದನ್ ಪೂರ್ವದಲ್ಲಿರುವ ಈ ಈ ಗ್ರಾಮಕ್ಕೆ ಮೊದಲು ಸರಿಯಾಪುರ ಎಂದು ಕರೆಯಲಾಗುತ್ತಿತ್ತು. ಆದರೆ 2 ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳು ಇಲ್ಲಿನ ಪ್ರಾಥಮಿಕ ಸರ್ಕಾರಿ ಶಾಲೆಗೆ ದಾಮದನ್ ಪೂರ್ವ ಎಂದು ನಾಮಕರಣ ಮಾಡಿದ್ದಾರೆ. ಹೀಗಾಗಿ ಸರ್ಕಾರಿ ದಾಖಲೆಗಳಲ್ಲಿ ಈಗ ಹೊಸ ಊರಿನ ಹೆಸರನ್ನೇ ಬರೆಯಲಾಗಿದೆ.

ಇದನ್ನೂ ಓದಿ: ಅರೆ.. ಈ ಪ್ರಾಣಿಯ ಹಾಲಿನಲ್ಲಿ ಬಿಯರ್, ವಿಸ್ಕಿಯನ್ನು ಮೀರಿಸೋ ಆಲ್ಕೋಹಾಲ್ ಇದೆಯಂತೆ ! 2 ಗುಟುಕು ಕುಡಿದ್ರೂ ಸಾಕು ಅಮಲಲ್ಲಿ ತೇಲುತ್ತಾರಂತೆ!!

Leave A Reply

Your email address will not be published.