Dasara Holidays 2023: ಕರ್ನಾಟಕದ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​​! ದಸರಾ ರಜೆ ಜೊತೆಗೆ ಸಿಗಲಿದೆ ಹಲವು ರಜೆಗಳು!

dasara holidays 2023-good news for students will get many holidays along with Dussehra holiday

Dasara Holidays 2023: ಕರ್ನಾಟಕದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಮೇಲೆ ಗುಡ್‌ನ್ಯೂಸ್‌. ಹೌದು, ಅಕ್ಟೋಬರ್‌ ತಿಂಗಳ ದಸರಾ ರಜೆಯ ಜೊತೆಗೆ ನಿಮಗೆ ಸಿಗಲಿದೆ ಹಲವು ರಜೆಗಳು. ಹೇಗಂತೀರಾ? ಏಕೆಂದರೆ ಹಲವು ಸರಕಾರಿ ರಜೆಗಳಿಂದ ಈ ರಜೆಯ ಮಜಾ ನೀವು ಅನುಭವಿಸಬಹುದು.

 

ಹಾಗಾದರೆ ಯಾವಾಗ ಸರಕಾರಿ ರಜೆಗಳು ಮತ್ತು ಎಷ್ಟು ರಜೆಗಳು ಸಿಗಲಿವೆ ಬನ್ನಿ ತಿಳಿಯೋಣ.

ದಸರಾ ರಜೆ
ಅಕ್ಟೋಬರ್‌ ತಿಂಗಳಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದಸರಾ (Dasara Holidays 2023)ರಜೆ ನೀಡಲಾಗಿದೆ. ಅಂದರೆ ಒಟ್ಟು 17 ದಿನಗಳ ರಜೆ ಲಭ್ಯವಿದೆ. ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ವಾರ್ಷಿಕ ರಜೆ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ 8 ರಿಂದ 24 ರವರೆಗೆ ದಸರಾ ರಜೆ ಇರುತ್ತದೆ.

ಹಾಗೆನೇ ಅಕ್ಟೋಬರ್‌ ತಿಂಗಳಲ್ಲಿ ಒಟ್ಟು 5 ಭಾನುವಾರ ರಜಾ ದಿನಗಳು ಇದೆ. ಅದು ಬಿಟ್ಟರೆ ಅಕ್ಟೋಬರ್‌ 2 ರಂದು ಗಾಂಧಿ ಜಯಂತಿ, ಅಕ್ಟೋಬರ್‌ 3ರಂದು ಮಹಾನವಮಿ(ಆಯುಧಪೂಜೆ), ಅಕ್ಟೋಬರ್‌ 24 ರಂದು ವಿಜಯದಶಮಿ (ದಸರಾ) ರಜೆ, ಅಕ್ಟೋಬರ್‌ 28ರಂದು ಮಹರ್ಷಿ ವಾಲ್ಮೀಕಿ ಜಯಂತಿ ರಜೆಗಳು ಇದೆ.

ಹಾಗಾಗಿ ದಸರಾ ರಜೆಯ 17 ದಿನದ ರಜೆ, ಭಾನುವಾರದ ರಜೆ, ಉಳಿದ ರಜೆ ಸೇರಿ ಒಟ್ಟು 20 ದಿನಗಳ ರಜೆ ಸಿಗಲಿದೆ.

Leave A Reply

Your email address will not be published.