Cauvery struggle: ಕಾವೇರಿ ಹೋರಾಟಕ್ಕೆ ಬರದ ನಟ-ನಟಿಯ ಚಿತ್ರ ಬ್ಯಾನ್ ?! ಅರೆ ಏನಿದು ಶಾಕಿಂಗ್ ?! ಹೀಗೆ ಹೇಳಿದ್ಯಾರು ?!

Latest news Shocking news Actors and actresses who do not come to Cauvery struggle are banned

Cauvery struggle: ಕಾವೇರಿ ಹೋರಾಟಕ್ಕೆ (Cauvery struggle) ಬರದ ನಟ-ನಟಿಯ ಚಿತ್ರ ಬ್ಯಾನ್ ಆಗಲಿ ಎಂಬ ಹೇಳಿಕೆ ಹೊರಬಿದ್ದಿದೆ. ಅಷ್ಟಕ್ಕೂ ಏನಿದು ಘಟನೆ?! ಈ ಹೇಳಿಕೆ ನೀಡಿದ್ದಾದರೂ ಯಾರು?! ಇಲ್ಲಿದೆ ನೋಡಿ ಮಾಹಿತಿ. ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಅವರು ಈ ಮಾತುಗಳನ್ನಾಡಿದ್ದಾರೆ.

ತಮಿಳುನಾಡಿಗೆ (tamilnaadu) ಕಾವೇರಿ ನೀರು ಬಿಡುವ ವಿಚಾರದ ಹೋರಾಟದಲ್ಲಿ ಸ್ಯಾಂಡಲ್‌ವುಡ್ (sandalwood) ನಟ, ನಟಿಯರು ಭಾಗಿಯಾಗುತ್ತಿಲ್ಲ. ಕನ್ನಡ ಚಿತ್ರರಂಗದ ನಟ, ನಟಿಯರು ಈಗಲಾದರೂ ಹೊರಬರಲಿ. ಕಾವೇರಿ ನದಿ ನೀರಿನ ವಿಚಾರದಲ್ಲಿ ನಟನಟಿಯರು ಸ್ವಯಂ ಪ್ರೇರಿತವಾಗಿ ಹೋರಾಟದಲ್ಲಿ ಭಾಗಿಯಾಗಬೇಕು. ಕಾವೇರಿ ಹೋರಾಟದಲ್ಲಿ ಯಾರು ಭಾಗಿಯಾಗುವುದಿಲ್ಲವೋ ಅವರ ಚಿತ್ರಗಳನ್ನು ಜನರು ಬಹಿಷ್ಕರಿಸಬೇಕು ಎಂದು ಆಗ್ರಹಿಸಿದರು.

ಕಾವೇರಿ (kaaveri) ತೀರದ ನಟರು ಎಲ್ಲಿದ್ದಾರೆ? ಇಲ್ಲಿಯ ನಟ ನಟಿಯರ ಚಿತ್ರಗಳನ್ನು ಕನ್ನಡದವರೇ (kannada) ವೀಕ್ಷಣೆ ಮಾಡುವುದು. ಕಾವೇರಿ ತೀರದ ಭಾಗದವರೇ ಹೆಚ್ಚಿನವರು ಚಿತ್ರರಂಗದಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದವರು ಯಾರು ಹೀರೋಗಳಿಲ್ಲ. ಹಾಗಾಗಿ ಹೆಚ್ಚಿನ ನಟರು ಈ ಭಾಗದವರೇ ಆಗಿದ್ದು, ಚಿತ್ರನಟ- ನಟಿಯರು ಹೋರಾಟಕ್ಕಿಳಿಯಬೇಕು ಎಂದರು.

 

ಇದನ್ನು ಓದಿ: Kapil Dev: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಕಿಡ್ನಾಪ್ !! ಗಂಭೀರ್ ಹಂಚಿಕೊಂಡ್ರು ಶಾಕಿಂಗ್ ವಿಡಿಯೋ!!

Leave A Reply

Your email address will not be published.