Anand Mahindra FIR Case: ಮಹೀಂದ್ರಾ ಸ್ಕಾರ್ಪಿಯೋದಲ್ಲಿ ‘ಏರ್‌ಬ್ಯಾಗ್‌ʼ ತೆರೆಯದ ಆರೋಪ, ವೈದ್ಯ ಸಾವು ಪ್ರಕರಣ-ಮಹೀಂದ್ರಾ ಕಂಪನಿಯಿಂದ ಸ್ಪಷ್ಟೀಕರಣ!!!

mahindra and mahindra issues clarification in kanpur scorpio suv accident case latest news detail matter

Anand Mahindra FIR Case: ಕಾನ್ಪುರದಲ್ಲಿ ಸ್ಕಾರ್ಪಿಯೋ ಎಸ್‌ಯುವಿ ಜನವರಿ 14ರಂದು ಅಪಘಾತವೊಂದು ನಡೆದಿದ್ದು, ಈ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಕುರಿತು ಸಂತ್ರಸ್ತ ತಂದೆಯಿಂದ ಕಂಪನಿಯ ಅಧ್ಯಕ್ಷ ಆನಂದ್‌ ಮಹೀಂದ್ರಾ ಮತ್ತು ಇತರ 12ಜನರ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಇದಾದ ನಂತರ ಮಹೀಂದ್ರಾ ಮತ್ತು ಮಹೀಂದ್ರಾ ಸ್ಪಷ್ಟೀಕರಣವನ್ನು ನೀಡಿದೆ.

ಈ ಪ್ರಕರಣ ದಾಖಲಾದ ಮೂರು ದಿನಗಳ ನಂತರ ಸ್ಕಾರ್ಪಿಯೋ ಎಸ್‌ಯುವಿನಲ್ಲಿ ಏರ್‌ಬ್ಯಾಗ್‌ ಇತ್ತೇ? ಮತ್ತು ಅಪಘಾತದ ಸಮಯದಲ್ಲಿ ಅವು ಏಕೆ ಓಪನ್‌ ಆಗಿಲ್ಲ ಎಂಬುವುದರ ಕುರಿತು ಮಹೀಂದ್ರಾ ತಮ್ಮ ಸ್ಪಷ್ಟೀಕರಣವನ್ನು ಬಿಡುಗಡೆ ಮಾಡಿದೆ.

ವರದಿಗಳ ಪ್ರಕಾರ, ಸಂತ್ರಸ್ತ ತಂದೆ ರಾಜೇಶ್‌ ಮಿಶ್ರಾ ಅವರು ಈ ಶೋರೂಂ ನ ಮ್ಯಾನೇಜರ್‌ ತನ್ನೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿಯೂ, ಹಾಗೂ ಎಸ್‌ಯುವಿನಲ್ಲಿ ಏರ್‌ಬ್ಯಾಗ್‌ ಗಳಿಲ್ಲ ಎಂದು ಆರೋಪಿಸಿದಾಗ ಬೆದರಿಕೆ ಹಾಕಿದಾಗಿ ಆರೋಪ ಮಾಡಿದ್ದರು. ಈ ಕಾರಣದಿಂದ SUV ಸುರಕ್ಷತೆಯ ಬಗ್ಗೆ ಸುಳ್ಳು ಭರವಸೆ, ವಂಚನೆ ಆರೋಪದ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬವು ಮಹೀಂದ್ರಾ ಮತ್ತು 12 ಜನರ ವಿರುದ್ಧ (Anand Mahindra FIR Case) ಕಾನ್ಪುರದಲ್ಲಿ FIR ದಾಖಲು ಮಾಡಿದ್ದರು.

ಮಹೀಂದ್ರಾ ತನ್ನ ಸ್ಪಷ್ಟೀಕರಣದಲ್ಲಿ, “ವಾಹನವು ಏರ್‌ಬ್ಯಾಗ್‌ಗಳನ್ನು ಹೊಂದಿಲ್ಲ ಎಂದು ಆರೋಪಿಸಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 2020 ರಲ್ಲಿ ತಯಾರಿಸಲಾದ ಸ್ಕಾರ್ಪಿಯೋ S9 ರೂಪಾಂತರದಲ್ಲಿ ಏರ್‌ಬ್ಯಾಗ್‌ಗಳನ್ನು ಹೊಂದಿದೆ ಎಂದು ನಾವು ಸ್ಪಷ್ಟವಾಗಿ ಹೇಳಲು ಬಯಸುತ್ತೇವೆ ಮತ್ತು ನಾವು ಇದನ್ನು ಪರಿಶೀಲಿಸಿದ್ದೇವೆ, ಹಾಗೂ ಏರ್‌ಬ್ಯಾಗ್‌ನಲ್ಲಿ ಯಾವುದೇ ದೋಷವಿರಲಿಲ್ಲ. “ಇದು ರೋಲ್‌ಓವರ್ ಕೇಸ್ ಆಗಿದ್ದು ಇದರಲ್ಲಿ ಮುಂಭಾಗದ ಏರ್‌ಬ್ಯಾಗ್ ಓಪನ್‌ ಆಗಿಲ್ಲ” ಎಂದು ಮಹೀಂದ್ರಾ ತನ್ನ ಸ್ಪಷ್ಟೀಕರಣದಲ್ಲಿ ಹೇಳಿದೆ.

ರೋಲ್‌ಓವರ್‌ ಕೇಸ್‌ ಅಂದರೆ ಅಪಘಾತದ ಸಮಯದಲ್ಲಿ ಅಪೂರ್ವ ಅವರು ಸೀಟ್‌ ಬೆಲ್ಟ್‌ ಧರಿಸಿದ್ದರೂ, ದುರ್ಘಟನೆ ನಡೆದಾಗ ಕಾರು ಪಲ್ಟಿಯಾದ ಕಾರಣ ಏರ್‌ಬ್ಯಾಗ್‌ ತೆರೆದಿಲ್ಲ ಎಂದು ಹೇಳಲಾಗಿದೆ. ಕಾರಿನಲ್ಲಿ ಏರ್‌ಬ್ಯಾಗ್‌ ಏರಿಸಿದ್ದಾರೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಮಹೀಂದ್ರಾ ಸ್ಪಷ್ಟಪಡಿಸಿದೆ. ಹಾಗೆನೇ ಸುರಕ್ಷತೆಯ ದೃಷ್ಟಿಯಲ್ಲಿ ಕಂಪನಿ ನಿರ್ಲಕ್ಷ್ಯ ಮಾಡುವುದಿಲ್ಲ ಎಂಬ ಮಾತನ್ನು ಹೇಳಿದೆ.

ಕಾನ್ಪುರ ಅಪಘಾತದ ಸಂದರ್ಭದಲ್ಲಿ ಸ್ಕಾರ್ಪಿಯೋ ಎಸ್‌ಯುವಿಯಲ್ಲಿನ ಏರ್‌ಬ್ಯಾಗ್‌ಗಳನ್ನು ಏಕೆ ನಿಯೋಜಿಸಲಿಲ್ಲ ಎಂಬುದನ್ನು ಕಂಡುಹಿಡಿಯಲು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಾರು ತಯಾರಕರಿಂದ ವಿವರವಾದ ತನಿಖೆ ನಡೆಸಲಾಯಿತು ಎಂದು ಮಹೀಂದ್ರಾ ಹೇಳಿದೆ. “ಈ ವಿಷಯವು ಪ್ರಸ್ತುತ ನ್ಯಾಯಾಲಯದಲ್ಲಿದೆ ಮತ್ತು ಯಾವುದೇ ಹೆಚ್ಚಿನ ತನಿಖೆಗಾಗಿ ನಾವು ಅಧಿಕಾರಿಗಳೊಂದಿಗೆ ಸಹಕರಿಸಲು ಬದ್ಧರಾಗಿದ್ದೇವೆ. ನಾವು ಕುಟುಂಬಕ್ಕೆ ನಮ್ಮ ಸಂಪೂರ್ಣ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ ಮತ್ತು ಅವರ ದುಃಖದಲ್ಲಿ ಅವರಿಗೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ” ಎಂದು ಮಹೀಂದ್ರಾ ಹೇಳಿದರು.

 

ಇದನ್ನು ಓದಿ: Eid Milad Banner ( Mangaluru): ಹೊರಗಿನವರಿಂದ ಈದ್ ಮಿಲಾದ್ ಬ್ಯಾನರ್ ಗೊಂದಲ ಸೃಷ್ಟಿ -ಮೀನುಗಾರರ ಸಂಘ ಪತ್ರಿಕಾಗೋಷ್ಠಿ- ಗೊಂದಲಕ್ಕೆ ತೆರೆ!!!

Leave A Reply

Your email address will not be published.