Appointment : 51 ಸಾವಿರ ಮಂದಿಗೆ ಪ್ರಧಾನಿ ಮೋದಿಯವರಿಂದ ನೇಮಕಾತಿ ಪತ್ರ ವಿತರಣೆ

Pm Narendra Modi today distribute 51 thousand appointment letter for the govt department new recruiters news

Appointment letter: ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರಸರ್ಕಾರ ಮಹತ್ತರ ಹೆಜ್ಜೆ ಇರಿಸಿದೆ. ಹೀಗಾಗಿ, ಉದ್ಯೋಗಾವಕಾಶ ಕಲ್ಪಿಸುವ ದೆಸೆಯಲ್ಲಿ ರೋಜ್‌ಗಾರ್ ಮೇಳ ಆಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಯವರು ಇಂದು ವಿಡಿಯೋ ಕಾನ್ಸರೆನ್ಸ್(Video Conference)ಮೂಲಕ ಸುಮಾರು 51,000 ಯುವಕರಿಗೆ ನೇಮಕಾತಿ ಪತ್ರಗಳನ್ನು(Appointment Letter)ವಿತರಣೆ ಮಾಡಲಿದ್ದಾರೆ.

ಪಿಎಂಒ ಮಾಹಿತಿಯ ಅನುಸಾರ, ರೋಜ್‌ಗಾರ್ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದು, ವೇಗವಾಗಿ ತನ್ನ ಗುರಿಯನ್ನು ತಲುಪುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಯುವಜನ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸುವಿಕೆಗೆ ಅರ್ಥಪೂರ್ಣ ಅವಕಾಶವನ್ನು ರೋಜ್‌ಗಾರ್ ಮೇಳ ಮಾಡಿಕೊಡುತ್ತಿದೆ.ಇಂದು ವಿಡಿಯೋ ಕಾನ್ಸರೆನ್ಸ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಯವರು ಸುಮಾರು 51,000 ಯುವಕರಿಗೆ ನೇಮಕಾತಿ (Appointment)ಪತ್ರಗಳನ್ನು ವಿತರಣೆ ಮಾಡಲಿದ್ದಾರೆ.ಇದರ ನಂತರ ಹೊಸದಾಗಿ ನೇಮಕಗೊಂಡ ಯುವಕರನ್ನುದ್ದೇಶಿಸಿ ಮಾತನಾಡಲಿರುವ ಕುರಿತು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಮಾಹಿತಿ ನೀಡಿದೆ.

ರೋಜ್‌ಗಾರ್ ಮೇಳವು ದೇಶದಾದ್ಯಂತ 43 ಸ್ಥಳಗಳಲ್ಲಿ ಜರುಗಲಿದ್ದು, ಈ ಉಪಕ್ರಮವನ್ನು ಬೆಂಬಲಿಸುವ ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳಲ್ಲಿ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿವೆ. ದೇಶಾದ್ಯಂತ ಆಯ್ಕೆಯಾದ ಹೊಸ ನೇಮಕಾತಿ ಪ್ರಕ್ರಿಯೆಗೆ ಆಯ್ಕೆಯಾದವರನ್ನು ಕುಟುಂಬ ಕಲ್ಯಾಣ, ಪರಮಾಣು ಶಕ್ತಿ ಇಲಾಖೆ, ರೈಲ್ವೆ ಸಚಿವಾಲಯ, ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಗೃಹ ಸಚಿವಾಲಯ ಸೇರಿದಂತೆ ಇತರೆ ಇಲಾಖೆಗೆ ಸೇರ್ಪಡೆ ಮಾಡಲಾಗುತ್ತದೆ. ಇದಲ್ಲದೇ, ಹಣಕಾಸು ಸೇವೆಗಳ ಇಲಾಖೆ, ಅಂಚೆ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ರಕ್ಷಣಾ ಸಚಿವಾಲಯ, ಕಂದಾಯ ಇಲಾಖೆ, ಆರೋಗ್ಯ ಸಚಿವಾಲಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ

ಇದನ್ನೂ ಓದಿ: Arecanut Growers: ಈ ಸಹಾಯಧನದ ನಿರೀಕ್ಷೆಯಲ್ಲಿದ್ದಾರೆ ಅಡಿಕೆ ಬೆಳೆಗಾರರು – ಸರ್ಕಾರ ಹೇಳಿದ್ದೇನು?

Leave A Reply

Your email address will not be published.