Home latest Actor Darshan:ಕಾವೇರಿ ಹೋರಾಟದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್ – ನಟನ ವಿರುದ್ಧ ತಿರುಗಿಬಿದ್ದ...

Actor Darshan:ಕಾವೇರಿ ಹೋರಾಟದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್ – ನಟನ ವಿರುದ್ಧ ತಿರುಗಿಬಿದ್ದ ರೈತರು

Actor Darshan
Image source Credit: news 18

Hindu neighbor gifts plot of land

Hindu neighbour gifts land to Muslim journalist

Actor Darshan Controversy Statement: ಕಾವೇರಿ ಪ್ರತಿಭಟನೆ(Cauvery Dispute)ವೇಳೆ ನಟ ದರ್ಶನ ವಿವಾದಾತ್ಮಕ ಹೇಳಿಕೆ ನೀಡಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.ಹೀಗಾಗಿ, ಮಂಡ್ಯದಲ್ಲಿ ರೈತ ಸಂಘಟನೆಗಳು ನಟ ದರ್ಶನ್ ವಿರುದ್ದ ಗರಂ ಆಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಡ್ಯದ(Mandya)ವಿಶ್ವೇಶ್ವರಯ್ಯ ಪ್ರತಿಮೆ ಎದುರು ರೈತ ಪರ ಸಂಘಟನೆಗಳು ಕಾವೇರಿ ನೀರು ಹಂಚಿಕೆ ವಿಚಾರವಾಗಿ ಪ್ರತಿಭಟನೆ ನಡೆಸಲು ಬೆಂಬಲ ನೀಡುವ ಸಲುವಾಗಿ ನಟ ದರ್ಶನ್ ಅವರನ್ನು ಕರೆಸಲಾಗಿದ್ದು, ಆದರೆ,ಈ ವೇಳೆ ನಟ ದರ್ಶನ್ ನೀಡಿರುವ ಹೇಳಿಕೆ(Actor Darshan Controversy Statement) ಭಾರೀ ವಿವಾದಕ್ಕೆ ಕಾರಣವಾಗಿದೆ.

ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿ ಪ್ರತಿಭಟನೆಗೆ ಸಾಥ್ ನೀಡಿದ್ದ ನಟ ದರ್ಶನ್, ” ಮೊದ್ಲು ಕಾಂಟ್ರವರ್ಸಿ ಬಗ್ಗೆ ಮಾತಾಡೋಣ ಚಿನ್ನ ಎಂದು ಮಾತು ಆರಂಭಿಸಿ, ಇವತ್ತು ಕನ್ನಡ ಸಿನಿಮಾ ನಟರು ಹೋರಾಟಕ್ಕೆ ಬರುತ್ತಿಲ್ಲ ಎಂದು ಹೋರಾಟಗಾರರು ಹೇಳ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಕೂಡ ಆಗುತ್ತಿವೆ. ಆದರೆ ಮೊನ್ನೆ ತಮಿಳು ಸಿನಿಮಾಗಳನ್ನು ನೋಡಿ ಅವರಿಗೆ ಭರ್ಜರಿ ಲಾಭ ಮಾಡಿಕೊಟ್ಟಿದ್ದಾರೆ. ಕನ್ನಡಿಗರು ಕನ್ನಡ ಸಿನಿಮಾಗಳನ್ನು ನೋಡೋದಿಲ್ಲ ಅಷ್ಟೇ ಅಲ್ಲ, ಕನ್ನಡ ಸಿನಿಮಾಗಳನ್ನು ಗೆಲ್ಲಿಸೋದಿಲ್ಲ. ಆದರೆ ಅದಕ್ಕೆ ಬರಲಿಲ್ಲ ಇದಕ್ಕೆ ಬರಲಿಲ್ಲ ಅಂತಾ ನಟರನ್ನು ಟ್ರೋಲ್ ಮಾಡೋದನ್ನು ಬಿಡೋದಿಲ್ಲ. ಮೊನ್ನೆ ಬಿಡುಗಡೆಯಾದ ತಮಿಳು ಸಿನಿಮಾವನ್ನು ಒಬ್ಬ 6 ಕೋಟಿಗೆ ಖರೀದಿ ಮಾಡಿ ಕರ್ನಾಟಕದಲ್ಲಿ 36 ಕೋಟಿ ಲಾಭ ಮಾಡಿಸಿದ್ದಾರೆ. ಹಾಗಾದರೆ ಆ ಸಿನಿಮಾ ಇಲ್ಲಿ ತಮಿಳಿನವರು ನೋಡಿದ್ರಾ ಸ್ವಾಮಿ? ಕನ್ನಡದವರೇ ನೋಡಿರೋದು. ಕನ್ನಡ ಸಿನಿಮಾವನ್ನು ಕಡೆಗಣಿಸಿ ತಮಿಳು ಸಿನಿಮಾಗಳನ್ನು ಹೆಚ್ಚು ನೋಡಿ ಅವರ ಸಿನಿಮಾಗಳನ್ನು ಗೆಲ್ಲಿಸ್ತಿರಲ್ಲ ಯಾಕೆ ಸ್ವಾಮಿ?” ಎಂದು ನಟ ದರ್ಶನ್ ಪ್ರತಿಭಟನೆ ವೇಳೆ ಪ್ರಶ್ನೆ ಮಾಡಿದ್ದಾರೆ.

ಕಾವೇರಿ ಹೋರಾಟದ ಬಗ್ಗೆ ಮಾತಾಡುವುದರ ಬದಲಿಗೆ ರೈತರ ಮೇಲೆ ಕ್ಲಾಸ್ ತೆಗೆದುಕೊಂಡಿದ್ದರಿಂದ ರೈತರು ಕುಪಿತರಾಗಿದ್ದಾರೆ. ಕನ್ನಡಿಗರಾಗಿ ಕನ್ನಡ ಸಿನಿಮಾ ನೋಡಿದ್ದರೆ ಸಮಸ್ಯೆ ಬಂದಾಗ ಕಷ್ಟ ಕಾಲದಲ್ಲಿ ಕನ್ನಡದ ನಟರು ಜೊತೆಗೆ ಸಾಥ್ ನೀಡುತ್ತಾರೆ. ತಮಿಳು ಸಿನಿಮಾಕ್ಕೆ 36ಕೋಟಿ ಲಾಭ ಮಾಡಿಕೊಟ್ರಿ ಆದರೆ ಈಗ ಅವರು ಕಾವೇರಿ ಬಗ್ಗೆ ಮಾತಾಡ್ತಾರಾ? ಒಂದು ಟ್ವೀಟ್ ಮಾಡಿದ್ದಾರಾ? ಈಗ ಕಾವೇರಿಗೆ ಶಿವಣ್ಣ ಬರಲಿಲ್ಲ, ದರ್ಶನ ಬರಲಿಲ್ಲ, ಯಶ್ ಬರಲಿಲ್ಲ ಅಂತಾ ಟ್ರೋಲ್ ಮಾಡಿ ಕಿಡಿ ಕಾರುತ್ತಿದ್ದಾರೆ. ಆದರೆ ನಾವು ಈಗ ಮಾತ್ರ ಕಾಣೋದಾ? ಎಂದು ದರ್ಶನ್ ಪ್ರಶ್ನೆ ಮಾಡಿದ್ದಾರೆ. ನಟ ದರ್ಶನ್ ಆಡಿದ ಈ ಮಾತು ವಿವಾದಕ್ಕೆ ಕಾರಣವಾಗಿ ದರ್ಶನ ವಿರುದ್ಧ ರೈತ ಸಂಘಟನೆಗಳು ಘೋಷಣೆ ಕೂಗಿ ಕ್ಷಮೆ ಯಾಚಿಸಲು ಒತ್ತಾಯ ಮಾಡಿದ ಘಟನೆ ನಡೆದಿದೆ.

” ನಾವು ತಿಂಗಳಿಂದ ಹೋರಾಟ ಮಾಡುತ್ತಿದ್ದು, ನಟರಿಂದ ಹೋರಾಟಕ್ಕೆ ಬಲ ಸಿಗುತ್ತೆ ಎಂದು ಕರೆಸಿದ್ರೆ ಬೇಜವಾಬ್ದಾರಿತನದ ಹೇಳಿಕೆ ನೀಡೋದಾ? ಹೋರಾಟಕ್ಕೆ ನಿಮ್ಮ ಬೆಂಬಲ ಬೇಕು ಅಂತಲೇ ನಾವು ಆಹ್ವಾನ ನೀಡಿದ್ದೆವು. ಆದರೆ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತಾಡುವುದು ಸರಿಯೇ? ಒಬ್ಬ ಜವಾಬ್ದಾರಿಯುತ ನಟನಾಗಿ ಹೋರಾಟಕ್ಕೆ ದನಿಗೂಡಿಸಬೇಕಾಗಿತ್ತೆ ಹೊರತು ರೈತರನ್ನೇ ಅವಮಾನ ಮಾಡುತ್ತಿರುವುದು ಎಷ್ಟು ಸರಿ?” ಎಂದು ರೈತ ಸಂಘ ಆಕ್ರೋಶ ವ್ಯಕ್ತಪಡಿಸಿ ನಟ ದರ್ಶನ್ ರೈತರನ್ನು ಅವಮಾನಿಸಿ ಮಾತಾಡಿರುವುದಕ್ಕೆ ಕ್ಷಮೆ ಕೇಳುವಂತೆ ರೈತರು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: Suicide at BJP MLA’s house: ಬಿಜೆಪಿ ಶಾಸಕನ ಮನೆಯಲ್ಲೇ 24ರ ಯುವಕ ಆತ್ಮಹತ್ಯೆಗೆ ಶರಣು – ಕಾರಣ ಕೇಳಿದ್ರೆ ನೀವೇ ಶಾಕ್ !!