Deadly Accident: ಭೀಕರ ರಸ್ತೆ ಅಪಘಾತ, ಇನ್ನೋವಾ ಕಾರು ಮರಕ್ಕೆ ಡಿಕ್ಕಿ! ಐವರು ಸರಕಾರಿ ಅಧಿಕಾರಿಗಳು ಸ್ಥಳದಲ್ಲೇ ಸಾವು!!!

Road Accident: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಈ ಅಪಘಾತದಲ್ಲಿ ಐವರು ಆಡಳಿತ ಅಧಿಕಾರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಮಧ್ಯಪ್ರದೇಶದ ಶಹದೋಲ್‌ನ ಘಂಗುಟಿ ಪೋಸ್ಟ್‌ ಬಳಿ ಈ ದಾರುಣ ಘಟನೆ ನಡೆದಿದೆ.

 

ಶಹದೋಲ್-ಉಮಾರಿಯಾ ಹೆದ್ದಾರಿಯ ಮಜ್ಗಾಂವಾ ಬಳಿ ವೇಗವಾಗಿ ಬಂದ ಇನ್ನೋವಾ ಮರಕ್ಕೆ ಡಿಕ್ಕಿ ಹೊಡೆದಿದ್ದು, ಇದರಲ್ಲಿ 5 ಜನರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಎರಡು ಮಂದಿ ಚಿಕಿತ್ಸೆ ಸಂದರ್ಭ ಸಾವಿಗೀಡಾಗಿದ್ದಾರೆ. ಮೃತರ ಶವಗಳನ್ನು ಉಮಾರಿಯಾ ಜಿಲ್ಲೆಯ ಪಾಲಿಯಲ್ಲಿರಿಸಲಾಗಿದೆ.

ಶಹದೋಲ್ ಜಿಲ್ಲೆಯ ಆಡಳಿತ ಅಧಿಕಾರಿಗಳು ಸತ್ತವರ ಪೈಕಿ ಇದ್ದಾರೆ. ಅಪಘಾತಕ್ಕೆ ಸಂಭವಿಸಿದ್ದ ಕಾರ್‌ನಲ್ಲಿದ್ದ ಅಧಿಕಾರಿಗಳು ಮಿನರಲ್ ಇನ್ಸ್‌ಪೆಕ್ಟರ್ ಪುಷ್ಪೇಂದ್ರ ತ್ರಿಪಾಠಿ ಅವರ ಸಂಬಂಧಿ ಅಮಿತ್ ಶುಕ್ಲಾ ಅವರ ಜನ್ಮದಿನವನ್ನು ಆಚರಿಸಿ ರೇವಾದಿಂದ ಹಿಂತಿರುಗುತ್ತಿದ್ದರು. ಈ ವೇಳೆ ರಾತ್ರಿ 1.30ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸತ್ತವರ ಪೈಕಿ ಶಹದೋಲ್‌ ಜಿಲ್ಲೆಯ ಆಡಳಿತ ಅಧಿಕಾರಿಗಳು ಇದ್ದರು ಎನ್ನುವ ಕುರಿತು ವರದಿಯಾಗಿದೆ. ಕಾರಿನಲ್ಲಿದ್ದ ಅಧಿಕಾರಿಗಳು ಜನ್ಮದಿನವನ್ನು ಆಚರಿಸಿ ರೇವಾದಿಂದ ಹಿಂತಿರುಗುತ್ತಿದ್ದ ಸಂದರ್ಭ, ರಾತ್ರಿ 1.30 ಕ್ಕೆ ಈ ಭೀಕರ ಅಪಘಾತ ನಡೆದಿದೆ.

ಪುಷ್ಪೇಂದ್ರ ತ್ರಿಪಾಠಿ ಮಿನರಲ್ ಇನ್ಸ್‌ಪೆಕ್ಟರ್, ಅವ್ನಿಶ್ ದುಬೆ ಜಿಲ್ಲಾ ಸಾರ್ವಜನಿಕ ಸೇವಾ ವ್ಯವಸ್ಥಾಪಕ ಶಾಹದೋಲ್, ಪ್ರಕಾಶ್ ಜಗತ್ ಜಿಲ್ಲಾ ಪಂಚಾಯತ್ ಶಹದೋಲ್, ದಿನೇಶ್ ಸರಿಬಾ ಸಬ್ ಇಂಜಿನಿಯರ್ ಗೊಹ್ಪಾರು ಮತ್ತು ಅಮಿತ್ ಶುಕ್ಲಾ ಮೃತ ವ್ಯಕ್ತಿಗಳು. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ.

 

Leave A Reply

Your email address will not be published.