Racial Abuse: ಜಿಮ್ನಾಸ್ಟಿಕ್ಸ್‌ನಲ್ಲಿ ವರ್ಣಭೇದ! ಕಪ್ಪು ಬಣ್ಣದವಳೆಂದು ಪುಟ್ಟ ಬಾಲೆಗೆ ಪದಕ ನೀಡದೆ, ಕಡೆಗಣನೆ!!! ವೀಡಿಯೋ ವೈರಲ್‌

sports news black girl ignored and snubbed at medal ceremony apolgy from gymnastics ireland

Racial Abuse: ವರ್ಣಭೇದ ನೀತಿಯ ವಿರುದ್ಧ ಇಂದಿಗೂ ಹೋರಾಟ ಮುಂದುವರಿದಿದೆ. ಈ ಪ್ರಪಂಚದಲ್ಲಿ ಬಿಳಿ ಬಣ್ಣವೇ ಶ್ರೇಷ್ಠ ಎಂಬ ಪರಿಸ್ಥಿತಿ ಹೊಂದಿರುವ ಕೆಲವರು ನಂಬುತ್ತಾರೆ. ಅಂತಹುದೇ ಒಂದು ಘೋರ ಘಟನೆ ನಡೆದಿದೆ. ಇಂಥ ಒಂದು ಘಟನೆ ಜಿಮ್ನಾಸ್ಟಿಕ್ಸ್‌ ನಲ್ಲೂ ನಡೆದಿದೆ ಎಂದರೆ ನಂಬುತ್ತೀರಾ. ಹೌದು ಅಂತಹ ಘಟನೆ ನಡೆದಿದೆ. ಜಿಮ್ನಾಸ್ಟಿಕ್ಸ್‌ನಲ್ಲಿ ಗೆದ್ದ ಎಲ್ಲರಿಗೂ ಪದಕದ ಹಾರ ಹಾಕಿದರೂ, ಕಪ್ಪು ಬಣ್ಣದ ಪುಟ್ಟ ಬಾಲಕಿಗೆ ಹಾರ ಹಾಕದೇ ತಾರತಮ್ಯ (Racial Abuse)ಮಾಡಲಾಗಿದೆ. ಒಂದು ವರ್ಷದ ಹಿಂದೆ ನಡೆದ ಈ ಘಟನೆ ಇದೀಗ ವಿವಾದಕ್ಕೆ ಒಳಗಾಗಿದೆ. ಈ ಕುರಿತು ಐರ್ಲೆಂಡ್‌ನ ಜಿಮ್ನಾಸ್ಟಿಕ್ಸ್‌ ಸಂಸ್ಥೆ ಈ ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದು, ಹಾಗೂ ಕ್ಷಮೆ ಕೋರಿದೆ.

ಪದಕ ಪ್ರದಾನ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಕಪ್ಪು ಬಣ್ಣದ ಬಾಲೆಯನ್ನು ಕಡೆಗಣಿಸಿರುವ ವೀಡಿಯೋ ಇದಾಗಿದ್ದು, ಬಿಳಿ ಬಣ್ಣ ಹೊಂದಿರುವ ಮಕ್ಕಳಿಗೆ ಮಾತ್ರ ಮಹಿಳೆಯೋರ್ವಳು ಪದಕ ಹಾಕಿ, ಕಪ್ಪು ಬಣ್ಣದ ಪುಟ್ಟ ಬಾಲಕಿಯನ್ನು ಕಡೆಗಣಿಸಿದ್ದು, ಆ ಬಾಲಕಿ ಪದಕ ಹಾಕುತ್ತಾರೋ ಎನ್ನುವ ಆಸೆಯಿಂದ ನೋಡಿರುವ ವೀಡಿಯೋ ವೈರಲ್‌ ಆಗಿದ್ದು. ಸ್ಪಷ್ಟವಾಗಿ ಇಲ್ಲಿ ಕಪ್ಪುವರ್ಣದ ಬಾಲೆಯನ್ನು ಕಡೆಗಣಿಸಲಾಗಿತ್ತು.

ಈ ಘಟನೆ ಕುರಿತು ಕಳೆದ ವರ್ಷವೇ ಸಮಸ್ಯೆ ಬಗೆ ಹರಿಸಲಾಗಿದೆ ಎಂದು ಕ್ರೀಡಾ ಸಂಸ್ಥೆ ಹೇಳಿದೆ. ಆದರೆ ಬಾಲಕಿಯ ಕುಟುಂಬದವರು ಈ ಕ್ಷಮೆಯನ್ನು ಸ್ವೀಕರಿಸಿಲ್ಲ ಎಂಬ ಬಾಲಕಿಯ ತಾಯಿ ಹೇಳಿರುವುದಾಗಿ ಡೈಲಿ ಮೇಲ್‌ ವರದಿ ಮಾಡಿದೆ.

ಪ್ರಶಸ್ತಿ ನೀಡಿದ ಮಹಿಳೆಯ ಸದಸ್ಯತ್ವವನ್ನು ನವೀಕರಿಸಿಲ್ಲ. ಹಾಗೂ ಆಕೆ ಇಂದು ಜಿಮ್ನಾಸ್ಟಿಕ್ಸ್‌ ಸಂಸ್ಥೆಯೊಂದಿಗೆ ಇಲ್ಲ ಎಂದು ಹೇಳಲಾಗಿದೆ.

 

ಇದನ್ನು ಓದಿ: Smartphone Tricks:ಮೊಬೈಲ್ ಡೇಟಾ ಬೇಗ ಕಾಲಿ ಆಗುತ್ತಾ ?! ಜಸ್ಟ್ ಹೀಗ್ ಮಾಡಿ, ದಿನವಿಡಿ ಎಷ್ಟು ಬೇಕಾದರೂ ನೆಟ್ ಬಳಸಿ

Leave A Reply

Your email address will not be published.