

Cauvery River Dispute : ಕಾವೇರಿ ವಿವಾದದ (Cauvery River Dispute) ಕುರಿತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (kumaraswamy) ಮಾತನಾಡಿದ್ದು, ಕಾವೇರಿ ವಿವಾದದಲ್ಲಿ ಪ್ರಧಾನಿ (Narendra modi) ಮಧ್ಯ ಪ್ರವೇಶಿಸಲಾಗದು ಎಂಬ ಅಚ್ಚರಿಯ ಹೇಳಿಕೆ ನೀಡಿ ಕಾರಣ ಬಿಚ್ಚಿಟ್ಟಿದ್ದಾರೆ.
ಹೌದು, ಇಂದು ಸುದ್ದಿಗಾರರ ಜೊತೆ ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ನೀರು ಹಂಚಿಕೆ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಸರ್ಕಾರ ನಮ್ಮ ನಾಡಿನ ಜನರ ರಕ್ಷಣೆಗೆ ಬೆಂಬಲ ಕೊಡಬೇಕು. ಕಾವೇರಿ, ಮಹದಾಯಿ, ಹೇಮಾವತಿ ರಕ್ಷಣೆಗೆ ನಾವು ಬದ್ಧರಾಗಿರಬೇಕು. ಎಲ್ಲಾ ಸಮಸ್ಯೆಗಳ ತಾರ್ಕಿಕ ಅಂತ್ಯಕ್ಕೆ ನಾವು ಬದ್ಧರಾಗಿದ್ದೇವೆ ಎಂದರು. ಜೊತೆಗೆ ನಮ್ಮಲ್ಲಿ ನೀರು ಹಂಚಿಕೆ ಹೇಗೆ ಆಗ್ಬೇಕು ಅಂತ ನಿರ್ಧಾರವಾಗಬೇಕು. ಪ್ರಧಾನಿ ಮೋದಿ ಇದರಲ್ಲಿ ಮಧ್ಯ ಪ್ರವೇಶಿಸಲು ಆಗಲ್ಲ ಎಂದೂ ಹೇಳಿದರು.
ಕಾವೇರಿ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಪರೋಕ್ಷವಾಗಿ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರು ಹೇಳಿದ ಮರುದಿನವೇ ಕುಮಾರಸ್ವಾಮಿ ಅವರಿಂದ ಈ ಹೇಳಿಕೆ ಬಂದಿದೆ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕುಳಿತು ಚರ್ಚೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಅಲ್ಲದೆ, 2 ಪಕ್ಷಗಳು ಒಟ್ಟಾಗಿ ಸೇರಿದೆ, ನೀರು ಬಿಡದಂತೆ ಹೋರಾಟ ಮಾಡಬೇಕಿದೆ. ಇದೀಗ ಸುಪ್ರೀಂಕೋರ್ಟ್ಗೆ ಹೋಗುವುದರಿಂದ ಪರಿಹಾರ ಸಿಗಲ್ಲ. ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಸೆಪ್ಟೆಂಬರ್ 29 ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರೆ ನೀಡಲಾಗಿರುವ ಕರ್ನಾಟಕ ಬಂದ್ಗೆ ನಮ್ಮ ನಮ್ಮ ಬೆಂಬಲ ಇದೆ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದರು. ರಾಜ್ಯ ಸರ್ಕಾರವನ್ನು ಎಚ್ಚರಿಸಲು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ ಎಂದು ಅವರು ಹೇಳಿದರು.
ಇದನ್ನು ಓದಿ: Viral video: ಅಪ್ಪನಿಂದಲೇ ನಡೆಯಿತು ರೇಪ್ ಅಟೆಮ್ಟ್- ಈಗೀಕೆ ಏನಾಗಿದ್ದಾಳೆ ಗೊತ್ತಾ ?!













