Janatha Darshana: ಜನತಾ ದರ್ಶನದಲ್ಲಿ ವಿಚಿತ್ರ ಬೇಡಿಕೆ ಇಟ್ಟ ವ್ಯಕ್ತಿ- ಕೇಳಿದ್ರೆ ನೀವೂ ಸುಸ್ತು ಹೊಡಿತೀರಾ !!

Karnataka news man cries during janata darshan says without home girl is not given for marriage

Share the Article

Janata Darshan: ಉಸ್ತುವಾರಿ ಸಚಿವ ಕೆ. ವೆಂಕಟೇಶ್ (venkatesh) ಜನತಾ ದರ್ಶನ (Janata Darshan) ಸಭೆ ನಡೆಸಿದ್ದು, ಜನತಾ ದರ್ಶನದಲ್ಲಿ ವ್ಯಕ್ತಿಯೊಬ್ಬ (person) ವಿಚಿತ್ರ ಬೇಡಿಕೆ ಇಟ್ಟಿದ್ದಾನೆ. ಈತನ ಬೇಡಿಕೆ ಏನೆಂದು ಕೇಳಿದ್ರೆ ನೀವೂ ಸುಸ್ತು ಹೊಡಿತೀರಾ !!

ಹೌದು, ನಗರದ ಜಿಲ್ಲಾಧಿಕಾರಿ ಕಚೇರಿಯ ಜೆ.ಹೆಚ್ ಪಟೇಲ್ (J.H patel) ಸಭಾಂಗಣದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿ ಹೈಡ್ರಾಮಾ (Hydrama) ನಡೆಸಿದ್ದಾನೆ. ಏನಪ್ಪಾ ಅಂತಾ ಹೈಡ್ರಾಮಾ ಅಂತ‌ ಯೋಚನೆನಾ?? ಈ ಮಾಹಿತಿ ಓದಿ!!!.

ನಗರದಲ್ಲಿ ರಸ್ತೆ ಅಗಲೀಕರಣ ವೇಳೆಯ ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿದ್ದ ನಿವೇಶನಕ್ಕೆ ಇನ್ನೂ ಪರಿಹಾರ ನೀಡಿಲ್ಲ ಎಂದು ವ್ಯಕ್ತಿ ಹೇಳಿದರು. ಜೊತೆಗೆ ತನಗೆ 40 ವರ್ಷ ಆದರೂ ಮದುವೆ ಆಗಿಲ್ಲ. ಹುಡುಗಿ ಕೊಡುವ ವೇಳೆ ಮನೆ ಇದೆಯಾ ಎಂದು ಪ್ರಶ್ನಿಸುತ್ತಾರೆ. ಮನೆ-ಮಠ ನಿವೇಶನ, ಮದುವೆ ಇಲ್ಲದೆ ಪರದಾಡುತ್ತಿದ್ದೇನೆ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡರು.

ಇಷ್ಟೇ ಅಲ್ಲ ಈತ ಮುಂದೇನು ಹೇಳಿದ ಗೊತ್ತಾ? ಈ ಎಲ್ಲಾ ಪರದಾಟಕ್ಕಿಂತ ನನಗೆ ದಯಾಮರಣ ನೀಡಿ ಎಂದು ವ್ಯಕ್ತಿ ಮನವಿ ಮಾಡಿದರು. ಈತನ ಮಾತು ಕೇಳಿ ವೇದಿಕೆಯಲ್ಲಿದ್ದ ಸಚಿವರು, ಶಾಸಕರು ಒಂದು ಬಾರಿ ಅವಕ್ಕಾದರು. ನಂತರ ತಕ್ಷಣವೇ ಅಧಿಕಾರಿಗಳು ಆತನನ್ನು ಮಾಧಾನಪಡಿಸಿ ಸ್ಥಳದಿಂದ ಕರೆದುಕೊಂಡು ಹೋದರು.

ಇದನ್ನೂ ಓದಿ: Cauvery struggle: ಕಾವೇರಿ ಹೋರಾಟಕ್ಕೆ ‘ತಮಿಳು ಸಂಘ’ ಸಾಥ್- ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸಲ್ಲ ಎಂದ ನಾಯಕರು !!

Leave A Reply