Belagavi: ಯೋಧನಿಗೆ ಗುಂಡು ಹಾರಿಸಿದ ಮತ್ತೊಬ್ಬ ಯೋಧ- ಕಾರಣ ಕೇಳಿದ್ರೆ ನೀವೇ ಶಾಕ್!!

Latest news Belagavi news soldier has tried to kill another soldier

Belagavi: ಯೋಧನೊಬ್ಬ ಮತ್ತೋರ್ವ ಯೋಧನನ್ನು ಕೊಲ್ಲಲು ಯತ್ನಿಸಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಗೋಕಾಕ್ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ನಡೆದಿದೆ. ಅಷ್ಟಕ್ಕೂ ಕಾರಣ ಏನು ಗೊತ್ತಾ? ಕೇಳಿದ್ರೆ ನೀವೇ ಶಾಕ್ ಆಗ್ತೀರಾ!!!.

ಕೊಟ್ಟ ಸಾಲ ಹಿಂದಿರುಗಿಸದಿದ್ದಕ್ಕೆ ಯೋಧನ ಮೇಲೆ ಮತ್ತೊಬ್ಬ ಯೋಧ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ್ದಾನೆ. ಬಸಪ್ಪ ಬಂಬರಗಾ (32) ಗಾಯಾಳು ಯೋಧನಾಗಿದ್ದು, ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿತನ್ನು ನಂಜುಂಡಿ ಬೂದಿಹಾಳ (32) ಎನ್ನಲಾಗಿದೆ.

ನಂಜುಂಡಿ ಬೂದಿಹಾಳ ಅವರು ಬಸಪ್ಪ ಬಂಬರಗಾ ಅವರಿಗೆ ಒಂದು ಲಕ್ಷ ರೂಪಾಯಿ ಸಾಲ ನೀಡಿದ್ದರು. ಈ ಹಣವನ್ನು ಬಸಪ್ಪ ಅವರು ಮರುಪಾವತಿಸಿಲ್ಲ. ಈ ವಿಚಾರವಾಗಿ ರಜೆ ಮೇಲೆ ಬಂದಿದ್ದಾಗ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ಮಿತಿ ಮೀರಿ ಕೋಪಗೊಂಡ ನಂಜುಂಡಿ ಬಸಪ್ಪನ ಮೇಲೆ ಲೈಸೆನ್ಸ್ ರಿವಾಲ್ವರ್​ನಿಂದ ಗುಂಡು ಹಾರಿಸಿದ್ದಾರೆ.

ಘಟನೆಯಿಂದ ಗಾಯಗೊಂಡ ಬಸಪ್ಪ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಬಸಪ್ಪ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಗೋಕಾಕ್ ತಾಲೂಕಿನ ಅಂಕಲಗಿ ಠಾಣಾ ಪೊಲೀಸರು ನಂಜುಂಡಿ ಅವರನ್ನು ಬಂಧಿಸಿದ್ದಾರೆ.

 

ಇದನ್ನು ಓದಿ: Mobile Phone Effect : ಕತ್ತಲಲ್ಲಿ ಮೊಬೈಲ್ ನೋಡೋ ಅಭ್ಯಾಸ ಉಂಟಾ ?! ಈ ರಣಭೀಕರ ಕಾಯಿಲೆ ವಕ್ಕರಿಸೀತು ಹುಷಾರ್ !!

Leave A Reply

Your email address will not be published.