School Holiday: ರಾಜ್ಯದ ಈ ಶಾಲೆಗಳಿಗೆ ದಸರಾ, ಬೇಸಿಗೆ ರಜೆ ಕ್ಯಾನ್ಸಲ್‌!

ರಾಜ್ಯ ಸರಕಾರವು ರಾಜ್ಯದ ಶಾಲೆಗಳಿಗೆ ಈ ಬಾರಿ ದಸರಾ, ಬೇಸಿಗೆ ರಜೆಯನ್ನು ಕಡಿತಗೊಳಿಸಿದೆ. ಈ ನಡೆಯಿಂದ ಶಿಕ್ಷಕರು ತೀವ್ರ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ. ಅ.2 ರಿಂದ ಅ.29 ರವರೆಗೆ ನೀಡಲಾಗುತ್ತಿದ್ದ ದಸರಾ ರಜೆಗಳನ್ನು ಕೊರೊನಾ ಸಮಯದಲ್ಲಿ ಕಡಿತಗೊಳಿಸಲಾಗಿತ್ತು.

 

ಆದರೆ ಈಗ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದ್ದರೂ ಕೂಡಾ ಸರಕಾರ ಹಿಂದಿನ ರೀತಿಯ ಕಡಿತ ನೀತಿ ಅನುಸರಿಸುತ್ತಿದೆ. ಯಾವುದೇ ಬದಲಾವಣೆ ಇನ್ನೂ ತಂದಿಲ್ಲ.

ಅ. 8 ರಿಂದ 24 ರವರೆಗೆ ರಜೆಯೆಂದು ಸಾಮಾನ್ಯ ಶಾಲೆಗಳಿಗೆ ಸೀಮಿತಗೊಳಿಸಿದೆ. ವಿಶೇಷ ಶಾಲೆಯ ಮಕ್ಕಳಿಗೆ ದಸರಾ ರಜೆಯನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ. ಈ ಮೂಲಕ ದಸರಾ ರಜೆಯ ಕಡಿತದ ಕಾರಣ ಶಿಕ್ಷಕರು ನಿರಂತರ ಕರ್ತವ್ಯ ಮಾಡಬೇಕಾಗಿದೆ.

Leave A Reply

Your email address will not be published.