ISRO-NASA: ಭಾರತದ ವಿಕ್ರಮ್, ಪ್ರಗ್ಯಾನ್ ಎಚ್ಚರಗೊಳ್ಳೋದು ಡೌಟಾ ?! ಬಾಹ್ಯಾಕಾಶದಲ್ಲಿ ಅಮೇರಿಕದ ‘ನಾಸಾ’ ಶುರುಮಾಡ್ತಾ ಹೊಸ ಆಟ ?!
National international news ISRO Pragyan and Vikram wake up is doubt American space research centre NASA big achievement
ISRO-NASA: ಚಂದ್ರಯಾನ-3ರ(Chandrayan-3) ಅಂದುಕೊಂಡಂತೆ ಯಶಸ್ಸುಸಾಧಿಸಿದೆ. ಇನ್ನು ಇದರಲ್ಲಿ ಹೆಚ್ಚಿನ ಸಾಧನೆ ಮಾಡೋ ನಿಟ್ಟಿನಲ್ಲಿ 15 ದಿನಗಳ ಹಿಂದೆ ಚಂದ್ರನಲ್ಲಿ ರಾತ್ರಿಯಾದ ಕಾರಣ ನಿದ್ರೆಗೆ ಜಾರಿಸಿದ್ದ ವಿಕ್ರಮ್ ಲ್ಯಾಂಡರ್(Vikram lander) ಮತ್ತು ಪ್ರಗ್ಯಾನ್ ರೋವರ್(Pragyan rover) ಗಳನ್ನು ಎಬ್ಬಿಸುವ ಮಹತ್ಕಾರ್ಯಕ್ಕೆ ಇಸ್ರೋ ಮುಂದಾಗಿದೆ. ಆದರೆ ಈ ವಿಚಾರದಲ್ಲಿ ಇಸ್ರೋ(ISRO)ಗೆ ಭಾರೀ ನಿರಾಸೆಯಾಗಿದೆ.
ಹೌದು, ಈ ಹಿಂದೆ ಚಂದ್ರಯಾನ ನೌಕೆ ಅಂದರೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ್ದ ಇಸ್ರೋ ಅದು 14 ದಿನ ಕೆಲಸ ಮಾಡಬಹುದು ಎಂದು ಹೇಳಿತ್ತು. ಅದರಂತೆ 14 ದಿನಗಳ ಕಾಲ ರೋವರ್ ಮತ್ತು ಲ್ಯಾಂಡರ್ ಅಭೂತಪೂರ್ವವಾಗಿ ಕಾರ್ಯ ನಿರ್ವಹಿಸಿದ್ದವು. ಬಳಿಕ 15ನೇ ದಿನ ಚಂದ್ರನಲ್ಲಿ ಕತ್ತಲು ಕವಿದ ಬಳಿಕ ಈ ಉಭಯ ನೌಕೆಗಳನ್ನು ನಿದ್ರೆಗೆ ಜಾರಿಸಲಾಗಿತ್ತು. ಇದೀಗ ಮತ್ತೆ ಚಂದ್ರನಲ್ಲಿ ಮುಂಜಾನೆಯಾಗುತ್ತಿದ್ದು ಇದೇ ಕಾರಣಕ್ಕೆ ಇಸ್ರೋ ವಿಜ್ಞಾನಿಗಳು ನಿದ್ರೆಗೆ ಜಾರಿರುವ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಗಳನ್ನು ಎಬ್ಬಿಸಲು ಹಗಲು ರಾತ್ರಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ ಇಷ್ಟು ಪ್ರಯತ್ನ ನಡೆಸಿದರೂ ಕೂಡ ಇಸ್ರೋಗೆ ಚಂದ್ರನ ಮೇಲಿರುವ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ನಿಂದ ಯಾವುದೇ ರೀತಿಯ ಸಿಗ್ನಲ್ ಗಳು ಬಂದಿಲ್ಲ. ಹೀಗಾಗಿ ಚಂದ್ರನಲ್ಲಿ ಕತ್ತಲು ಕಳೆದು ಬೆಳಕು ಹರಿದಾಗ ಮತ್ತೆ ಪ್ರಗ್ಯಾನ್ ಹಾಗೂ ವಿಕ್ರಮ್ ಎಚ್ಚರಗೊಂಡು ತಮ್ಮ ಕಾರ್ಯ ನಿರ್ವಹಿಸಲಿವೆ ಎಂದು ತಿಳಿದ್ದ ಇಸ್ರೋ ವಿಜ್ಞಾನಿಗಳಿಗೆ ಕೊಂಚ ನಿರಾಸೆಯಾಗಿದೆ.
ಈ ಕುರಿತು ಇಸ್ರೋ(ISRO-NASA) ಸಂಸ್ಥೆಯೇ ಅಧಿಕೃತವಾಗಿ ತಿಳಿಸಿದ್ದು ‘ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅವರನ್ನು ಎಚ್ಚರಿಸಿರುವ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಂವಹನವನ್ನು ಸ್ಥಾಪಿಸಲು ಪ್ರಯತ್ನಗಳನ್ನು ಮಾಡಲಾಗಿದೆ. ಸದ್ಯದ ಮಟ್ಟಿಗೆ ಅವರಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ. ಸಂಪರ್ಕವನ್ನು ಸ್ಥಾಪಿಸುವ ಪ್ರಯತ್ನಗಳು ಮುಂದುವರಿಯುತ್ತವೆ’ ಎಂದು ಟ್ವೀಟ್‌ನಲ್ಲಿ ಮಾಡಿ ಹೇಳಿತ್ತು.
ಅಲ್ಲದೆ ‘ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ಸೆಂಟರ್‌ನಿಂದ ಈಗಾಗಲೇ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಗೆ ತನ್ನ ಕಮಾಂಡ್‌ಅನ್ನು ನೀಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿರುವ ಅವರಿಬ್ಬರಿಗೂ ಕಮಾಂಡ್ ತಲುಪಿದೆಯೇ, ಅವರು ಎಚ್ಚರಗೊಂಡ ಸ್ಥಿತಿಯಲ್ಲಿದ್ದಾರೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಈವರೆಗೂ ಅವರಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ. ಸಂಪರ್ಕ ಸಾಧಿಸುವ ಎಲ್ಲಾ ಪ್ರಯತ್ನಗಳು ಮುಂದುವರಿಯಲಿದೆ’ ಎಂದು ಸಂಸ್ಥೆಯು ಹೇಳಿದೆ.
ಒಂದು ವೇಳೆ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಸಿಗ್ನಲ್ ಕಳಿಸದೇ ಇದ್ದಲ್ಲಿ, ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆ ಇಲ್ಲಿಗೆ ಕೊನೆಯಾಗಲಿದೆಯಾ ಎಂಬ ಅಳುಕು ಎಲ್ಲಾ ಭಾರತೀಯರಿಗೂ ಕಾಡುತ್ತಿದೆ. ಇದು ಇನ್ನು ಮುಂದೆಯೂ ಯಶಸ್ವಿಯಾಗಲಿ ಎಂದು ಭಾರತೀಯರೆಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಅಲ್ಲದೆ ಈ ಹಿಂದೆಯೇ ಇಸ್ರೋ ಕೂಡ ನಮ್ಮ ಪೂರ್ವ ಯೋಜನೆ ಇದ್ದದ್ದೇ 15 ದಿನಗಳು ಮಾತ್ರ. ಇದಾಗಿಯೂ ಚಂದ್ರನ ಮೇಲಿರುವ ಈ ಎರಡು ನೌಕೆಗಳು ರಾತ್ರಿ ಕಳೆದು ಹಗಲು ಬಂದಾಗ ಕಾರ್ಯ ನಿರ್ವಹಿಸಲು ಶುರು ಮಾಡಬಹುದು. ಒಂದು ವೇಳೆ ಯಾವುದೇ ರೀತಿ ಸಿಗ್ನಲ್ ಬರಲಿಲ್ಲ ಅಂದರೆ ಅಲ್ಲಿಗೆ ಚಂದ್ರಯಾನ-3 ಕೊನೆಯಾಗಲಿದೆ ಎಂದು ಇಸ್ರೋ ಈಗಾಗಲೇ ತಿಳಿಸಿತ್ತು.
ಅಂದಹಾಗೆ ಎಲ್ಲ ಅಂದುಕೊಂಡಂತೆ ಆಗಿದ್ದರೆ ಚಂದ್ರಯಾನ್ 3 (Chandrayaan 3) ಲ್ಯಾಂಡರ್ ಹಾಗೂ ರೋವರ್ ಗಳಾಗಿರುವಂತಹ ವಿಕ್ರಂ ಹಾಗೂ ಪ್ರಗ್ಯಾನ್ (Pragyan-Vikram)ಇಷ್ಟರ ಒಳಗಾಗಿ ಎದ್ದೇಳ ಬೇಕಾಗಿತ್ತು. ಆದರೆ ಅನುಮಾನಿತ ಮೂಲಗಳ ಪ್ರಕಾರ ಅಮೆರಿಕಾದ ಸ್ಪೇಸ್ ಏಜೆನ್ಸಿ (US Space Agency) ವಾಯುಮಂಡಲದ ಮೇಲೆ ಭೂಮಿಯ ವಾತಾವರಣದಲ್ಲಿ ತೂತು ಮಾಡಿರಬಹುದು ಎಂಬುದಾಗಿ ಅನುಮಾನಿಸಲಾಗಿದೆ.
ಇನ್ನು ಉಪಗ್ರಹ (Satellite)ವನ್ನು ಕೂಡ ಕೇವಲ ಚಂದ್ರನ ಮೇಲಿನ ಒಂದು ದಿನ ಅಂದರೆ ಭೂಮಿಯಲ್ಲಿ 14 ದಿನಗಳಾಗುತ್ತವೆ. ಅಷ್ಟು ಸಮಯಗಳಿಗಾಗಿ ಮಾತ್ರ ಕಾರ್ಯನಿರ್ವಹಿಸುವಂತೆ ಡಿಸೈನ್ ಮಾಡಲಾಗಿತ್ತು ಹಾಗೂ ಅದು ಈಗಾಗಲೇ ಸಾಕಷ್ಟು ದಿನಗಳ ಹಿಂದೇನೆ ಮುಗಿದು ಹೋಗಿದೆ. ಈ ಯಂತ್ರ ಸೌರಶಕ್ತಿಯ ಎನರ್ಜಿ (Solar Energy)ಯಿಂದಾಗಿ ಕಾರ್ಯನಿರ್ವಹಿಸುವ ಯಂತ್ರವಾಗಿದೆ ಆದರೆ ಚಂದ್ರನ ದಿನ ಮುಗಿದು ಹೋಗಿದ್ದು ರಾತ್ರಿಯ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಯಂತ್ರವನ್ನು ಡಿಸೈನ್ ಮಾಡಲಾಗಿರಲಿಲ್ಲ. ಇನ್ನು ಒಂದು ವೇಳೆ ರಷ್ಯಾದ ಇತ್ತೀಚಿಗಷ್ಟೇ ಲಾಂಚ್ ಮಾಡಲಾಗಿರುವಂತಹ Luna 25 ಒಂದು ವೇಳೆ ದಕ್ಷಿಣ ದ್ರುವದ ಮೇಲೆ ಲ್ಯಾಂಡ್ ಆಗಲು ಯಶಸ್ವಿಯಾಗಿದ್ದರೆ ಖಂಡಿತವಾಗಿ ನಮ್ಮ ಉಪಗ್ರಹಕ್ಕಿಂತ ಆ ಉಪಗ್ರಹ ಸಾಕಷ್ಟು ಉತ್ತಮವಾದ ಪರ್ಫಾರ್ಮೆನ್ಸ್ ನೀಡುತ್ತಿತ್ತು ಯಾಕೆಂದರೆ ಅದರಲ್ಲಿ ಪ್ಲೋಟೋನಿಯಂ ರೇಡಿಯೋ ಐಸೋಟೋಪ್ ಡಿವೈಸ್ ಅನ್ನು ಬಳಸಲಾಗಿತ್ತು ಹಾಗೂ ಇದು ಆ ಪರಿಸ್ಥಿತಿಗೆ ತಕ್ಕಂತೆ ಕೆಲಸ ಮಾಡುವಂತಹ ಸಾಮರ್ಥ್ಯವನ್ನು ಹೊಂದಿತ್ತು.
ಇದೆಲ್ಲ ಆಗುತ್ತಿರುವ ವೇಳೆ ಇತ್ತ ಭಾರತವು ಚಂದ್ರಯಾನ-3 ಯೋಜನೆಯ ಯಶಸ್ಸಿನಲ್ಲಿ ಮುಳುಗೇಳುತ್ತಿರುವಾಗ ಅತ್ತ ಅಮೆರಿಕದ ವಿಜ್ಞಾನಿಗಳು (American scientists) ಕೂಡ ಸದ್ದಿಲ್ಲದೆ ಬಾಹ್ಯಾಕಾಶ ಸಂಶೋಧನೆಯಲ್ಲಿ ದೊಡ್ಡದೊಂದು ಸಾಹಸ ಮಾಡಿದ್ದಾರೆ(ISRO-NASA). ಏಳು ವರ್ಷಗಳ ಕಾಲ ಅಂತರಿಕ್ಷದಲ್ಲಿ ಪ್ರಯಾಣಿಸಿದ ಅಮೆರಿಕದ ನಾಸಾ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ನೌಕೆಯು ‘ಬೆನ್ನು’ ಎಂಬ ದೊಡ್ಡ ಕ್ಷುದ್ರಗ್ರಹವೊಂದರ ಮಾದರಿ ಸಂಗ್ರಹಿಸಿ ಯಶಸ್ವಿಯಾಗಿ ಯೂಟಾ ಮರುಭೂಮಿಯಲ್ಲಿ (Utah desert) ಸಾಫ್ಟ್ ಲ್ಯಾಂಡ್ ಆಗಿದೆ.
ಇದನ್ನೂ ಓದಿ: Parliment election: ಲೋಕಸಭಾ ಚುನಾವಣೆ- ಕರ್ನಾಟಕದ 28 ಕ್ಷೇತ್ರಗಳಲ್ಲಿ ಗೆಲ್ಲುವುದು ಯಾರು? ಬಹಿರಂಗವಾಯ್ತು ಅಚ್ಚರಿಯ ಸಮೀಕ್ಷೆ