Viral video: ಅಪ್ಪನಿಂದಲೇ ನಡೆಯಿತು ರೇಪ್ ಅಟೆಮ್ಟ್- ಈಗೀಕೆ ಏನಾಗಿದ್ದಾಳೆ ಗೊತ್ತಾ ?!
video of a young woman talking about her father's abuse has gone viral
Viral video: ಅನೇಕ ಹೆಣ್ಣು ಮಕ್ಕಳು ತಮ್ಮವರಿಂದಲೇ ಅಥವಾ ಹೊರಗಿನವರಿಂದ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಆದರೆ, ಎಲ್ಲಾ ಹೆಣ್ಣು ಮಕ್ಕಳು (girls) ತಮಗಾದ ಕೆಟ್ಟ ಅನುಭವಗಳನ್ನು ಬಿಚ್ಚಿಡೋದಿಲ್ಲ. ಇದೀಗ ಯುವತಿಯೋರ್ವಳು ತನ್ನ ತಂದೆಯಿಂದ ತನಗಾದ ದೌರ್ಜನ್ಯದ ಬಗ್ಗೆ ತುಟಿಬಿಚ್ಚಿದ್ದಾಳೆ (Viral video).
ಈಕೆಯ ಹೆಸರು ರಿದ್ಧಿ ರಾಥೋರ್. ಈಕೆ ಎರಡು ವರ್ಷದವಳಿದ್ಧಾಗ ಆಕೆಯ ತಾಯಿ ಮನೆಬಿಟ್ಟು ಹೋದರು. ನಂತರ ಆಕೆಯ ತಂದೆ ಎರಡನೇ ಮದುವೆಯಾದನು. ಮುಂದಾಗಿದ್ದು ಭಯಾನಕ ಹಾಗೂ ಮನಕಲಕುವ ಘಟನೆ. ಹೌದು, ರಿದ್ಧಿ ಏಳನೇ ಕ್ಲಾಸಿಗೆ ಬರುತ್ತಿದ್ದಂತೆ ಆಕೆಯ ತಂದೆ ಲೈಂಗಿಕ ದೌರ್ಜನ್ಯ ಎಸಗಲಾರಂಭಿಸಿದ. ಪ್ರತೀ ರಾತ್ರಿ ಮಗಳ ಕೋಣೆಗೆ ಹೋಗಿ ಲೈಂಗಿಕ ಹಿಂಸೆ ನೀಡುತ್ತಿದ್ದ. ಹಲವು ಸಮಯದ ಬಳಿಕ ರಿದ್ಧಿ ಈ ವಿಚಾರ ಕುಟುಂಬದೆದುರು ಹೇಳಿದಳು.
ಆದರೆ ಆಗ ಆಕೆಯ ತಂದೆ ತನ್ನ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ಈ ಘಟನೆ ಬಳಿಕ ತಂದೆಯ ಜೊತೆಗೆ ಮಲತಾಯಿಯೂ (Stepmother) ಕಿರುಕುಳ ಕೊಡಲಾರಂಭಿಸಿದಳು. ಆಗ ರಿದ್ಧಿ ಖಿನ್ನತೆಗೆ ಜಾರಿದಳು. ಇಷ್ಟೆಲ್ಲಾ ನಡೆದ ಬಳಿಕ ಮನೆಯಲ್ಲಿ ದೈಹಿಕ ಮಾನಸಿಕ ಹಿಂಸೆ ಸಹಿಸಿಕೊಂಡು ಇರಲಾಗದೆ ಎರಡು ವರ್ಷಗಳ ನಂತರ ಆಕೆ ಆ ಮನೆಯನ್ನು ಬಿಟ್ಟು ಹೊರಬಂದಳು. ಕಷ್ಟಪಟ್ಟು ಕಲಿತು ಪಿಎಚ್.ಡಿ ಪದವಿ ಪಡೆದಳು. ಇದೀಗ ಈಕೆ ಪ್ರೊಫೆಸರ್. ರಿದ್ಧಿ ಗೆಳೆಯ ಮಯೂರ ರೂಪೇಶನೊಂದಿಗೆ ಜೀವನ ನಡೆಸಲು ಅಣಿಯಾಗಿದ್ದಾಳೆ.
ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಭಾರೀ ವೀಕ್ಷಣೆ ಹಾಗೂ ಲೈಕ್ಸ್ ಗಳಿಸಿದೆ. ನೂರಾರು ಜನರು ರಿದ್ಧಿಯ ಬದುಕಿನ ಬಗ್ಗೆ ಮರುಕ ಮತ್ತು ಆಕೆಯ ದಿಟ್ಟತನದ ಬಗ್ಗೆ ಶ್ಲಾಘಿಸಿದ್ದಾರೆ. ಒಬ್ಬ ನೆಟ್ಟಿಗ ಎಂಥ ಧೈರ್ಯಶಾಲಿ ಮತ್ತು ಬುದ್ಧಿವಂತ ಹುಡುಗಿ ನೀವು. ಇಂಥ ಸಂದರ್ಭದಲ್ಲಿಯೂ ಪಿಎಚ್.ಡಿ ಪೂರ್ಣಗೊಳಿಸಿದ್ದೀರಿ ಎಂದರೆ! ನಿಮಗೆ ಶುಭವಾಗಲಿ ಎಂದಿದ್ದಾರೆ. ಇದು ತುಂಬಾ ಹೃದಯ ವಿದ್ರಾವಕವಾಗಿದೆ, ಒಬ್ಬ ತಂದೆ ಹೀಗೆ ನಡೆದುಕೊಳ್ಳಬಲ್ಲರೆ? ಊಹಿಸಿಕೊಳ್ಳಲು ಅಸಾಧ್ಯ. ನಿಮಗೆ ಹೆಚ್ಚು ಶಕ್ತಿಯನ್ನು ದೇವರು ನೀಡಲಿ ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ.
ಇದನ್ನು ಓದಿ: Poonam Pandey: ಅರೆಬೆತ್ತಲೆಯ ವಿಡಿಯೋ ಹರಿಬಿಟ್ಟ ಪೂನಂ ಪಾಂಡೆ – ವಿಡಿಯೋ ನೋಡಿ ಕಕ್ಕಾಬಿಕ್ಕಿಯಾದ ಫ್ಯಾನ್ಸ್ !