ಗಣೇಶ ಚತುರ್ಥಿ ಮೆರವಣಿಗೆ ಸಂದರ್ಭ; ಬುರ್ಖಾ ಧರಿಸಿ ನೃತ್ಯ, ಮುಂದೇನಾಯ್ತು? ವೀಡಿಯೋ ವೈರಲ್‌!!!

Burqa Clad Man Arrest in Tamil Nadu: ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ವೇಳೆ ಬುರ್ಖಾ ಧರಿಸಿ ನೃತ್ಯ ಮಾಡಿದ ವ್ಯಕ್ತಿಯೋರ್ವನನ್ನು ಪೊಲೀಸರು ಹಿಡಿದಿರುವ ಘಟನೆಯೊಂದು ನಡೆದಿದೆ. ಈ ಘಟನೆ ತಮಿಳುನಾಡಿನ ವೆಲ್ಲೂರ್‌ನಲ್ಲಿ ನಡೆದಿದೆ. ಬುರ್ಖಾಧಾರಿ ವ್ಯಕ್ತಿಯೋರ್ವ ನೃತ್ಯ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಸೆ.21 ರಂದು ಈ ಘಟನೆ ನಡೆದಿದ್ದು, ಇದರ ವಿರುದ್ಧ ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ದೂರು ನೀಡಲಾಗಿತ್ತು.

ತನಿಖೆ ಮಾಡಿದಾಗ, ವೀಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ ವಿರುದಂಪಟ್ಟು ನಿವಾಸಿ ಅರುಣ್‌ ಕುಮಾರ್‌ ಎಂದು ತಿಳಿದು ಬಂದಿತ್ತು. ಹಿಂದೂ ಧರ್ಮದ ಉತ್ಸವ ಸಂದರ್ಭ ಬುರ್ಖಾ ಧರಿಸಿ ಕುಣಿಯುವ ಮೂಲಕ ಇನ್ನೊಂದು ಧರ್ಮದ ಭಾವನೆಗಳನ್ನು ಕೆರಳಿಸಲು ಪ್ರಯತ್ನ ಪಟ್ಟಿದ್ದಾನೆ ಎಂದು ಆರೋಪ ಮಾಡಲಾಗಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಆರೋಪದಡಿ ಅರುಣ್‌ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಈ ರೀತಿ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯ ಮಾತನ್ನು ಪೊಲೀಸರು ನೀಡಿದ್ದಾರೆ.

Leave A Reply

Your email address will not be published.