KFD Forest Watcher Jobs: ಕರ್ನಾಟಕ ಅರಣ್ಯ ಇಲಾಖೆಯ 310 ಹುದ್ದೆಗೆ ಅರ್ಜಿ ಆಹ್ವಾನ

KFD Forest Watcher Jobs: ಕರ್ನಾಟಕ ಅರಣ್ಯ ಇಲಾಖೆ ಅರಣ್ಯ ವೀಕ್ಷಕ (KFD Forest Watcher Jobs) ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 310 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 26 ಕೊನೆಯ ದಿನವಾಗಿದೆ. ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಅರಣ್ಯ ಇಲಾಖೆಯ https://aranya.gov.in/ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

 

ವಿದ್ಯಾರ್ಹತೆ: ಅಭ್ಯರ್ಥಿ ಎಸ್.ಎಸ್.ಎಲ್.ಸಿ. ಅಥವಾ ಎಸ್.ಎಸ್.ಎಲ್.ಸಿ. ತತ್ಸಮಾನ ಅರ್ಹತೆ ಹೊಂದಿರಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ, ಇಲಾಖಾ ವೆಬ್‌ಸೈಟ್‌ನಿಂದ ಮುದ್ರಿತ ಅರ್ಜಿ ಶುಲ್ಕದ ಚಲನ್ ಪ್ರತಿಯನ್ನು ತೆಗೆದುಕೊಂಡು, ಇ-ಪಾವತಿ ಸೌಲಭ್ಯವಿರುವ ಭಾರತೀಯ ಅಂಚೆ ಕಚೇರಿಯಲ್ಲಿ ಈ ಪ್ರತಿಯನ್ನು ಹಾಜರುಪಡಿಸಿ, ಪ್ರವರ್ಗವಾರು ನಿಗದಿತ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕವನ್ನು ಪಾವತಿಸಬೇಕು.

ವಯೋಮಿತಿ: ಅಭ್ಯರ್ಥಿಗಳು ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಅಧಿಸೂಚನೆಯ ದಿನಾಂಕಕ್ಕೆ ಈ ಕೆಳಗಿನಂತೆ ಗರಿಷ್ಠ ವಯೋಮಿತಿಯೊಳಗೆ ಸಾಮಾನ್ಯ ಅಭ್ಯರ್ಥಿ ಗರಿಷ್ಠ ವಯೋಮಿತಿ 30 ವರ್ಷ. ಪವರ್ಗ 2ಎ, 2ಬಿ, 3ಎ, 3ಬಿ ಹಿಂದುಳಿದ ಪ್ರವರ್ಗಗಳು ಗರಿಷ್ಠ ವಯೋಮಿತಿ 32 ವರ್ಷ. ಪರಿಶಿಷ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಗರಿಷ್ಠ ವಯೋಮಿತಿ 33 ವರ್ಷ. ಮಾಜಿ ಸೈನಿಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿಯಮಾನುಸಾರ ನಿವೃತ್ತಿ/ ಡಿಮೊಬಿಲೈಸೇಷನ್ ಅಥವಾ ರಿಟ್ರೆಂಚ್‌ಮೆಂಟ್‌ ಹೊಂದಿದ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಯಾವ ಪ್ರವರ್ಗಕ್ಕೆ ಸೇರಿರುತ್ತಾರೆಯೊ ಈ ಮೇಲಿನ ಪ್ರವರ್ಗಕ್ಕೆ ನಿಗದಿಪಡಿಸಿದ ಗರಿಷ್ಠ ವಯೋಮಿತಿಗೆ ಅವರು ಎಷ್ಟು ವರ್ಷ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳಿಗೆ ಮೂರು ವರ್ಷ ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗುವುದು.

Leave A Reply

Your email address will not be published.